Asianet Suvarna News Asianet Suvarna News

ನೀವು ದತ್ತು ಪಡೀತೀರಾ, ಅವಳಿ ಮಕ್ಕಳ ಪೋಷಕರಾಗುತ್ತೀರಾ? ಜಾತಕ ಹೇಳುತ್ತೆ...

ಸಂತಾನ ಯೋಗದಲ್ಲೂ ಪೂರ್ವಜನ್ಮದ ಫಲ ಸಹಿತ ಇರಬೇಕು. ಯಾವ ಗ್ರಹಗಳು ಎಲ್ಲಿದ್ದರೆ ಸಂತಾನ ಪ್ರಾಪ್ತಿಯಾಗಲಿದೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿ ಕೇವಲ ಸಂತಾನ ಯೋಗ ಮಾತ್ರವಲ್ಲ. ಜೊತೆಗೆ ಎಷ್ಟು ಮಕ್ಕಳ ಯೋಗವಿದೆ, ಒಂದೋ ಇಲ್ಲವೇ ಅವಳಿ-ಜವಳಿ ಸೇರಿದಂತೆ ಕೆಲವು ಸಂಗತಿಗಳನ್ನು ಈ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ.

Know your Progeny yoga in Prashne kundali astrology
Author
Bangalore, First Published Apr 7, 2020, 8:27 PM IST

ವಿವಾಹದ ನಂತರದ ಜೀವನದಲ್ಲಿ ಬಹುಮುಖ್ಯ ಘಟ್ಟ ಎಂದರೆ ಸಂತಾನ. ಮಕ್ಕಳಾಗದಿರುವ ಕಿರಿಕಿರಿ ಅಷ್ಟಿಷ್ಟಲ್ಲ. ಕೆಲವೊಮ್ಮೆ ಪ್ಲಾನ್ ಎಂದು ಬಿಟ್ಟುಕೊಂಡು ಕೊನೆಗೆ ಮಕ್ಕಳಾಗದೇ ಪರಿತಪಿಸುವವರೂ ಇದ್ದಾರೆ. ಇನ್ನು ಕೆಲವೊಮ್ಮೆ ಮಕ್ಕಳಾಗಲಿ ಎಂದು ಪ್ರಯತ್ನಿಸಿದರೂ ಆಗುತ್ತಿರುವುದಿಲ್ಲ. ಆದರೆ, ಇದಕ್ಕೆ ಗ್ರಹಗತಿಗಳೂ ಕಾರಣವಾಗುತ್ತವೆ.

ನಿಮ್ಮ ಗ್ರಹಗತಿಗಳು ಹೇಗಿರುತ್ತವೆ? ಸಂತಾನಪ್ರಾಪ್ತಿ ಯೋಗ ಇದೆಯೆ? ಅಥವಾ ವಿಳಂಬವಾಗಿದೆಯೆ? ಎಂಬುದನ್ನು ಪ್ರಶ್ನೆ ಜ್ಯೋತಿಷ್ಯದಿಂದ ತಿಳಿದುಕೊಳ್ಳಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರಿಯಾದ ಯೋಗವಿದ್ದಾಗಲೇ ಸಂತಾನ ಪ್ರಾಪ್ತಿಯಾಗುತ್ತದೆ. ಆದರೆ, ಸಂತಾನ ಆಗದವರು ಪ್ರಶ್ನಾ ಜ್ಯೋತಿಷ್ಯ ಅನುಸಾರ ಪ್ರಶ್ನಾ ಕುಂಡಲಿಯನ್ನು ನೋಡಿಸಬಹುದಾಗಿದೆ. ಈ ಮೂಲಕ ಸಂತಾನಪ್ರಾಪ್ತಿ ಯೋಗದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಕೊರೋನಾದಿಂದ ಒಂದು ದೇಶವೇ ನಾಶವಾಗಲಿದೆ ಎಂದು ಕೋಡಿ ಶ್ರೀ

