ಡೋಪಿಂಗ್‌ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಯುವೆಂಟಸ್ ಫುಟ್ಬಾಲ್ ತಾರೆ ಪೌಲ್ ಪೋಗ್ಬಾ 4 ವರ್ಷ ಬ್ಯಾನ್‌..!

ಪೌಲ್ ಪೋಗ್ಬಾ ಅವರ ಕಾನೂನು ತಂಡವು ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಅವರು ಡೋಪಿಂಗ್ ಪಾಸಿಟಿವ್ ಬರುವ ವಸ್ತುವನ್ನು ಅಜಾಗಾರೂಕತೆಯಿಂದ ಸೇವಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

Juventus star Paul Pogba Banned from football for four years for doping kvn

ಬೆಂಗಳೂರು(ಫೆ.29): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಫ್ರೆಂಚ್ ಮಿಡ್ ಫೀಲ್ಡರ್, ಸೀರಿ ಎ ಲೀಗ್ ಟೂರ್ನಿಯಲ್ಲಿ ಯುವೆಂಟಸ್ ತಂಡದ ತಾರಾ ಆಟಗಾರ ಪೌಲ್ ಪೋಗ್ಬಾ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ. ಇದರ ಬೆನ್ನಲ್ಲೇ 4 ವರ್ಷಗಳ ಮಟ್ಟಿಗೆ ಫುಟ್ಬಾಲ್‌ನಿಂದ ಬ್ಯಾನ್ ಆಗಿದ್ದಾರೆ ಎಂದು ಲಾ ರಿಪಬ್ಲಿಕಾ ವರದಿ ಮಾಡಿದ್ದಾರೆ. ಯುವೆಂಟಸ್ ತಂಡವು ಉಡಿನೀಸ್ ವಿರುದ್ದದ ಉದ್ಘಾಟನಾ ಪಂದ್ಯದಲ್ಲಿ 30 ವರ್ಷದ ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಆಟಗಾರನ ಟೆಸ್ಟೋಸ್ಟೆರಾನ್‌ ಪರೀಕ್ಷೆಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರ ಬೆನ್ನಲ್ಲೇ ಇಟಲಿಯ ಡೋಪಿಂಗ್ ವಿರೋಧಿ ಪ್ರಾಸಿಕ್ಯೂಟರ್ ಕಚೇರಿಯು ಇದೀಗ ಗಣನೀಯ ದಂಡ ವಿಧಿಸಿದೆ.

ಇದೀಗ ಪೌಲ್ ಪೋಗ್ಬಾ ಅವರ ಕಾನೂನು ತಂಡವು ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಅವರು ಡೋಪಿಂಗ್ ಪಾಸಿಟಿವ್ ಬರುವ ವಸ್ತುವನ್ನು ಅಜಾಗಾರೂಕತೆಯಿಂದ ಸೇವಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಪರವಾಗಿರುವ ಕ್ಲೈಂಟ್‌ಗೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ ಪೌಲ್ ಪೋಗ್ಬಾ ಅವರ ಪರ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ಬ್ಯಾನ್‌ನಿಂದಾಗಿ ಪೌಲ್ ಪೋಗ್ಬಾ ಅವರ ವೃತ್ತಿಬದುಕು ಬಹುತೇಕ ಅಂತ್ಯವಾದಂತೆ ಆಗಿದೆ.

ಪೌಲ್ ಪೋಗ್ಬಾ ಮುಂದಿನ ತಿಂಗಳು ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಇದೀಗ ಪೌಲ್ ಪೋಗ್ಬಾ 4 ವರ್ಷ ಬ್ಯಾನ್‌ಗೆ ಒಳಗಾಗಿರುವುದರಿಂದ 35 ವರ್ಷಗಳ ಅವಧಿಯ ವರೆಗೂ ಈ ನಿಷೇಧ ಶಿಕ್ಷೆ ಇರಲಿದೆ. ಪೌಲ್ ಪೋಗ್ಬಾ ಅವರು ನಿಷೇಧಕ್ಕೆ ಒಳಗಾಗಿರುವುದು ಅವರ ವರ್ಣರಂಜಿತ ಫುಟ್ಬಾಲ್ ಬದುಕಿಗೆ ಒಂದು ಕಪ್ಪುಚುಕ್ಕೆಯಾಗಿದ್ದು ಮಾತ್ರವಲ್ಲದೇ, ಯುವೆಂಟಸ್ ತಂಡಕ್ಕೆ ಸೀರಿ ಎ ಲೀಗ್‌ನಲ್ಲಿ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

Dharamsala Test: ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್‌ನಿಂದ ಕೆ ಎಲ್ ರಾಹುಲ್ ಔಟ್; ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್?

ಪೌಲ್ ಪೋಗ್ಬಾ ಅವರು ಈ ನಿಷೇಧವು ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರನೊಬ್ಬನ ಅಧಃಪತನವಾದಂತೆ ಆಗಿದೆ. ಪೌಲ್ ಪೋಗ್ಬಾ ಫ್ರಾನ್ಸ್‌ ಪರ ಫಿಫಾ ವಿಶ್ವಕಪ್ ಜಯಿಸಿದ್ದರು. ಕ್ರೋವೆಷಿಯಾ ಎದುರು ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸುವ ಮೂಲಕ ಫ್ರಾನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

13 ಬಾರಿ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡವನ್ನು ತೊರೆದು 2022ರಲ್ಲಿ ತಮ್ಮ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಉಚಿತವಾಗಿಯೇ ಯುವೆಂಟಸ್‌ಗೆ ಸೇರ್ಪಡೆಗೊಂಡಿದ್ದರು. ಇದರ ಹೊರತಾಗಿಯೂ ಅವರ ನಿರೀಕ್ಷೆಯನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಮೊದಲ ಋತುವಿನಲ್ಲಿ ಗಾಯದ ಸಮಸ್ಯೆಯಿಂದಾಗಿ ಅವರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿತು.

ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

2023-24ರ ಋತುವಿನ ಅವರ ಆರಂಭಿಕ ಪಂದ್ಯಕ್ಕಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರಾದರೂ ಉಡಿನೇಸ್ ವಿರುದ್ದದ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದರು. ಈ ಪಂದ್ಯದಲ್ಲಿ ಯುವೆಂಟಸ್ ತಂಡವು 3-0 ಅಂತರದ ಗೆಲುವು ದಾಖಲಿಸಿತ್ತು. ಇದರ ಬೆನ್ನಲ್ಲೇ ನಡೆದ ಪರೀಕ್ಷೆಯಲ್ಲಿ ಪೋಗ್ಬಾಗೆ 4 ವರ್ಷಗಳ ನಿಷೇಧಕ್ಕೆ ಕಾರಣವಾಯಿತು.

ಪೋಗ್ಬಾ ಅವರ ಆರಂಭಿಕ ಡೋಪಿಂಗ್ ಟೆಸ್ಟ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಬಿ ಮಾದರಿಯನ್ನು ಪರೀಕ್ಷಿಸಲು ಮನವಿ ಮಾಡಿಕೊಂಡಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಂದ ಆ ರಿಪೋರ್ಟ್ ಕೂಡಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಯುವೆಂಟಸ್ ತಂಡವು, ಪೋಗ್ಬಾ ಅವರೊಂದಿಗಿನ ಒಪ್ಪಂದವನ್ನು ರದ್ದು ಮಾಡಿಕೊಂಡಿತು.
 

Latest Videos
Follow Us:
Download App:
  • android
  • ios