ಮಿಥುನ

ನೀವು ಏನೇನೆಲ್ಲ ಮಾಡ್ಬೇಕು ಅಂದುಕೊಂಡಿರ್ತೀರೋ ಅದೆಲ್ಲ ಉಲ್ಟಾ ಹೊಡೆಯಬಹುದು. ಇನ್ನೊಬ್ರು ಏನು ಬೇಕಾದ್ರೂ ಅಂದ್ಕೊಳ್ಳಿ, ನಾನು ಇರೋದೇ ಹೀಗೆ ಅನ್ನುವ ನಿಮ್ಮ ಸ್ವಭಾವಕ್ಕೆ ಈಗಲಾದರೂ ಬ್ರೇಕ್ ಹಾಕಿ. ಏನಾಗುತ್ತೆ ನೋಡೋಣ ಅನ್ನೋ ಹುಂಬತನದಿಂದಲೇ ಡೇಂಜರ್‌ ಇದೆ. ಈ ರಾಶಿಯವರು ಆರೋಗ್ಯದ ಬಗ್ಗೆ ಬಹಳ ಕಾಳಜಿ ಮಾಡಿ. ಈ ಬಾರಿ ಕಷ್ಟ ಸ್ವಲ್ಪ ಜಾಸ್ತಿ ಇರಬಹುದು. ಎಷ್ಟು ಜಾಗೃತೆಯಿಂದಿದ್ದರೂ ಸಾಲದು. ನಿಮ್ಮ ಅತ್ಯುತ್ಸಾಹಕ್ಕೂ ಬ್ರೇಕ್ ಬೀಳಬಹುದು. ವೀರಭದ್ರ ಸ್ವಾಮಿಯನ್ನು ನೆನೆಯಿರಿ.

 

ತುಲಾ

ತುಲಾ ಎಂದರೇ ತಕ್ಕಡಿ. ತಕ್ಕಡಿಯ ಬಟ್ಟುಗಳು ಮೇಲಕ್ಕೂ ಕೆಳಕ್ಕೂ ಹೋಗುತ್ತದೆ ಅಲ್ಲವೇ. ಅದೇ ರೀತಿ ನಿಮಗೆ ಒಂದು ಸಲ ಸುಖ, ಒಂದು ಸಲ ಕಷ್ಟ ಎದುರಾಗಬಹುದು. ಸುಖವೆಂದರೆ ಸದಾ ಸುಖ, ಕಷ್ಟವೆಂದರೆ ಸದಾ ಕಷ್ಟ ಎಂಬ ಚಿಂತನೆ ಇಟ್ಟುಕೊಳ್ಳಬೇಡಿ. ಸುಖದ ಹಿಂಧೆ ಕಷ್ಟ, ಕಷ್ಟದ ಹಿಂದೆ ಸುಖ ಸದಾ ಹೊಂಚು ಹಾಕುತ್ತಲೇ ಇರುತ್ತದೆ. ಈ ಸದರ್ಭದಲ್ಲಿ ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಹೋದಾಗ ಎಚ್ಚರ ವಹಿಸಿ. ಸ್ವಚ್ಛತೆ ಕಾಪಾಡಿಕೊಳ್ಳಿ. ಕಾಳಬೈರವೇಶ್ವರ ಸ್ವಾಮಿ ಹಾಗೂ ಉಗ್ರನರಸಿಂಹ ಸ್ವಾಮಿಯನ್ನು ನೆನೆಯಿರಿ.

 

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

 

ಮಕರ

ಮಕರ ರಾಶಿಯವರಿಗೆ ಈ ಮಾಸದಲ್ಲಿ ಸ್ವಲ್ಪ ತೊಂದರೆಯಾಗುವ ಲಕ್ಷಣಗಳು ಕಾಣಿಸುತ್ತಿವೆ, ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಅಪಾಯವೇನೂ ಇಲ್ಲವಾದರೂ, ವೃತ್ತಿ ಕ್ಷೇತ್ರದಲ್ಲಿ ತೊಡಕುಗಳು ಉಂಟಾಗಬಹುದು. ದಿನಗೂಲಿ ಮಾಡುವವರಿಗೆ, ದೈನಂದಿನ ದುಡಿಮೆಯಿಂದ ಬದುಕು ನಡೆಸುತ್ತಿದ್ದವರಿಗೆ ಈಗ ಹೆಚ್ಚು ಕಷ್ಟವೇ ಇದೆ. ಸುಖವಾಗಿದ್ದ ಕಾಲದಲ್ಲಿ ಒಂದು ಗಂಟನ್ನು ಕಷ್ಟದ ದಿನಗಳಿಗಾಗಿ ಕೂಡಿಟ್ಟುಕೊಳ್ಳಬೇಕು ಎಂಬ ಪಾಠವನ್ನು ಕಲಿಯುವುದಕ್ಕೆ ಇದು ಸಕಾಲವಾಗಿದೆ. ಶ್ರೀ ರಾಘವೇಂದ್ರ ಗುರುಗಳು, ಶ್ರೀ ದುರ್ಗಾಪರಮೇಶ್ವರಿ ತಾಯಿ ನಿಮ್ಮನ್ನು ಕೈಬಿಡುವುದಿಲ್ಲ.

