ಊಟ ಬಿಟ್ಟು, ವಿಷ ಸೇವಿಸಿ 3 ವರ್ಷ ಕಠಿಣ ಡಯಟ್ ಮಾಡಿದ ಜಪಾನ್ ಸನ್ಯಾಸಿಗಳು!
ಸನ್ಯಾಸಿಗಳ ಜೀವನಶೈಲಿ ಕಠಿಣವಾಗಿರುತ್ತದೆ. ಸಾಮಾನ್ಯ ಇದನ್ನು ಪಾಲಿಸೋದು ಕಷ್ಟ. ಅದ್ರಲ್ಲೂ ಕೆಲ ಸನ್ಯಾಸಿಗಳು ಅಸಾಧ್ಯವಾದ ಕೆಲಸ ಮಾಡಿದ್ದಾರೆ. ಅದೇ ಕಾರಣಕ್ಕೆ ಈಗ್ಲೂ ಅವರ ಹೆಸರು, ಸಮಾಧಿ ಪ್ರಸಿದ್ಧಿ ಪಡೆದಿದೆ.
ಸಾಧು – ಸಂತರ ಜೀವನ ಭಿನ್ನವಾಗಿರುತ್ತದೆ. ಅವರು ನಮ್ಮಂತೆ ಜೀವನ ನಡೆಸೋದಿಲ್ಲ. ಕೆಲವೊಂದು ಕುತೂಹಲ ಹುಟ್ಟಿಸುವಂತಹ ಹಾಗೂ ಅಚ್ಚರಿಯ ಜೀವನ ಶೈಲಿಯನ್ನು ಅವರು ಅಳವಡಿಸಿಕೊಂಡಿರುತ್ತಾರೆ. ಮೋಕ್ಷ ಪ್ರಾಪ್ತಿ ಅವರ ಗುರಿಯಾಗಿರುವ ಕಾರಣ ಅದನ್ನು ಪೂರೈಸಲು ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ನಮ್ಮ ಜೀವನದ ಸುಖವನ್ನು ತ್ಯಾಗ ಮಾಡುವ ಅವರು, ಮೋಕ್ಷಕ್ಕಾಗಿ ಕಠಿಣ ಸವಾಲುಗಳನ್ನು ಎದುರಿಸುತ್ತಾರೆ. ಇಂಥ ಸಂತರಲ್ಲಿ ಜಪಾನ್‌ನ ಸನ್ಯಾಸಿಗಳು ಸಹ ಸೇರಿದ್ದಾರೆ.
ತ್ಯಾಗದಲ್ಲಿ ಜಪಾನ್ (Japan) ಸನ್ಯಾಸಿಗಳು ಮುಂದಿದ್ದಾರೆ. ಜಪಾನ್ ನ ಹಿಂದಿನ ಸನ್ಯಾಸಿ (Monk) ಗಗಳು ಬದುಕಿರುವಾಗಲೇ ಮಮ್ಮಿಯಾಗಿ ಬದಲಾಗುತ್ತಿದ್ದರು. ಸತ್ತ (Dead) ನಂತರವೂ ಅವರ ದೇಹ ಕೊಳೆಯಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಇಂದಿಗೂ ಈ ಸನ್ಯಾಸಿಗಳ ಮೃತ ದೇಹಗಳನ್ನು ನೋಡಲು ಜನರು ದೂರದೂರುಗಳಿಂದ ಇಲ್ಲಿಗೆ ಬರುತ್ತಾರೆ. ಪ್ರಾಚೀನ ಜಪಾನಿನ ಸನ್ಯಾಸಿಗಳನ್ನು ಸೊಕುಶಿನ್ಬುಟ್ಸು ಎಂದು ಕರೆಯಲಾಗುತ್ತದೆ. ಅವರು ಆಹಾರ ಮತ್ತು ನೀರಿಲ್ಲದೆ ವಾಸಿಸುತ್ತಿದ್ದರು. ಒಂದ್ವೇಳೆ ಅವರಿಹೆ ನೀರು ಹಾಗೂ ಆಹಾರ ಇಲ್ಲದೆ ಇರಲು ಕಷ್ಟವಾಗುತ್ತದೆ ಎಂದಾದ್ರೆ ಅವರು ವಿಷ ಕುಡಿಯುತ್ತಿದ್ದರು. ಅವರು ಶುಗೆಂಡೋ ಎಂಬ ಬೌದ್ಧಧರ್ಮದ ಪ್ರಾಚೀನ ಅಭ್ಯಾಸವನ್ನು ಅನುಸರಿಸುತ್ತಿದ್ದರು.