ಗರ್ಭಾವಸ್ಥೆ ಯೋಗ
ಪ್ರಶ್ನೆ ಕುಂಡಲಿ ನೋಡುವಾಗ ಲಗ್ನ ಮತ್ತು ಪಂಚಮದಲ್ಲಿ ಶುಭಗ್ರಹವಿದ್ದರೆ, ಗರ್ಭವತಿಯಾಗುತ್ತಾರೆ. ಏಳನೇ ಮತ್ತು ಐದನೇ ಲಗ್ನದಲ್ಲಿ ಅಥವಾ ಐದನೇ ಸ್ಥಾನದಲ್ಲಿ ಶುಭಗ್ರಹವಿದ್ದರೂ ಗರ್ಭಧರಿಸುತ್ತಾರೆ. ಲಗ್ನದಲ್ಲಿ ಐದನೇ ಮತ್ತು ಹನ್ನೊಂದನೇ ಸ್ಥಾನದಲ್ಲಿ ಶುಭಗ್ರಹವಿದ್ದರೂ ಸಂತಾನಪ್ರಾಪ್ತಿಯಾಗುತ್ತದೆ. ಶುಕ್ರ ಲಗ್ನದಲ್ಲಿ ಅಥವಾ ಐದನೇ ಮನೆಯಲ್ಲಿದ್ದರೂ ಅಥವಾ ದೃಷ್ಟಿ ಬೀಳುತ್ತಲಿದ್ದರೂ ಸಂತಾನಕ್ಕೆ ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ಪಂಚಮ ಮನೆಯ ಲಗ್ನದಲ್ಲಿ ಚಂದ್ರನಿದ್ದರೂ ಅಥವಾ ಲಗ್ನದಲ್ಲಿ ಬುಧನಿದ್ದರೂ ಈ ಫಲಪ್ರಾಪ್ತಿಯಾಗುವ ಸಂಕೇತ.

ಸಂತಾನಯೋಗದ ಶೀಘ್ರ/ವಿಳಂಬ ಫಲ
ಗ್ರಹಗಳಲ್ಲಿ ಲಗ್ನಾಧಿಪತಿ ಮತ್ತು ಕಾರ್ಯಾಧಿಪತಿಯ ಸಂಬಂಧವು ಯಾವ ರೀತಿ ಇರುತ್ತದೆ ಎಂಬ ನಿಟ್ಟಿನಲ್ಲಿ ಶೀಘ್ರ ಸಂತಾನ ಇರುತ್ತದೆ. ಲಗ್ನಾಧಿಪತಿಯು ಪಂಚಮದಲ್ಲಿದ್ದರೂ, ಪಂಚಾಮಾಧಿಪತಿಯು ಲಗ್ನದಲ್ಲಿದ್ದರೂ ಎರಡೂ ಲಗ್ನದಲ್ಲಿದ್ದರೂ, ಐದನೇ ಮನೆಯಲ್ಲಿ ಅಥವಾ ಯಾವುದಾದರೂ ಶುಭ ಸ್ಥಾನದಲ್ಲಿ ಸಂಯುಕ್ತ ರೂಪದಲ್ಲಿದ್ದರೆ ಸಂತಾನಸುಖ ಶೀಘ್ರ ಪ್ರಾಪ್ತಿಯಾಗಲಿದೆ. ಲಗ್ನಾಧಿಪತಿ ಮತ್ತು ಪಂಚಾಮಧಿಪತಿಯು ನಕ್ತ ಯೋಗದಲ್ಲಿದ್ದರೆ ಅಂತಹ ಸಮಯದಲ್ಲಿ ಸಂತಾನ ಪ್ರಾಪ್ತಿ ವಿಳಂಬವಾಗುತ್ತದೆ.

