Asianet Suvarna News Asianet Suvarna News

ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಭಕ್ತಿ. ಶಬರಿಮಲೆ ಸ್ವಾಮಿ ಅಯ್ಯಪ್ಪನ ಮಹಿಮೆಯೇ ಅಂಥಾದ್ದು.

 

Why Sandalwood actor Rajkumar family
Author
Bengaluru, First Published Feb 26, 2020, 3:32 PM IST

ಕನ್ನಡ ಚಿತ್ರರಂಗಕ್ಕೂ ಶಬರಿ ಮಲೆಯ ಅಯ್ಯಪ್ಪ ಸ್ವಾಮಿಗೂ ಬಿಡಿಸಲಾಗದ ನಂಟಿದೆ. ಕನ್ನಡದಲ್ಲಿ ಅಯ್ಯಪ್ಪ ಸ್ವಾಮಿ ಬಗ್ಗೆ ಕೆಲವೊಂದು ಸಿನಿಮಾಗಳೂ ಬಂದಿವೆ. ಕೇರಳದ ಕಾಡಿನ ನಡುವೆ ಇರುವ ಅಯ್ಯಪ್ಪ ಗುಡಿ ಇಂದಿಗೂ ಈ ಪರ ಸೂಜಿಗಲ್ಲಿನ ಹಾಗೆ ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಕಳೆದ ಜನವರಿಯಲ್ಲಿ ಮಕರ ಸಂಕ್ರಾಂತಿ ದರ್ಶನವಾದಾಗ ಲಕ್ಷಾಂತರ ಜನ ಶಬರಿಮಲೆಯ ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಆರಂಭದಲ್ಲಿ ಈ ಜ್ಯೋತಿಯನ್ನು ಪವಾಡ ಎಂದೇ ಸಂಬಲಾಗಿತ್ತು. ಆದರೆ ಇತ್ತೀಚೆಗೆ ಆ ಜ್ಯೋತಿಯನ್ನು ದೇವಳದವರೇ ಉರಿಸುತ್ತಾರೆ ಎಂಬುದು ದೃಢಪಟ್ಟಿದೆ. ಹಾಗಂತ ಇದು ಭಕ್ತರ ಮನದಲ್ಲಿ ಅಯ್ಯಪ್ಪ ಸ್ವಾಮಿ ಬಗೆಗೆ ಇರುವ ಭಕ್ತಿಯನ್ನೇನೂ ಕಡಿಮೆ ಮಾಡಿಲ್ಲ. ಈ ಪ್ರಕರಣದ ಬಳಿಕವೂ ಅಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲೂ ವ್ಯತ್ಯಾಸವಾಗಿಲ್ಲ.

ಧರ್ಮಸ್ಥಳದಲ್ಲಿ ಅಣ್ಣಪ್ಪ ಮಂದಿರವ ನೋಡಿ

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರನ್ನು ಕಾಣಲು ಹದಿನೆಂಟು ಮೆಟ್ಟಿಲುಗಳನ್ನೇರಿ ಹೋಗಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಶುದ್ಧರಾಗಿಲ್ಲದಿದ್ದರೆ ಈ ಮೆಟ್ಟಿಲೇರುವುದು ಕಷ್ಟ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ. ಕೆಲವೊಮ್ಮೆ ಅಂಥವರಿಗೆ ಆ ಹೊತ್ತಿಗೆ ಮೆಟ್ಟಿಲೇರಲು ಸಾಧ್ಯವಾದರೂ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗುತ್ತದೆ ಎಂಬುದು ಹಿರಿಯ ಸ್ವಾಮಿಗಳ ಮಾತು. ಹಾಗಾಗಿ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಲು ದೈಹಿಕವಾಗಿ ಮಾತ್ರ ಶುದ್ಧವಾಗಿದ್ದರೆ ಸಾಲವು, ಮಾನಸಿಕವಾಗಿಯೂ ಅಷ್ಟೇ ಶುಚಿಯಾಗಿರಬೇಕು. ಅಯ್ಯಪ್ಪ ಸ್ವಾಮಿಯ ವ್ರತ ಮಾಡುವ ಸಮಯದಲ್ಲೂ ಈ ಶೌಚದ ಪಾಲನೆ ಅತ್ಯಗತ್ಯ.

