Asianet Suvarna News Asianet Suvarna News

Nokia Go Earbuds 2+, Go Earbuds 2 Pro 24 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ಲಾಂಚ್!

Nokia Go Earbuds 2+ ಮತ್ತು Nokia Go Earbuds 2 Pro ಎರಡೂ 300mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ಇರುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ.

Nokia Go Earbuds 2 plus Pro Wireless Earphones Launched With 24 Hour Battery Life mnj
Author
Bengaluru, First Published Feb 16, 2022, 4:45 PM IST

Tech Desk: Nokia Go Earbuds 2+ ಮತ್ತು Nokia Go Earbuds 2 Pro ಟ್ರು ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಫೋನ್‌ಗಳು ಮಂಗಳವಾರ ಜಾಗತಿಕವಾಗಿ ಬಿಡುಗಡೆಯಾಗಿವೆ. ನೋಕಿಯಾ ಪರವಾನಗಿ ಪಡೆದಿರುವ HMD ಗ್ಲೋಬಲ್‌ನ TWS ಇಯರ್‌ಫೋನ್‌ಗಳು ಒಟ್ಟು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ. ಈ ಇಯರ್‌ಬಡ್ಸ್ ಇಯರ್‌ಫೋನ್‌ಗಳಿಗೆ ಕೆಲವು ಹೆಚ್ಚುವರಿ ಬಾಸ್ ನೀಡುವ 10mm ಡ್ರೈವರ್‌ಗಳನ್ನು ಹೊಂದಿವೆ. Nokia Go Earbuds 2+ ಮತ್ತು Nokia Go Earbuds 2 Pro ಎನ್ವಿರಾನ್‌ಮೆಂಟ್ ನಾಯ್ಸ್‌ ಕ್ಯಾನ್ಸಲೇಷನ್ (ENC) ವೈಶಿಷ್ಟ್ಯ ಹೊಂದಿವೆ. ನೋಕೊಯಾದ ಎರಡೂ ಹೊಸ  ಟಿಡಬ್ಯ್ವುಎಸ್ ಇಯರ್‌ಫೋನ್‌ಗಳು ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟ್ ಮಾಡಲಾಗಿದೆ.

Nokia Go Earbuds 2+, Nokia Go Earbuds 2 Pro ಬೆಲೆ, ಲಭ್ಯತೆ: Nokia Go Earbuds 2+ ಮತ್ತು Nokia Go Earbuds 2 Pro ಬೆಲೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದಾಗ್ಯೂ Nokia Go Earbuds 2+ಬೆಲೆಯು $39.99 (ಸುಮಾರು ರೂ. 3,000) ಎಂದು ವರದಿಯಾಗಿದೆ ಮತ್ತು ಎರಡನೆಯದು $44.99 (ಸುಮಾರು ರೂ. 3,400) ಗೆ ಲಭುವಿರಲಿದೆ ಎಂದು ಹೇಳಲಾಗುತ್ತದೆ.  ನೋಕಿಯಾದ ಹೊಸ ಎರಡೂ TWS ಇಯರ್‌ಫೋನ್‌ಗಳನ್ನು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Nokia G11: ಟ್ರಿಪಲ್ ರೇರ್ ಕ್ಯಾಮೆರಾಗಳೊಂದಿಗೆ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ!

Nokia Go Earbuds 2+, Nokia Go Earbuds 2 Pro specifications: Nokia Go Earbuds 2+ ಮತ್ತು Nokia Go Earbuds 2 Pro 10mm ನಿಯೋಡೈಮಿಯಮ್ ಡ್ರೈವರ್‌ಗಳು ಹೆಚ್ಚುವರಿ ಬಾಸನ್ನು ತಲುಪಿಸಲು ಸಹಾಯ ಮಾಡುತ್ತವೆ. ಎರಡೂ ಇಯರ್‌ಬಡ್‌ಗಳು ವಿವಿಧ ಸಾಧನಗಳಿಗೆ ಸಂಪರ್ಕಿಸಲು ಬ್ಲೂಟೂತ್ v5.2 ಅನ್ನು ಪಡೆಯುತ್ತವೆ ಮತ್ತು  ಆಂಡ್ರಾಯ್ಡ್ ಸಾಧನಗಳೊಂದಿಗೆ ತ್ವರಿತ ಜೋಡಣೆಗಾಗಿ ಗೂಗಲ್‌ನ ಫಾಸ್ಟ್‌ ಪೇರ್ (Fast Pair) ತಂತ್ರಜ್ಞಾನವನ್ನು ಸಹ ಒಳಗೊಂಡಿವೆ.  ನೋಕಿಯಾ ಇಯರ್‌ಫೋನ್‌ಗಳು ಎನ್ವಿರಾನ್‌ಮೆಂಟ್ ನಾಯ್ಸ್‌ ಕ್ಯಾನ್ಸಲೇಷನ್ (ENC) ಪಡೆಯುತ್ತವೆ, ಇದು ಬಳಕೆದಾರರಿಗೆ ಕರೆಗಳ ಜೊತೆಗೆ ಹಿನ್ನೆಲೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: HMD Globalನ Nokia Lite Earbuds , ವೈಯರ್ಡ್ ಬಡ್ಸ್ ಭಾರತದಲ್ಲಿ ಬಿಡುಗಡೆ: 36 ಗಂಟೆಗಳ ಬ್ಯಾಟರಿ ಲೈಫ್!

Nokia Go Earbuds 2+ ಮತ್ತು Nokia Go Earbuds 2 Pro ಎರಡೂ 300mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ಇರುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. ಪ್ರತಿ ಇಯರ್‌ಬಡ್ 40mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. TWS ಇಯರ್‌ಫೋನ್‌ಗಳನ್ನು 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಹಾಗೂ USB ಟೈಪ್-C ಪೋರ್ಟ್ ಬಳಸಿ ಎರಡು ಗಂಟೆಗಳಲ್ಲಿ ಚಾರ್ಜಿಂಗ್ ಕೇಸನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. 

ಎರಡೂ ಇಯರ್‌ಫೋನ್‌ಗಳು ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟಿಂಗನ್ನು ಹೊಂದಿವೆ. Nokia Go Earbuds 2+ ಮತ್ತು Nokia Go Earbuds 2 Pro ನ ಇಯರ್‌ಬಡ್‌ಗಳು 35.5x18.5x22mm ಅಳತೆ ಮತ್ತು 4.3 ಗ್ರಾಂ ತೂಕವಿರುತ್ತವೆ. ಇವುಗಳು ಚಾರ್ಜಿಂಗ್ ಕೇಸ್ 28x52x60mm ಅಳತೆ ಮತ್ತು 48 ಗ್ರಾಂ ತೂಗುತ್ತದೆ.

Follow Us:
Download App:
  • android
  • ios