ನವದೆಹಲಿ(ಮಾ.19) ಎಸಿ, ರೆಫ್ರಿಜಿರೇಟರ್‌ ಸೇರಿ ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಮುಂಜೂಣಿಯಲ್ಲಿರುವ ವೋಲ್ಟಾಸ್‌ ಹೊಸದಾದ ಮಹಾ ಅಡ್ಜೆಸ್ಟಬಲ್‌ ಇನ್‌ವರ್ಟರ್‌ ಎಸಿಯನ್ನು ಹೊರತಂದಿದೆ. ಭಾರತದಲ್ಲಿ ಬೇಸಿಗೆ ಕಾವು ಇದೀಗ ಏರಿಕೆಯಾಗುತ್ತಿದ್ದು, ಇಂತಹ ವೇಳೆಯಲ್ಲಿ ಗ್ರಾಹಕರಿಗೆ ಹೊಸ ಬಗೆಯ ಎಸಿಯನ್ನು ಕಡಿಮೆ ಬೆಲೆಯಲ್ಲಿ ನೀಡುವುದು ವೋಲ್ಟಾಸ್‌ ಉದ್ದೇಶ.

ವೋಲ್ಟಾಸ್‌ ಮಹಾ ಅಡ್ಜೆಸ್ಟಬಲ್‌ ಇನ್‌ವರ್ಟರ್‌ ಎಸಿ ಹಲವು ಟೋನ್‌ ಆಯ್ಕೆಗಳನ್ನು ಹೊಂದಿದೆ. 1.5ನಿಂದ 2 ಟೋನ್‌ ವರೆಗೆ ವಿವಿಧ ಸಾಮರ್ಥ್ಯದ ಎಸಿಗಳು ಈ ಸರಣಿಯಲ್ಲಿ ಇದ್ದು, ಕೊಠಡಿ ಗಾತ್ರ, ವಾಸ ಮಾಡುವ ಮಂದಿಯ ಸಂಖ್ಯೆಗೆ ಅನುಗುಣವಾಗಿ ಎಸಿಯನ್ನು ಸೆಟ್‌ ಮಾಡಿಕೊಳ್ಳಬಹುದು. ಇದರೊಂದಿಗೆ ಲೈಫ್‌ ಟೈಮ್‌ ಇನ್‌ವರ್ಟರ್‌ ವಾರಂಟಿ, 5 ವರ್ಷ ಸವೀರ್‍ಸ್‌, 0% ಫೈನಾನ್ಸ್‌, ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಕ್ಯಾಶ್‌ಬ್ಯಾಕ್‌ ಸೌಲಭ್ಯಗಳು ಇರಲಿವೆ.

ವೋಲ್ಟಾಸ್ ಕಂಪನಿ ಎಸಿ ಗ್ರಾಹಕರ ಮನ ಗೆದ್ದಿದೆ. ಏರ್‌ಕಂಡೀಶನರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ವೋಲ್ಟಾಸ್ ಇದೀಗ ಇನ್‌ವರ್ಟರ್ ಉತ್ಪಾದನೆಗೂ ಕಾಲಿಟ್ಟಿದೆ. ಈ ಮೂಲಕ ಇನ್‌ವರ್ಟರ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಮುಂದಾಗಿದೆ.