Asianet Suvarna News Asianet Suvarna News

ಈ ವರ್ಷ ದೇವರ ಕೃಪೆ ನಿಮ್ಮ ಮೇಲಿರಲಿ: ಈ ಅಂಶಗಳನ್ನು ಪಾಲಿಸಿ!

ದೇವರು ಅನ್ನೋದು ಕೇವಲ ಒಂದು ನಂಬಿಕೆ ಮಾತ್ರ ಅಲ್ಲ. ಅದೊಂದು ಭರವಸೆ. ಅದೊಂದು ಊರುಗೋಲು.ನಾವು ಕಾಣುವ ಪಾಸಿಟಿವ್‌ ಎನರ್ಜಿ. ಹಾಗಂತ ಎಷ್ಟೋ ಜನ ನಮ್ಮ ಮೇಲೆ ದೇವರಿನ್ನೂ ಕಣ್ಬಿಟ್ಟಿಲ್ಲಾ ಅಂತೆಲ್ಲ ಗೋಳಾಡುತ್ತಿರುತ್ತಾರೆ. 2020ಯಲ್ಲಿ ನಿಮ್ಮ ಮೇಲೆ ದೇವರ ಕೃಪೆ ಇರಬೇಕಾದರೆ ಈ ಅಂಶಗಳನ್ನು ಫಾಲೋ ಮಾಡಿ.
 

Time to think about god and seek his blessing in 2020
Author
Bangalore, First Published Jan 2, 2020, 12:43 PM IST

‘ದೇವರು’ ಅಂದರೇನು ಅಂತ ಒಂದಿಷ್ಟು ಜನರನ್ನು ಕೇಳಿ ನೋಡಿ. ವೈವಿಧ್ಯಮಯ ಉತ್ತರಗಳು ಸಿಗುತ್ತಾ ಹೋಗುತ್ತವೆ. ಅಂದರೆ ಒಂದು ವಿಷಯ ಸ್ಪಷ್ಟ. ದೇವರು ಒಬ್ಬೊಬ್ಬರಿಗೆ ಒಂದೊಂದು ರೀತಿ. ಒಬ್ಬ ಕಲ್ಲಿನಲ್ಲಿರುವ ದೇವರನ್ನು ನಂಬಬಹುದು. ಇನ್ನೊಬ್ಬ ತನ್ನೊಳಗಿರುವ ದೇವರಿಗೇ ದೊಡ್ಡವರು ಎನ್ನಬಹುದು. ಇನ್ನೊಬ್ಬ  ತೋರಿಕೆಗೆ ನಾನು ದೇವರನ್ನು ನಂಬಲ್ಲ ಅಂತ ಹೇಳಬಹುದು.

2020ರಲ್ಲಿ ಸಂಗಾತಿ ಸಿಗೋ ಲಕ್‌ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!

ಆದರೆ ಕಷ್ಟದ ಟೈಮ್‌ನಲ್ಲಿ  ಕೈ ಮುಗಿದಿರಬಹುದು. ಮಗದೊಬ್ಬ ನೂರಾರು ದೇವರಿಗೆ ಕೈ ಮುಗಿಯುತ್ತಾ ಓಡಾಡಬಹುದು. ಹಾಗಂತ ಆತ ಮಾಡೋದು ತಪ್ಪು, ಈಕೆ ಮಾಡೋದು ಸರಿ ಅಂತ ಹೇಳಕ್ಕಾಗಲ್ಲ. ಏಕೆಂದರೆ ದೇವರನ್ನು ನಾವ್ಯಾರೂ ಕಂಡಿಲ್ಲ. ಆತನಿಗೆ ಏನಿಷ್ಟ ಅಂತ ನಾವು ಕಲ್ಪಿಸಿಕೊಂಡಿದ್ದೇವಷ್ಟೇ. ಅದರ ಬಗ್ಗೆ ಸ್ಪಷ್ಟ ಕಲ್ಪನೆ ನಮಗಿಲ್ಲ. ಆದರೆ ದೇವರು ಹಲವು ಅನುಭವಗಳ ಮೂಲಕ ನಂಬುವ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕಿರುತ್ತಾನೆ.

