ಸುಳ್ಳು ಹೇಳುವುದು ಸಾಮಾನ್ಯವಾಗಿ ತಪ್ಪು ಮಾಡಿದಾಗ. ತಪ್ಪನ್ನು ಮುಚ್ಚಿಡಲು, ಬೇರೊಬ್ಬರ ತಪ್ಪನ್ನು ಮುಚ್ಚಿಡಲು, ಅವರನ್ನು ರಕ್ಷಿಸಲು, ಬೇರಿಬ್ಬರಿಗೆ ಶಿಕ್ಷೆಯಾಗಲಿ ಎಂಬ ದುರುದ್ದೇಶದಿಂದ, ಮಾಡಬೇಕಿದ್ದ ಕೆಲಸ ಮಾಡದೆ ಸಿಕ್ಕಿಹಾಕಿಕೊಂಡಾಗ ತನ್ನ ಸೋಮಾರಿತನ ಮುಚ್ಚಿಡಲು, ತನ್ನ ಕಳಪೆ ವಸ್ತುವನ್ನು ಬೇರೊಬ್ಬರಿಗೆ ಸಾಗಹಾಕೋಕೆ, ಹೀಗೆ ನಾನಾ ರೀತಿಯ ಸುಳ್ಳುಗಳಿರುತ್ತವೆ. ಆದರೆ ಅದೊಂದು ಕಲೆಯೂ ಹೌದು. ಅದರಲ್ಲಿ ಪರಿಣತಿ ಇಲ್ಲದವರು ಬಲು ಬೇಗನೆ ಸಿಕ್ಹಾಕಿಕೊಳ್ಳುತ್ತಾರೆ.

ಈ ಕೆಳಗಿನ ಮೂರು ರಾಶಿಯವರಿಗೆ ಸುಳ್ಳು ಹೇಳುವುದು ಜನ್ಮಜಾತವಾಗಿ ಬಂದ ಗುಣ. ಎದುರಿಗೆ ಇರುವವರಿಗೆ ಕೊಂಚವೂ ಸುಳಿವು ಹತ್ತದಂತೆ ಸುಳ್ಳು ಹೇಳಿ ದಕ್ಕಿಸಿಕೊಳ್ತಾರೆ ಇವರು.

 ಮಿಥುನ

ಇವರ ವ್ಯಕ್ತಿತ್ವದಲ್ಲಿಯೇ ಒಂದು ಬಗೆಯ ದ್ವಿಮುಖ ವಿಭಾಗ ಇರುತ್ತೆ. ಮಿಥುನ ಎಂಬ ಪದವೇ ಸೂಚಿಸುವ ಹಾಗೆ, ಇವರಿಗೆ ಎರಡು ಬಗೆಯ ಮುಖಗಳು. ಒಂದರಿಂದ ಇನ್ನೊಂದಕ್ಕೆ ಬಲು ಬೇಗನೆ ಶಿಫ್ಟ್ ಆಗಬಲ್ಲರು. ಇವರ ಬಳಿ ವ್ಯವಹಾರ ಮಾಡುವವರು ಹುಷಾರಾಗಿ ಇರಬೇಕು. ಕಣ್ಣು ಮಿಟುಕಿಸುವಷ್ಟರಲ್ಲಿ ತಮ್ಮ ಕತೆಯನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸಬಲ್ಲರು. ಕೆಲವೊಮ್ಮೆ ಇವರು ಸುಳ್ಳು ಹೇಳುತ್ತಾ ಸಿಕ್ಕಿ ಬೀಳಬಹುದು. ಆದರೆ ತಕ್ಷಣವೇ ಅದನ್ನು ಮೇಕಪ್ ಮಾಡುವ, ಅದರ ತಲೆ ಮೇಲೆ ಹೊಡೆದಂತೆ ಇನ್ನೊಂದು ಸುಳ್ಳು ಹೇಳುವ ಸಾಮರ್ಥ್ಯವೂ ಇವರಿಗಿದೆ.

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ತುಲಾ

ನೀವು ಇವರ ಬಳಿ ವ್ಯವಹಾರ ನಡೆಸಿದ್ದರೆ ನಿಮಗೆ ಗೊತ್ತಾಗುತ್ತೆ- ಇವರು ಎಷ್ಟು ಆಕರ್ಷಕ ವ್ಯಕ್ತಿಗಳು ಅಂತ. ಲೋಕ ಲೋಕಾಂತರದ ಕತೆಗಳನ್ನೆಲ್ಲ ಅವರ ಕಣ್ಣೆದುರೇ ನಡೆದಂತೆ ಹೇಳಬಲ್ಲರು. ಅದೆಲ್ಲವೂ ನಿಜ ಅಂತ ನಂಬುತ್ತೀರಾ? ನೀವು ಕೆಟ್ಟಿರಿ ಎಂದೇ ಅರ್ಥ. ಇವರು ಗಾಳಿಯಿಂದಲೇ ಚಕ್ಕನೆ ಒಂದು ಕತೆ ಸೃಷ್ಟಿಸಿ ಹೇಳಬಲ್ಲರು. ಹೀಗಾಗಿ ಇವರು ತುಂಬ ಕ್ರಿಯೇಟಿವ್ ವ್ಯಕ್ತಿಗಳು ಕೂಡ ಹೌದು. ಇವರ ಕ್ರಿಯೇಟಿವಿಟಿ, ಸೃಜನಶೀಲತೆ ಇವರಿಗೆ ಸಾಹಿತ್ಯ, ನಾಟಕ ಇತ್ಯಾದಿ ಕಲೆಗಳಲ್ಲಿ ಸಾಕಷ್ಟು ನೆರವು ಆಗಬಹುದು. ಆದರೆ ಪೂರ್ತಿ ನಂಬಲು ಅರ್ಹರಾದವರಂತೂ ಇವರಲ್ಲ.