ಇಂಥಾ ವ್ರತ ಪಾಲನೆಯಿಂದ ಅಯ್ಯಪ್ಪ ಸ್ವಾಮಿಯಷ್ಟೇ ಪ್ರಸನ್ನನಾಗುತ್ತಾನೆ ಅಂದುಕೊಂಡರೆ ಅದು ಪೂರ್ತಿ ಸತ್ಯವಲ್ಲ. ನಮ್ಮ ಮನಸ್ಸು ಆರೋಗ್ಯಪೂರ್ಣವಾಗಿರುತ್ತದೆ. ಒಳ್ಳೆಯದನ್ನೇ ಚಿಂತಿಸಿದರೆ, ಒಳ್ಳೆಯ ಕೆಲಸವನ್ನೇ ಮಾಡಿದರೆ ಜಗತ್ತು ಶಾಂತಿ ನೆಮ್ಮದಿಯಿಂದಿರುತ್ತದೆ. ಹಾಗಾಗಿ ಈ ವ್ರತ ಪಾಲನೆಯಿಂದ ನಮಗೆ ಸಾಕಷ್ಟು ಒಳಿತಿದೆ. ಮುಂಜಾನೆ ಚಳಿಯಲ್ಲಿ ತಣ್ಣೀರ ಸ್ನಾನ ಮಾಡಿ ಅಯ್ಯಪ್ಪ ಭಜನೆ ಮಾಡುವುದು ಬಹಳ ಶ್ರೇಷ್ಠ. ಇದರಿಂದ ನಮ್ಮ ದೇಹ, ಮನಸ್ಸಿನ ನಿಯಂತ್ರಣ ಸಿಗುವುದೂ ಅಷ್ಟೇ ಸತ್ಯ.

ಶಬರಿಮಲೆಯಲ್ಲಿ‌ ಕಳೆದು ಹೋದ ಪರ್ಸ್ ಮಂಗಳೂರಿನಲ್ಲಿ ಪ್ರತ್ಯಕ್ಷ

ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಅಯ್ಯಪ್ಪನ ಭಕ್ತರಾಗಿದ್ದರು. ಕೊನೆಯವರೆಗೂ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡುವುದು ತಪ್ಪಿಸುತ್ತಿರಲಿಲ್ಲ. ಇದೀಗ ಅವರ ಮಕ್ಕಳೂ ಅಯ್ಯಪ್ಪನ ವ್ರತ ಪಾಲಿಸುತ್ತಾರೆ. ಡಾ. ರಾಜ್ ಕುಮಾರ್ ಅವರು ಅಯ್ಯಪ್ಪನನ್ನು ಭವರೋಗ ವೈದ್ಯ ಎಂದೇ ಕರೆಯುತ್ತಿದ್ದರಂತೆ. ಏಕೆಂದರೆ ಈ ಚಟಗಳು, ದುರಾಭ್ಯಾಸ, ಕೆಟ್ಟ ಚಿಂತನೆಗಳು ಗಂಡುಮಕ್ಕಳಷ್ಟು ಹೆಣ್ಣುಮಕ್ಕಳಲ್ಲಿರಲ್ಲ ಅಂತ ಅಣ್ಣಾವ್ರು ನಂಬಿದ್ದರು. ಗಂಡಸರನ್ನು ಅಂಥಾ ಚಟಗಳಿಂದ, ಕೆಟ್ಟ ಮಾತುಗಳಿಂದ ಹೊರಗಿಡುವ ಮನಸ್ಸು ಶುದ್ಧಗೊಳಿಸುವ ಶಕ್ತಿ ಅಯ್ಯಪ್ಪ ಸ್ವಾಮಿ ವ್ರತಕ್ಕಿದೆ ಅಂತಲೇ ಅವರು ನಂಬಿದ್ದರು.