30 ವರ್ಷ ನಂತರ ಶನಿ ಹಿಮ್ಮುಖ, ಈ ಮೂರು ರಾಶಿಗೆ ದಿಢೀರ್ ಸಂಪತ್ತು ಸಿಗುತ್ತದೆಯೇ? ಜೂನ್ ನಿಂದ ಮೂರು ರಾಶಿಗೆ ಅದೃಷ್ಟ
ಇಷ್ಟು ಕಠಿಣವಾಗಿರುತ್ತಿತ್ತು ಬೌದ್ಧ ಭಿಕ್ಷುಗಳ ಜೀವನ : ಮೂರು ವರ್ಷಗಳ ಕಾಲ ಬೌದ್ಧ ಭಿಕ್ಷುಗಳು ವಿಶೇಷ ಡಯಟ್ ನಲ್ಲಿ ಇರ್ತಿದ್ದರು. ಅವರು ಈ ಸಮಯದಲ್ಲಿ ನಟ್ಸ್ ಮತ್ತು ಕೆಲ ಬೀಜಗಳನ್ನು ತಿನ್ನುತ್ತಿದ್ದರು. ದೇಹದ ಕೊಬ್ಬನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಮುಂದಿನ ಮೂರು ವರ್ಷಗಳ ಕಾಲ ಅವರು ತೊಗಟೆ ಮತ್ತು ಬೇರುಗಳನ್ನು ತಿನ್ನುತ್ತಿದ್ದರು. ಇದರೊಂದಿಗೆ ಉರುಶಿ ಮರದ ರಸದಿಂದ ತಯಾರಿಸಿದ ವಿಷಯುಕ್ತ ಚಹಾವನ್ನು ಕುಡಿಯಲು ಆರಂಭಿಸಿದರು. ಇದರ ತೊಗಟೆಯು ವಿಷಕಾರಿ ಅಂಶವನ್ನು ಹೊಂದಿರುತ್ತದೆ. ಇದರ ಸೇವನೆ ಮಾಡೋದ್ರಿಂದ ಸನ್ಯಾಸಿಗಳಿಗೆ ವಾಂತಿಯಾಗುತ್ತಿತ್ತು. ದೇಹದಲ್ಲಿ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿತ್ತು.
ಸನ್ಯಾಸಿಗಳು ಈ ರೀತಿ ಜೀವನ ಕ್ರಮ ಅಳವಡಿಕೆ ಮಾಡಿಕೊಳ್ತಿದ್ದ ಕಾರಣ, ಸನ್ಯಾಸಿಗಳಿಗೆ ಸಾವಿನ ನಂತರ ತಮ್ಮ ದೇಹವನ್ನು ಸಂರಕ್ಷಿಸಲು ಸಹಾಯವಾಯ್ತು ಎನ್ನಲಾಗಿದೆ. ಏಕೆಂದರೆ ಇದು ದೇಹದಲ್ಲಿರುವ ಎಲ್ಲಾ ಹುಳುಗಳು ಮತ್ತು ಪರಾವಲಂಬಿಗಳನ್ನು ಕೊಲ್ಲುತ್ತದೆ. ಹುಳು ಹಾಗೂ ಪರಾವಲಂಬಿ ದೇಹದಲ್ಲಿದ್ದಾಗ ದೇಹ ಕೊಳೆಯಲು ಶುರುವಾಗುತ್ತದೆ. ಅದೇ ಇವು ದೇಹದಲ್ಲಿ ಇಲ್ಲ ಎಂದಾಗ ದೇಹ ಕೊಳೆಯುವುದಿಲ್ಲ. ಈ ಡಯಟನ್ನು 1000 ದಿನಗಳ ಕಾಲ ಅಂದರೆ ಸುಮಾರು ಮೂರು ವರ್ಷಗಳ ಕಾಲ ಮಾಡಿದ ನಂತರ ಸನ್ಯಾಸಿಗಳು, ಮುಂದಿನ 100 ದಿನಗಳವರೆಗೆ ಆಹಾರ ಮತ್ತು ನೀರನ್ನು ಸೇವಿಸುತ್ತಿರಲಿಲ್ಲ. ಸ್ವಲ್ಪ ಪ್ರಮಾಣದ ಉಪ್ಪು ನೀರನ್ನು ಕುಡಿಯುತ್ತಿದ್ದರು. ಇದಾದ ನಂತ್ರ ಅವರು ತಮ್ಮ ಸಾವನ್ನು ಎದುರು ನೋಡ್ತಿದ್ದರು. ಅದಕ್ಕಾಗಿ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು. ಸಾವು ಹತ್ತಿರ ಬರ್ತಿದೆ ಎನ್ನುವ ಸಮಯದಲ್ಲಿ ಒಂದು ಪಟ್ಟಿಗೆಯಲ್ಲಿ ತಮ್ಮನ್ನು ಹಾಕಿ, ಅದನ್ನು ಮೂರು ಮೀಟರ್ ಆಳದ ಗುಂಡಿಯ ಕೆಳಭಾಗದಲ್ಲಿ ಇಡುವಂತೆ ಹೇಳುತ್ತಿದ್ದರು. ಸನ್ಯಾಸಿಗಳು ಆಳವಾದ ಶವಪೆಟ್ಟಿಗೆಯಲ್ಲಿ ಧ್ಯಾನ ಮಾಡುತ್ತಿದ್ದರು. ಗಾಳಿಗಾಗಿ ಪೈಪ್ ಮತ್ತು ಬೆಲ್ ಕೂಡ ಇತ್ತು.
ನಿಜವಾದ ಪ್ರೀತಿ ದೊರೆಯೋಕೆ ನಿಮಗೆ ಎಷ್ಟು ವರ್ಷವಾಗಿರ್ಬೇಕು ಗೊತ್ತಾ?
ಆಗಾಗ ಗಂಟೆ ಬಾರಿಸುತ್ತಿದ್ದರೆ ಅವರು ಬದುಕಿದ್ದಾರೆ ಎಂದರ್ಥವಾಗಿತ್ತು. ದೀರ್ಘಕಾಲ ಗಂಟೆ ಬಾರಿಸಿಲ್ಲವೆಂದ್ರೆ ಅವರು ಸಾವನ್ನಪ್ಪಿದ್ದಾರೆ ಎಂದು ಶಿಷ್ಯರು ಭಾವಿಸುತ್ತಿದ್ದರು. ಎಲ್ಲರ ಶವವೂ ಸುರಕ್ಷಿತವಾಗಿರುತ್ತಿರಲಿಲ್ಲ. ಕೆಲವರ ಶವ ಕೊಳೆತಿರುತ್ತಿತ್ತು. ಸುರಕ್ಷಿತವಾಗಿದ್ದ ಶವಕ್ಕೂ ಪೂಜೆ ನಡೆಯೋದಿಲ್ಲ. ಒಂಬತ್ತನೇ ಶತಮಾನದಲ್ಲಿ ಸನ್ಯಾಸಿಗಳು ಕುಕೈ ಎಂಬ ಸನ್ಯಾಸಿಯ ಜೀವನಶೈಲಿಯನ್ನು ಅಳವಡಿಸಿಕೊಂಡರು ಎಂದು ನಂಬಲಾಗಿದೆ. ಸನ್ಯಾಸಿಗಳು ಸಾವನ್ನಪ್ಪೋದಿಲ್ಲ ಅವರು ಧ್ಯಾನ ಮಾಡ್ತಾರೆ ಎಂದು ನಂಬಲಾಗಿದೆ. ಯುಡೊನೊ ಪರ್ವತದ ಪ್ರಸಿದ್ಧ ಡೈನಿಚಿ ಬು ದೇವಾಲಯದಲ್ಲಿ 6 ಸನ್ಯಾಸಿಗಳ ಶವವಿದೆ.