ಮೀನ

ಮೀನ ರಾಶಿಯವರು ಭಾವನಾ ಜೀವಿಗಳು. ಎಷ್ಡು ಭಾವನಾತ್ಮಕ ವ್ಯಕ್ತಿಗಳು ಎಂದರೆ, ತಮ್ಮೆದುರು ಇರುವವರನ್ನು ಕೂಡ ತಮ್ಮ‌ಭಾವನಾ ಪ್ರವಾಹದಲ್ಲಿ ಅದ್ದಿ ತೆಗೆಯಬಲ್ಲರು. ಆದರೆ ಇದೇ ಅಪಾಯಕರ. ಕೆಲವೊಮ್ಮೆ ತಮ್ಮ ತಪ್ಪನ್ನು ಮುಚ್ಚಿಹಾಕಲು, ಭಾವನಾತ್ಮಕವಾದ ಒಂದು ಕತೆ ಕಟ್ಟಿ ಹೇಳಬಲ್ಲರು. ಅದನ್ನು ಕೇಳಿದವರು ಮರುಳಾಗುವುದು, ಇವರ ಪರವಾಗಿ ಹೋರಾಡಲು ಸಜ್ಜಾಗುವುದು ಶತಸ್ಸಿದ್ಧ. ಆದರ ಅದರಿಂದ ದುಷ್ಪರಿಣಾಮ ಉಂಟಾಗುವುದು ಕೇಳಿಸಿಕೊಂಡ ವ್ಯಕ್ತಿಗಳಿಗೆ. ಮಾತು ಮತ್ತು ಭಾವನೆಗಳು ಇವರ ಪ್ರಮುಖ ಅಸ್ತ್ರ. ಬ್ರೇನ್‌ವಾಶಿಂಗ್ ಇವರು ಕಲಿಯದೇ ಬರುವ ಗುಣ. ಹಾಗಂತ ಕೆಟ್ಟವರೇನಲ್ಲ. ಅವರಿಗೂ ಅರಿಯದೇ ಸುಳ್ಳುಗಳು ಲೀಲಾಜಾಲವಾಗಿ ಬಂದುಬಿಡುತ್ತವೆ.

ನೀವು ಹೇಗೆ ಸಾಯುತ್ತೀರಿ? ನಿಮ್ಮ ಜನ್ಮರಾಶಿ ಆ ಬಗ್ಗೆ ಏನು ಹೇಳುತ್ತೆ?

ಜನ್ಮರಾಶಿಗೆ ತಕ್ಕಂತೆ ಸುಳ್ಳುಗಾರರನ್ನು ಅಂದಾಜು ಮಾಡಬಹುದು ಎಂದು ಗೊತ್ತಾಯಿತಲ್ಲ. ಹಾಗಿದ್ದರೆ ರಾಶಿ ಪ್ರಕಾರ, ಸತ್ಯ ಹೇಳುವರೂ ಇರಬಹುದಲ್ಲವೇ. ಇದ್ದಾರೆ. 

ಮೇಷ

ಇವರಿಗೆ ಸುಳ್ಳು ಹೇಳಲು ಬಾರದು. ಸುಳ್ಳು ಹೇಳಿದರೆ ತಮ್ಮ ಮುಖಭಾವದಿಂದಲೇ ಸಿಕ್ಕಿಬೀಳುತ್ತಾರೆ.

 ಕಟಕ

ಇವರು ಸುಳ್ಳು ಹೇಳಿದರೆ, ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಇರುತ್ತದೆ. ಅದು ತಮ್ಮ ಪ್ರೀತಿಪಾತ್ರರನ್ನು ರಕ್ಷಿಸುವುದು ಇರಬಹುದು. ಒಳ್ಳೆಯ ಕೆಲಸಕ್ಕಾಗಿ ಮನ ಒಲಿಸುವುದು ಇರಬಹುದು.

ಮಕರ

ಇವರು ಸುಳ್ಳು ಹೇಳಲು ಬಯಸಿದರೂ ಸುಳ್ಳು ಹೇಳಲಾರರು. ಹೇಳಿದರೆ ದಕ್ಕಿಸಿಕೊಳ್ಳಲಾರರು.

 ಕುಂಭ

ಇವರು ಸುಳ್ಳು ಹೇಳಲು ಮುಂದಾದರೆ ಇವರ ದೇಹವೇ ಇವರನ್ನು ತಿರಸ್ಕರಿಸಿಬಿಡುತ್ತದೆ. ದೇಹದಲ್ಲಿ ಬೆವರು ಕಿತ್ತುಬರುತ್ತದೆ!