ದೇವರ ಕೃಪೆಯ ಬಗ್ಗೆ ಮಾತಾಡುವ ಮೊದಲು ಒಂದು ಘಟನೆ ಹೇಳಬೇಕು. ಆತನೊಬ್ಬ  ಯತಿ. ಯೋಗಿಯಾಗಬೇಕಾದ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲೇ ಆತನಿಗೆ ಒಂದಿಲ್ಲೊಂದು ಸಂಕೇತಗಳ ಮೂಲಕ ಗುರುವಿನ ಆದೇಶ ಹೋಗುತ್ತಿರುತ್ತದೆ. ಅದರಂತೆ ಆತ ಒಂದಿಷ್ಟು ಕಲಿಯುತ್ತಾನೆ. ಗಂಟೆಗಟ್ಟಲೆ ಧ್ಯಾನ ಮಾಡಿ ಸಮಾಧಿಗೆ ಹೋಗುವುದು ಸಾಧ್ಯವಾಗುತ್ತದೆ. ಆತ ಯೌವನಕ್ಕೆ ಬಂದಾಗ ಮನೆ ಬಿಟ್ಟು ಇತರೆ ಸಂನ್ಯಾಸಿಗಳಂತೆ ದೇಶವಿಡೀ ಸುತ್ತುತ್ತಿರುತ್ತಾನೆ.

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ಒಂದೆಡೆ ಕೂತಿದ್ದಾಗ ಒಂದಿಷ್ಟು ಜನ ಭಕ್ತರು ಏನೋ ಭಜನೆ ಮಾಡಿಕೊಂಡು ಹೋಗುತ್ತಿರುತ್ತಾರೆ. ಈತನಿಗ್ಯಾಕೋ ಇದೆಲ್ಲ ಬೂಟಾಟಿಕೆ ಅನಿಸುತ್ತದೆ. ಆತ ಆ ದೇವಾಲಯದ ಒಳಗೂ ಹೋಗದೇ ಮತ್ತೊಂದು ದೇವಾಲಯಕ್ಕೆ ತೆರಳುತ್ತಾನೆ. ಆ ದೇವಾಲಯಕ್ಕೆ ತೆರಳಿ ಧ್ಯಾನಕ್ಕೆ ಕೂತರೆ ಏನು ಮಾಡಿದರೂ ಧ್ಯಾನ ಮಾಡಲಾಗುತ್ತಿಲ್ಲ. ಆತನ ಸೂಕ್ಷ್ಮ ಮನಸ್ಸಿಗೆ ಅರಿವಾಗುತ್ತದೆ. ಭಕ್ತರು ಮಾಡುತ್ತಿದ್ದ ಭಜನೆಯನ್ನು ಕೇವಲವಾಗಿ ನೋಡಿದ್ದು ತಪ್ಪು. ಪ್ರತಿಯೊಂದು ದೇವಾಲಯದಲ್ಲೂ ಒಂದು ಬಗೆಯ ಚೈತನ್ಯ ತುಂಬಿರುತ್ತದೆ, ಅದನ್ನು ಧಿಕ್ಕರಿಸಿದ್ದು  ತಪ್ಪು ಅನ್ನೋದು ಗೊತ್ತಾಗುತ್ತೆ. ಆತ ಮತ್ತೆ ಆ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ನಮಿಸಿ ಧ್ಯಾನಕ್ಕೆ ಕೂತಾಗ ಮೊದಲಿನಂತೆ ಏಕಾಗ್ರತೆ ಬರುತ್ತದೆ.

