ಶನಿವಾರ ಉಪ್ಪು ಖರೀದಿಸಬಾರದು, ಅಪ್ಪಿ ತಪ್ಪಿಯೂ ಬೇರೆಯವರಿಗೆ ಕೊಡಬಾರದು ಏಕೆ?
ಶನಿವಾರ ಯಾರಿಗಾದ್ರೂ ಉಪ್ಪು ದಾನ ಮಾಡಿದ್ರೆ ಏನಾಗುತ್ತೆ ಅಂತ ನೋಡೋಣ…
ಹಿಂದೂ ಶಾಸ್ತ್ರದ ಪ್ರಕಾರ ಪ್ರತಿ ದಿನವನ್ನು ಒಬ್ಬೊಬ್ಬ ದೇವರಿಗೆ ಅರ್ಪಿಸಲಾಗಿದೆ. ಸೋಮವಾರ ಶಿವ, ಮಂಗಳವಾರ ಆಂಜನೇಯ,, ಶುಕ್ರವಾರ ಲಕ್ಷ್ಮಿ, ಶನಿವಾರ ವೆಂಕಟೇಶ್ವರ ಸ್ವಾಮಿ ಹೀಗೆ.. ಶನಿವಾರ ಶನಿ ದೇವರಿಗೆಂದು. ಶನಿ ದೇವರನ್ನ ಮೆಚ್ಚಿಸಿದ್ರೆ ಒಳ್ಳೇದಾಗುತ್ತೆ ಅಂತ ನಂಬಿಕೆ. ಕೆಲವರು ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನೇ ಹಾಕುತ್ತಾರೆ. ಕೆಲವರು ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ಸಮರ್ಪಿಸುತ್ತಾರೆ. ಹೀಗೆ ಮಾಡಿದ್ರೆ ಶನಿ ವಕ್ರದೃಷ್ಟಿ ತಪ್ಪಿ, ಶುಭ ಫಲ ಸಿಗುತ್ತೆ ಅಂತ ನಂಬುತ್ತಾರೆ. ಹಾಗಾದ್ರೆ, ಶನಿವಾರ ಉಪ್ಪು ದಾನ ಮಾಡಿದ್ರೆ ಏನಾಗುತ್ತೆ ಅಂತ ನೋಡೋಣ…
ಉಪ್ಪು
ಶಾಸ್ತ್ರಗಳ ಪ್ರಕಾರ, ಶನಿವಾರ ಯಾರಿಗೂ ಉಪ್ಪು ದಾನ ಮಾಡ್ಬಾರ್ದು. ಯಾರಿಗಾದ್ರೂ ಉಪ್ಪು ಕೊಟ್ಟರೆ ಮನೇಲಿ ನಷ್ಟ ಆಗುವ ಸಾಧ್ಯತೆ ಹೆಚ್ಚು. ಹೀಗೆ ಉಪ್ಪು ದಾನ ಮಾಡೋದು ಒಳ್ಳೇದಲ್ಲ. ಉಪ್ಪು ದಾನ ಮಾತ್ರ ಅಲ್ಲ, ಉಪ್ಪು ಕೊಳ್ಳೋದೂ ಒಳ್ಳೇದಲ್ಲ. ಹೀಗೆ ಮಾಡಿದ್ರೆ ಅಶುಭ ಆಗುವ ಸಾಧ್ಯತೆ ಹೆಚ್ಚಂತೆ.
ಉಪ್ಪು
ತಪ್ಪಾಗಿ ಶನಿವಾರ ಯಾರಿಗಾದ್ರೂ ಉಪ್ಪು ದಾನ ಮಾಡಿದ್ರೆ ಮನೇಲಿ ಆರ್ಥಿಕ ಸಮಸ್ಯೆ ಬರುತ್ತಂತೆ. ದುಡ್ಡು ಖರ್ಚಾಗಿ, ನಮ್ಮ ಖರ್ಚಿಗೂ ದುಡ್ಡು ಇರಲ್ಲಂತೆ.
ಆರ್ಥಿಕ ನಷ್ಟ ಮಾತ್ರ ಅಲ್ಲ, ಜೀವನದಲ್ಲಿ ಊಹಿಸದ ಸಮಸ್ಯೆಗಳು ಬರಬಹುದು. ಸಾಲಗಳು ಹೆಚ್ಚಾಗಬಹುದು. ಅದಕ್ಕೆ ಈ ತಪ್ಪು ಮಾಡ್ಬಾರದು. ಶನಿವಾರ ಉಪ್ಪು ದಾನ ಮಾಡೋದು, ಕೊಳ್ಳೋದ್ರಿಂದ ಶನಿ ದೇವರ ಕೋಪಕ್ಕೆ ಗುರಿಯಾಗ್ತೀವಿ. ಅದಕ್ಕೆ ಸಮಸ್ಯೆಗಳು ಹೆಚ್ಚಾಗುತ್ತೆ.