ಬೆಂಗಳೂರು (ಫೆ.24): ಫೆಬ್ರವರಿ ಇನ್ನೂ ಮುಗಿದಿಲ್ಲ, ಇದೇನಪ್ಪಾ ಸೆಖೆ ಎಂದು ಜನ ಈಗಾಗಲೇ ಹೇಳಕ್ಕೆ ಶುರು ಮಾಡಿದ್ದಾರೆ. ಸೆಖೆಗಾಲ ಶುರುವಾಯ್ತು ಅಂದ್ರೆ ಸಾಕು, ಜನರಿಗೆ ಎರಡೇ ವಿಷಯಗಳದ್ದೇ ಚಿಂತೆ, ಚರ್ಚೆ. ಒಂದು ಕೂಲ್ ಡ್ರಿಂಕ್ಸ್ , ಇನ್ನೊಂದು ಕೂಲ್ ಏಸಿ.

ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ಜನಪ್ರಿಯ ಕಂಪನಿ ಪ್ಯಾನಸೋನಿಕ್‌ ಈಗ ಫ್ಯುಚರಿಸ್ಟಿಕ್‌ ಶ್ರೇಣಿಯಲ್ಲಿ ಕನೆಕ್ಟೆಡ್‌ ಏರ್‌ಕಂಡೀಷನರ್‌ಗಳ ಸಂಗ್ರಹ ಬಿಡುಗಡೆ ಮಾಡಿದೆ. 

ಇದನ್ನೂ ನೋಡಿ | ಬೆತ್ತಲೆ ಸೆಲ್ಫಿ, ಫೋಟೋ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇದು ಅಂತಿಂತಹ ಫೋನ್ ಅಲ್ಲ

ಸ್ವಯಂಚಾಲಿತವಾಗಿ ಉಷ್ಣತೆ ನಿಯಂತ್ರಿಸುವ ಜೊತೆಗೆ ಡಸ್ಟ್‌ ಸೆನ್ಸರ್‌ನೊಂದಿಗೆ ಮಾಲಿನ್ಯ ತಡೆಯುತ್ತದೆ. ಬೇಗ ವಾತಾವರಣವನ್ನು ತಂಪಾಗಿಸುವ ಗುಣ ಇದರಲ್ಲಿದೆ, ಎಂದು ಕಂಪನಿಯು ಹೇಳಿದೆ. 

ಇದರಲ್ಲೇನಾದರೂ ಸಮಸ್ಯೆ ಕಂಡುಬಂದರೆ ಸೂಚನೆ ನೀಡುವ ವ್ಯವಸ್ಥೆಯೂ ಇದೆ. ವಾತಾವರಣವನ್ನು ಗ್ರಹಿಸಿ ಯಾವ ಮೋಡ್‌ ಈ ಹವೆಗೆ ಚೆನ್ನಾಗಿರುತ್ತೆ ಅನ್ನೋದನ್ನೂ ಈ ಏಸಿಗಳು ಸೂಚಿಸುತ್ತವೆಯಂತೆ. 

ಇದರ ಬೆಲೆ 35,990 ರು. ನಿಂದ ಆರಂಭವಾಗುತ್ತದೆ.