ಸ್ಮಾರ್ಟ್‌ವಾಚ್‌ಗಳಲ್ಲಿ ಚಾರ್ಜ್ ಬೇಗ ಖಾಲಿಯಾಗುತ್ತೆ ಅಂತ ಗೊಣಗೋಹಾಗಿಲ್ಲ. ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್‌ನ ಟ್ಯಾಗ್‌ಲೈನೇ ‘1 ಚಾರ್ಜ್ 2 ವೀಕ್ಸ್‌’. ಅಂದರೆ ಎರಡು ವಾರಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು. 

ಹಾಡು ಕೇಳ್ಕೊಂಡು, ಫಿಟ್‌ನೆಸ್‌ಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಚಾರ್ಜ್ ಮುಗಿಯಲ್ಲ. ಇದರಲ್ಲಿ ಕಿರಿನ್‌ ಎ1 ಚಿಪ್‌ಸೆಟ್‌ ಅಳವಡಿಸಲಾಗಿದ್ದು, ಬ್ಯಾಟರಿ ಲೈಫ್‌ ಹೆಚ್ಚಿಸಲಿದೆ. 

ಇದನ್ನೂ ಓದಿ | ಟ್ಯಾಗ್‌ನ ವೈರ್‌ಲೆಸ್‌ ಇಯರ್‌ಬಡ್‌: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...

1.39 ಇಂಚುಗಳ ಅಮೋಲ್ಡ್‌ ಡಿಸ್‌ಪ್ಲೇ ಇದೆ. ಸುಮಾರು 500 ಹಾಡುಗಳನ್ನು ಸ್ಟೋರ್‌ ಮಾಡುವ ವ್ಯವಸ್ಥೆ ಇದೆ. 

ಇದರಲ್ಲಿ ಎರಡು ಮಾದರಿಗಳಿವೆ. 46 ಎಂಎ ಸ್ಪೋರ್ಟ್‌ ಓ ವಾಚ್‌ನ ಬೆಲೆ 15,990 ರು., 46 ಎಂಎಂ ಲೆದರ್‌ ಬೆಲ್ಟ್‌ ವಾಚ್‌ ಬೆಲೆ: 17, 990 ರು. ಹಾಗೂ 46 ಎಂಎಂ ಮೆಟಲ್‌ ವಾಚ್‌ ಬೆಲೆ: 21,990 ರು.