ಅಹಂ ಅನ್ನೋದು ದೇವರ ವಿರುದ್ಧ  ಪದ

ನೀವು ದೇವರಲ್ಲಿ ಭಕ್ತಿ ತೋರಿಸದಿದ್ದರೂ ಪರವಾಗಿಲ್ಲ. ತಿರಸ್ಕಾರ ಬೇಡ. ನೀವು ತಿರಸ್ಕಾರ ಮಾಡುವುದು, ಕೇವಲವಾಗಿ ನೋಡುವುದು ಅಹಂನ ಭಾಗ. ಅಹಂ ಅನ್ನೋದು ದೇವರ ವಿರುದ್ಧ ಪದ. ಅಹಂ ಇದ್ದ ಕಡೆ ದೇವರು ಕಣ್ಣೆತ್ತಿಯೂ ನೋಡಲ್ಲ. ನಿಮ್ಮೊಳಗಿನ ಅಹಂಅನ್ನು ಸಪ್ರ್ರೆಸ್‌ ಮಾಡಲು ಟ್ರೈ ಮಾಡಿ.

ಸ್ವಾರ್ಥಕ್ಕೆ ಬೇಡುವ ಮೊದಲು ಒಮ್ಮೆ ಯೋಚನೆ ಮಾಡಿ

ದೇವ್ರೇ ನಂಗೆ ದುಡ್ಡು ಕೊಡು, ಆಸ್ತಿ ಕೊಡು, ಅದು ಕೊಡು ಇದು ಕೊಡು ಅಂತ ನಮ್ಮ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಆದರೆ ಇಂಥ ಲೌಕಿಕ ವಿಷಯವನ್ನು ದೇವರಿಂದ ಬೇಡಿದಷ್ಟು ನಮ್ಮ ದೇವರ ನಡುವಿನ ಅಂತ ಹೆಚ್ಚುತ್ತಾ ಹೋಗುತ್ತದೆ. ದೇವರು ಅಂದ ಮೇಲೆ ನಿಮ್ಮ ಕಷ್ಟ ದೇವರಿಗೆ ಗೊತ್ತಾಗಿಯೇ ಇರುತ್ತದಲ್ವಾ. ಆ ಕಷ್ಟಗಳಿಂದ ನಿಮ್ಮ ಲೈಪ್‌ನಲ್ಲಿ ಬೇರೇನೋ ಲಾಭ ಇರಬಹುದಲ್ವಾ, ಸಾಧ್ಯವಾದಷ್ಟು ಸ್ವಾರ್ಥಕ್ಕಾಗಿ ದೇವರನ್ನು ಬೇಡಬೇಡಿ.

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

ದುಡ್ಡು ಕೊಟ್ಟು ದೇವರನ್ನು ಕೊಳ್ಳಲಾಗುವುದಿಲ್ಲ.

ನೀವು ದೇವರಿಗೆ ಸಾವಿರಾರು ರುಪಾಯಿ ಹಣದ ಆಮಿಷ ಇಟ್ಟು ಏನನ್ನಾದರೂ ಕೇಳಿದರೆ ನಿಮಗಿಂತ ಮೂರ್ಖರಿಲ್ಲ. ಜಗತ್ತಿನಲ್ಲಿ ಬೇರೆಲ್ಲವನ್ನೂ ಹಣದಿಂದ ಕೊಳ್ಳಬಹುದು. ಆದರೆ ದೇವರನ್ನು ಕೊಂಡುಕೊಳ್ಳಲಾಗದು. ಹೀಗೆಲ್ಲ ಮಾಡುವ ಬದಲು ಒಂದಿಷ್ಟು ಹೊತ್ತು ಮೌನವಾಗಿ ಧ್ಯಾನ ಮಾಡಿ. ನಿಮ್ಮ ಮೇಲೆ ದೇವರ ಕೃಪೆ ಇದ್ದೇ ಇರುತ್ತದೆ.

Follow Us:
Download App:
  • android
  • ios