 

ಕುಂಭ

ನೀವು ಉದ್ಯಮ ನಡೆಸುತ್ತಿರುವವರಾಗಿದ್ದರೆ ನಿಮಗೀಗ ತುಂಬಾ ಕಷ್ಟದ ದಿನಗಳು ಎದುರಾಗಬಹುದು. ತರಕಾರಿ, ಹಣ್ಣು ವ್ಯಾಪಾರದಂಥ ಬೇಗನೆ ಕೆಡುವ ವಸ್ತುಗಳ ವ್ಯಾಪಾರದವರಾಗಿದ್ದರೆ ನಷ್ಟ ಸಂಭವಿಸಬಹುದು. ಹತ್ತು ಬಂದರೂ, ಇಪ್ಪತ್ತು ಹೋಗುವ ಸ್ಥಿತಿ ಬರಬಹುದು. ಇಂಥ ಸಂದರ್ಭದಲ್ಲಿ ದೇವರ ನೆನಪಾಗುವುದು ಸಹಜ. ಶನಿದೇವರು, ಆಂಜನೇಯರ ಕೃಪೆಯನ್ನು ಪಡೆದುಕೊಳ್ಳಲು ಇವರನ್ನು ಪೂಜಿಸುವುದು ನೆರವಾಗಬಹುದು. ಶ್ರೀ ತಾಯಿ ಲಲಿತಾಂಬಿಕೆ, ಸುಬ್ರಹ್ಮಣ್ಯ ಸ್ವಾಮಿಗಳ ಮೇಲಿನ ಭಕ್ತಿಯಿಂದ ನೆಮ್ಮದಿ.

 

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

 

ವೃಶ್ಚಿಕ

ರಾಶಿಯವರಿಗೆ ಅನಿಶ್ಚಿತತೆ ಕಾಡುತ್ತದೆ. ನಿತ್ಯ ಕೆಲಸವಾಗಿದ್ದರೆ ಸಂಬಳದ, ತಾತ್ಕಾಲಿಕ ಕೆಲಸವಾಗಿದ್ದರೆ ಕೆಲಸ ಉಳಿಸಿಕೊಳ್ಳುವ, ಉದ್ಯಮಿಗಳಾಗಿದ್ದರೆ ಲಾಭ ನಷ್ಟದ ಚಿಂತೆ ಕಾಡಬಹುದು. ಕೃಷಿಕರಾಗಿದ್ದರೆ ಬೆಳೆ ಕೈಗೆ ಹತ್ತದೆ ಅಥವಾ ಬೆಳೆಗೆ ತಕ್ಕ ಬೆಲೆ ಸಿಗದೆ ಹೋಗಬಹುದು. ನಿಮ್ಮ ನೈತಿಕತೆ, ನಿಷ್ಠೆ, ಮೌಲ್ಯಗಳ ಮೇಲಿನ ಶ್ರದ್ಧೆಗಳು ನಿಮ್ಮನ್ನು ಕಾಪಾಡುತ್ತವೆ. ನಿಮ್ಮ ಪ್ರತಿಭೆ ನಿಮ್ಮನ್ನು ಕೈ ಬಿಡದು. ಶ್ರೀ ಆಂಜನೇಯ, ಶ್ರೀ ಗಣೇಶ, ಶ್ರೀ ಮಂಜುನಾಥ ಸ್ವಾಮಿಯ ಧ್ಯಾನ ಮಾಡುವುದರಿಂದ ಶುಭವಾಗಲಿದೆ.

 

ಕಟಕ

ಏನು ಮಾಡಿದರೂ ಕೈಗೆ ಹತ್ತುವುದಿಲ್ಲ ಅಂತಾರಲ್ಲ- ಅಂಥ ದಿನಗಳು ನಿಮ್ಮನ್ನು ಚಿಂತೆಗೆ ದೂಡಬಹುದು. ಸಾಕಷ್ಟು ಕೆಲಸಗಳಿರುತ್ತವೆ. ಆದರೆ ಕೆಲಸಗಳು ಫಲ ಕೊಡುವುದು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಇದರಿಂದ ನಿರಾಶೆ ಕವಿಯುತ್ತದೆ. ದಿನದ ಕೊನೆಯಲ್ಲಿ ಹತಾಶ ಭಾವನೆ ಆವರಿಸುತ್ತದೆ. ಇಂಥ ಹೊತ್ತಿನಲ್ಲಿ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾದುದು. ಎಲ್ಲರಿಗೂ ಒಂದು ದಾರಿಯಾದರೆ ನಿಮಗೇ ಇನ್ನೊಂದು ದಾರಿ ತೆರೆದಿರುತ್ತದೆ. ಶ್ರೀ ದುರ್ಗಾರಮೇಶ್ವರಿ, ಶ್ರೀ ಪರಮೇಶ್ವರ ಸ್ವಾಮಿ ನಿಮ್ಮನ್ನು ಕಾಪಾಡುತ್ತಾರೆ.