ಮೆಚ್ಯೂರ್ ಆದರೂ ಕ್ಲೈಮ್ ಮಾಡದ LIC ಹಣಕ್ಕೆ ಏನಾಗುತ್ತದೆ? ನಾಮಿನಿಗಳು ಮಾಡಬೇಕಾದೇನು
ಪ್ರತಿ ವರ್ಷ, ಲಕ್ಷಾಂತರ LIC ಪಾಲಿಸಿಗಳು ಮೆಚ್ಯೂರ್ ಆಗುತ್ತವೆ. ಸಾವಿರಾರು ಪಾಲಿಸಿಗಳನ್ನ ಕ್ಲೈಮ್ ಮಾಡ್ತಾರೆ. ಆದ್ರೆ, ಕೆಲವು ಸಂದರ್ಭಗಳಲ್ಲಿ ಇನ್ಶೂರೆನ್ಸ್ ಹಣವನ್ನ ಕ್ಲೈಮ್ ಮಾಡೋದನ್ನು ಮಿಸ್ ಮಾಡ್ತಾರೆ. ಕ್ಲೈಮ್ ಆಗದ ಈ ಹಣಕ್ಕೆ ಏನಾಗುತ್ತೆ?
ಸರ್ಕಾರಿ ಇನ್ಶೂರೆನ್ಸ್ ಕಂಪನಿ ಎಲ್‌ಐಸಿ ಹತ್ರ ಇರೋ ಕ್ಲೈಮ್ ಆಗದ ಹಣ ಸಾಮಾನ್ಯವಾಗಿ ಪಾರ್ಲಿಮೆಂಟ್‌ನಲ್ಲಿ ಚರ್ಚೆಯ ವಿಷಯ ಆಗುತ್ತೆ. ಇದ್ರಲ್ಲಿ, ಪಾಲಿಸಿ ಹೊಂದಿರುವವರು ಕ್ಲೈಮ್ ಮಾಡದ ಹಣದ ಬಗ್ಗೆ ಸಂಸದರು ಆಗಾಗ್ಗೆ ಪ್ರಶ್ನೆ ಕೇಳ್ತಾರೆ. ಇತ್ತೀಚೆಗೆ ಮುಗಿದ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸಿದ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ರು. ಅದನ್ನ ಪರಿಹರಿಸಲು ತೆಗೆದುಕೊಂಡ ಕ್ರಮಗಳನ್ನೂ ವಿವರಿಸಿದ್ರು.
ಕಳೆದ 5 ವರ್ಷಗಳಲ್ಲಿ, ಮೆಚ್ಯೂರಿಟಿ ನಂತರ ಹಾಗೂ ಎಲ್‌ಐಸಿ ದಾರನ ಸಾವಿನ ನಂತರ ಕ್ಲೈಮ್ ಆಗದ ಹಣದಿಂದ ಎಲ್‌ಐಸಿ ಸಂಸ್ಥೆಯ ಹತ್ತಿರ ಗಣನೀಯ ಪ್ರಮಾಣದ ಕ್ಲೈಮ್ ಆಗದ ಹಣ ಸೇರಿದೆ. ಸಾಕಷ್ಟು ಪಾಲಿಸಿ ಹೊಂದಿರುವವರು ಅಥವಾ ಅವರ ನಾಮಿನಿಗಳು ಮೆಚ್ಯೂರಿಟಿಯಾದ ನಂತರ ಅಥವಾ ಸಾವಿನ ನಂತರ ಎಲ್‌ಐಸಿ ಹಣವನ್ನು ಕ್ಲೈಮ್ ಮಾಡೋದನ್ನ ಮಿಸ್ ಮಾಡಿದ್ದಾರೆ. ಹೀಗಾಗಿ ಎಲ್‌ಐಸಿ ಬಳಿ ಕ್ಲೈಮ್ ಆಗದ ಹಣ ಹೆಚ್ಚಾಗೋಕೆ ಕಾರಣವಾಗಿದೆ..
ಸರ್ಕಾರ ಮತ್ತು LIC ಕ್ಲೈಮ್ ಆಗದ ಹಣವನ್ನ ಸರಿಯಾದ ವ್ಯಕ್ತಿಗಳು ಕ್ಲೈಮ್ ಮಾಡೋದನ್ನ ಖಚಿತಪಡಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡ್ತಿದ್ದಾರೆ. ಅರ್ಹ ನಾಮಿನಿಗಳಿಂದ ಕ್ಲೈಮ್ ರಿಕ್ವೆಸ್ಟ್‌ಗಳು ಬಂದ ತಕ್ಷಣ, ಬಾಕಿ ಇರೋ ಹಣವನ್ನ ಕೊಡಲಾಗುತ್ತೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಆಗದ ಹಣವನ್ನ 2016ರ ನಿಯಮಗಳ ಪ್ರಕಾರ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತೆ. ಅರ್ಹ ನಾಮಿನಿಗಳು ಗರಿಷ್ಠ 25 ವರ್ಷಗಳ ಒಳಗೆ ಈ ಹಣವನ್ನ ಪಡೆಯಬಹುದು.