ಅಂದು ಕೊಂಡಿದ್ದು ಈಡೇರಬೇಕಾದರೆ ವಿಷ್ಣು ಸಹಸ್ರನಾಮ ಯಾಗ ಮಾಡಿ

ಅವಳಿ-ಜವಳಿ ಯೋಗ
ಮಗುವಿನ ಜನ್ಮ ಸಂಬಂಧಿತ ಪ್ರಶ್ನೆಯಲ್ಲಿ ಶುಭಗ್ರಹದ ಮೂಲಕ ದ್ವಿಸ್ವಭಾವ ಲಗ್ನ ಅವಳಿ-ಜವಳಿ ಮಕ್ಕಳ ಸಂಕೇತ ಕೊಡುತ್ತದೆ. ದ್ವಿಸ್ವಭಾವ ರಾಶಿ ಅಥವಾ ನವಾಂಶದಲ್ಲಿ ಚಂದ್ರನು ಸ್ಥಿತನಾಗಿದ್ದರೆ, ಶುಕ್ರ ಅಥವಾ ಮಂಗಳ ಬುಧನ ಮೇಲೆ ದೃಷ್ಟಿ ಬೀರಿದ್ದರೂ ಅವಳಿ-ಜವಳಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ. ಇದೇ ಗ್ರಹಗಳು ವಿಷಯ ಭಾಗದಲ್ಲಿದ್ದು, ದ್ವಿಸ್ವಭಾವ ರಾಶಿಯಲ್ಲಿದ್ದರೆ ಆಗ ಅವಳಿ-ಜವಳಿ ಗಂಡುಮಕ್ಕಳು ಜನಿಸುವ ಯೋಗ ಇರುತ್ತದೆ.

ಆರೋಗ್ಯಯುತ ಮಗುವಿನ ಯೋಗ
ಲಗ್ನದಲ್ಲಿ ಸ್ವರಾಶಿ ಅಥವಾ ಉಚ್ಛ ರಾಶಿಯಲ್ಲಿ ಪಂಚಮಾಧಿಪತಿಯು ಚಂದ್ರ ಅಥವಾ ಶುಭಗ್ರಹವು ಇದ್ದರೆ ಆಗ ಆರೋಗ್ಯಯುತ ಮಗುವು ಜನಿಸುವ ಯೋಗ ಇರುತ್ತದೆ. ಇದೇ ರೀತಿಯಲ್ಲಿ ಪಂಚಮಾಧಿಪತಿಯು ಚಂದ್ರ ಅಥವಾ ಪಂಚಮ ಮನೆಯಲ್ಲಿ ಶುಭ ಗ್ರಹವಿದ್ದರೆ ಇಲ್ಲವೇ ಶುಭ ಗ್ರಹವು ಪಂಚಮಾಧಿಪತಿಯತ್ತ ದೃಷ್ಟಿ ಹಾಯಿಸಿದ್ದರೂ ಆರೋಗ್ಯವಂತ ಮಗು ಪ್ರಾಪ್ತಿಯಾಗಲಿದೆ. ಶುಕ್ಲಪಕ್ಷದ ಸಮಯದಲ್ಲಿ ಕೇಳಿರುವ ಪ್ರಶ್ನೆಯಲ್ಲಿ ಹಾಗೂ ಹನ್ನೆರಡನೇ ಮನೆಯಲ್ಲಿ ಶುಭಗ್ರಹದ ಜೊತೆ ಚಂದ್ರನಿದ್ದರೂ ಮಗು ಆರೋಗ್ಯವಾಗಿ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಪ್ರಧಾನಿ ಮೋದಿಯವರಿಗೆ ಬೆಸ ಸಂಖ್ಯೆ ಮೇಲೇಕೆ ಪ್ರೀತಿ

ದತ್ತು ಪಡೆಯುವ ಯೋಗ
ಪಂಚಮ ಮನೆಯಲ್ಲಿ ಪೂರ್ವ ಪುಣ್ಯದ ಜೊತೆಗೆ ಬುಧ ಅಥವಾ ಶನಿ ಇದ್ದರೆ ಆಗ ಮಗುವನ್ನು ದತ್ತು ಪಡೆಯುವ ಯೋಗ ಇದೆ ಎಂದು ಹೇಳಲಾಗುತ್ತದೆ.

"

Follow Us:
Download App:
  • android
  • ios