ಡಾ. ರಾಜ್ ಅವರು ಭಾವುಕ ವ್ಯಕ್ತಿ, ಅಷ್ಟೇ ಒಳ್ಳೆತನಗಳ ಆಗರ. ಉತ್ತಮವಾದದ್ದು ಎಲ್ಲಿದ್ದರೂ ಅದನ್ನು ಮಗುವಿನ ಮುಗ್ಧತೆಯಿಂದ ಸ್ವೀಕರಿಸಿ ಅಳವಡಿಸಿಕೊಳ್ಳುವುದು ಅವರ ಕ್ರಮ. ಅದಕ್ಕೇ ಅವರಿಗೆ ಆ ಎತ್ತರಕ್ಕೆ ಏರೋದು ಸಾಧ್ಯವಾಯಿತು ಅಂತಾರೆ ಅಣ್ಣಾವ್ರ ಆಪ್ತರು. ಅಣ್ಣಾವ್ರು ತಮಿಳು ನಟ ಎಂ ಎನ್ ನಂಬಿಯಾರ್ ಅವರನ್ನೇ ಗುರುಸ್ವಾಮಿ ಎಂದು ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪನ ವ್ರತ ಪಾಲಿಸಿ ದರ್ಶನ ಮಾಡಿಬರುತ್ತಿದ್ದರು. ಈ ಅಯ್ಯಪ್ಪ ಸ್ವಾಮಿ ವ್ರತದಲ್ಲಿ ಗುರು ಸ್ವಾಮಿಗಳಾಗುವುದು ಸುಲಭವಲ್ಲ. ಅವರು ೧೮ ಬಾರಿ ಅಯ್ಯಪ್ಪನ ವ್ರತ ಪಾಲಿಸಿ ಶಬರಿಮಲೆಗೆ ಹೋಗಿರಬೇಕು. ನಂಬಿಯಾರ್ ಅವರು ಅಂಥಾ ಸಾಧನೆ ಮಾಡಿದ ಭಕ್ತರು.

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡಿಸಿದ ಶಿವಣ್ಣ! 

ಅಪ್ಪ ರಾಜ್ ಕುಮಾರ್ ಅವರ ಅಯ್ಯಪ್ಪ ಸ್ವಾಮಿ ಮೇಲಿನ ನಂಬಿಕೆ ಅವರ ಮೂವರು ಮಕ್ಕಳಿಗೂ ಇದೆ. ಮಕ್ಕಳು ಆಗಾಗ ಅಯ್ಯಪ್ಪನ ಮಾಲೆ ಧರಿಸಿ ಕಟ್ಟುನಿಟ್ಟಾದ ವ್ರತ ಮಾಡಿ ಶಬರಿಮಲೆಗೆ ಹೋಗಿ ಬರುತ್ತಾರೆ. ಹದಿನೆಂಟು ಮೆಟ್ಟಿಲು ಹತ್ತಿ ದರ್ಶನ ಪಡೆಯುತ್ತಾರೆ. ಸದ್ಯಕ್ಕೀಗ ಅಣ್ಣಾವ್ರ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ವ್ರತಧಾರಿಯಾಗಿದ್ದಾರೆ. ಹಿಂದಿನಿಂದಲೂ ಸಾಕಷ್ಟು ಸಲ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿರುವ ಅವರು ಈ ಬಾರಿ ಮಾರ್ಚ್ ಹದಿನಾಲ್ಕರಂದು ಶಬರಿಮಲೆ ಪ್ರಯಾಣ ಬೆಳೆಸಲಿದ್ದಾರೆ.

Follow Us:
Download App:
  • android
  • ios