LIC ಕ್ಲೈಮ್ ನೋಟಿಫಿಕೇಶನ್: ಇನ್ಶೂರೆನ್ಸ್ ಕ್ಲೈಮ್ ಮಾಡೋದಕ್ಕೆ ನೆನಪು ಮಾಡಲು ಎಲ್‌ಐಸಿ ಸಂಸ್ಥೆ ಲೆಟರ್‌ಗಳನ್ನ ಪೋಸ್ಟ್ ಮೂಲಕ ಮತ್ತು ಇಮೇಲ್ ಮತ್ತು ಎಸ್‌ಎಂಎಸ್‌ನ್ನು ಮೂಲಕ ಕಳಿಸ್ತಾರೆ. ಹಾಗೆಯೇ LIC ಅಧಿಕಾರಿಗಳು ಪಾಲಿಸಿ ಹೊಂದಿರುವವರ ಮನೆಗಳಿಗೆ ನೇರವಾಗಿ ಹೋಗಿ ಸಹಾಯ ಮಾಡ್ತಾರೆ. ಪ್ರಿಂಟ್ ಮತ್ತು ಡಿಜಿಟಲ್ ಮೀಡಿಯಾಗಳಲ್ಲಿ ಜಾಹೀರಾತುಗಳನ್ನ ಕೊಡ್ತಾರೆ. ರೇಡಿಯೋ ಜಾಹೀರಾತಿನ ಮೂಲಕ ಪಾಲಿಸಿ ಹೊಂದಿರೋರಿಗೆ ಅವರ ಬಾಕಿ ಹಣವನ್ನ ಪಡೆಯುವ ಬಗ್ಗೆ ಅರಿವು ಮೂಡಿಸಲಾಗುತ್ತೆ. ಬೇರೆ ಬೇರೆ ವಸತಿ ಪ್ರದೇಶಗಳಲ್ಲಿ ಪಾಲಿಸಿ ಸೇವೆಗೆ ಸಂಬಂಧಿಸಿದ ಕ್ಯಾಂಪ್‌ಗಳನ್ನೂ LIC ಆಯೋಜಿಸುತ್ತೆ.
LIC ಮೆಚ್ಯೂರಿಟಿ: ಕ್ಲೈಮ್ ಆಗದ ಇನ್ಶೂರೆನ್ಸ್ ಹಣವನ್ನ ಕ್ಲೈಮ್ ಮಾಡೋದಕ್ಕೆ ಬೇಕಾದ ಮಾಹಿತಿ ಮತ್ತು ಡಾಕ್ಯುಮೆಂಟ್‌ಗಳನ್ನ LIC ತನ್ನ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಿದೆ. NEFT ಡೀಟೇಲ್ಸ್‌ನ ಆನ್‌ಲೈನ್ ರೆಜಿಸ್ಟ್ರೇಷನ್ LIC ಪೋರ್ಟಲ್ ಮೂಲಕ ಸಿಗುತ್ತೆ.
ಕ್ಲೈಮ್ ಆಗದ ಹಣ
ಇನ್ಶೂರೆನ್ಸ್ ಕ್ಲೈಮ್ ಮಾಡೋ ಪ್ರಕ್ರಿಯೆಯನ್ನ ಸುಲಭಗೊಳಿಸೋ ಪ್ರಯತ್ನವನ್ನೂ LIC ಮಾಡ್ತಿದೆ. ಪಾಲಿಸಿ ಹೊಂದಿರೋರ ಅನುಕೂಲಕ್ಕಾಗಿ ಯಾವುದೇ LIC ಬ್ರಾಂಚ್‌ನಲ್ಲಿ ಕ್ಲೈಮ್ ಅರ್ಜಿಯನ್ನ ಸಲ್ಲಿಸಬಹುದು. NEFT ಡೀಟೇಲ್ಸ್ ಮೂಲಕ ಕ್ಲೈಮ್‌ಗಳನ್ನ ಪರಿಹರಿಸಬಹುದು.
LIC ಏಜೆಂಟ್‌ಗಳು
ಕ್ರೆಡಿಟ್ ಬ್ಯೂರೋ ಏಜೆನ್ಸಿಗಳು ಪಾಲಿಸಿ ಹೊಂದಿರೋರ ಸಂಪರ್ಕ ಮಾಹಿತಿಯನ್ನ ಅಪ್‌ಡೇಟ್ ಮಾಡೋಕೆ ಸಹಾಯ ಮಾಡುತ್ತೆ. ಏಜೆಂಟ್‌ಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಬಾಕಿ ಇರೋ ಹಣವನ್ನ ಪರಿಹರಿಸೋಕೆ ಸಹಾಯ ಮಾಡ್ತಾರೆ. ಗ್ರಾಮೀಣ ಮತ್ತು ಹೊರವಲಯದ ಪ್ರದೇಶಗಳಲ್ಲಿರೋ ಪಾಲಿಸಿ ಹೊಂದಿರೋರಿಗೆ ಹೆಚ್ಚಿನ ಗಮನ ಕೊಡಲಾಗುತ್ತದೆ.