Asianet Suvarna News Asianet Suvarna News

ನೀವು ಹೇಗೆ ಸಾಯುತ್ತೀರಿ? ನಿಮ್ಮ ಜನ್ಮರಾಶಿ ಆ ಬಗ್ಗೆ ಏನು ಹೇಳುತ್ತೆ?

ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿದುದು ಎಂಬಂತೆ, ಜನ್ಮರಾಶಿಗೂ ಸಾವಿಗೂ ಸಂಬಂಧವಿದೆ.  ಇಲ್ಲಿರುವ ಎಲ್ಲ ಬಗೆಯ ಸಾವುಗಳೂ ಸಂಭವನೀಯ ಅಷ್ಟೇ; ಜೀವನಶೈಲಿ ಆರೋಗ್ಯಕರವಾಗಿದ್ದರೆ, ಶನಿಯಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು ನಿಮ್ಮನ್ನು ರಕ್ಷಿಸಿದರೆ, ಅಪಮೃತ್ಯಗಳು ಕಾಡಲಾರವು ಎಂಬುದನ್ನೂ ನೆನಪಿನಲ್ಲಿಡಬೇಕು.

How you die according to your zodiac signs
Author
Bengaluru, First Published Feb 7, 2020, 12:02 PM IST

ಪ್ರತಿಯೊಬ್ಬನಿಗೂ ಒಂದು ಜನನ ರಾಶಿ ಇರುತ್ತೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಪಂಚಭೂತಗಳಲ್ಲಿ ಒಂದು ನಿಮ್ಮದಾಗಿರುತ್ತೆ. ಹೀಗಾಗಿ ನಮ್ಮ ನಿಮ್ಮ ಸಾವು ಕೂಡ ಈ ಐದು ಭೂತಗಳಿಗೆ ಸಂಬಂಧಿಸಿದ ಹಾಗೆಯೇ ಇರುವುದು ಸ್ವಾಭಾವಿಕ. ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿದುದು ಎಂಬಂತೆ, ಜನ್ಮರಾಶಿಗೂ ಸಾವಿಗೂ ಸಂಬಂಧವಿದೆ. ಅದು ನೂರಕ್ಕೆ ನೂರು ನಿಜವಾಗದೇ ಹೋಗಬಹುದು; ಯಾಕೆಂದರೆ ಜನ್ಮರಾಶಿಯ ಜೊತೆಗೆ ವ್ಯಕ್ತಿಯ ಲೈಫ್‌ಸ್ಟೈಲ್‌ ಕೂಡ ಇಲ್ಲಿ ಕೌಂಟ್‌ ಆಗುತ್ತೆ. ಇಲ್ಲಿರುವ ಎಲ್ಲ ಬಗೆಯ ಸಾವುಗಳೂ ಸಂಭವನೀಯ ಅಷ್ಟೇ; ಜೀವನಶೈಲಿ ಆರೋಗ್ಯಕರವಾಗಿದ್ದರೆ, ಶನಿಯಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು ನಿಮ್ಮನ್ನು ರಕ್ಷಿಸಿದರೆ, ಅಪಮೃತ್ಯಗಳು ಕಾಡಲಾರವು ಎಂಬುದನ್ನೂ ನೆನಪಿನಲ್ಲಿಡಬೇಕು.

ಮೇಷ ರಾಶಿ

ಗುಣ: ಬೆಂಕಿ

ನಿಮಗೆ ಬೆಂಕಿ ಆಕಸ್ಮಿಕದಲ್ಲಿ ಸಾಯುವ ದುರ್ಯೋಗ ಇರಬಹುದು. ಹಾಗೆ ಇರಲೇಬೇಕೆಂದೇನಿಲ್ಲ. ಆಯುಷ್ಯ ಮುಗಿದು ಸಹಜ ಸಾವು ಕಂಡು, ಚಿತೆಯ ಬೆಂಕಿಯಲ್ಲಿ ಸುಟ್ಟುಹೋಗುವ ವಿಧಿಯೂ ಇರಬಹುದು. ಇದು ನಿಮ್ಮ ಇತರ ಗ್ರಹಗಳ ಸ್ಥಾನ, ಜೀವನಶೈಲಿಯನ್ನು ಅವಲಂಬಿಸಿರುತ್ತೆ.

 

ವೃಷಭ ರಾಶಿ

ಗುಣ: ಭೂಮಿ

ಸಾಮಾನ್ಯವಾಗಿ ನೀವು ಹೃದಯಾಘಾತದಂಥ ಸಹಜ ಸಾವು ಕಾಣುವುದೇ ಹೆಚ್ಚು. .ಅದೂ ಕೂಡ ತುಂಬು ಬಾಳನ್ನು ಬದುಕಿದ ನಂತರವೇ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಬೇಕು.

 

ಮಿಥುನ ರಾಶಿ

ಗುಣ: ಗಾಳಿ

ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಅದರಿಂದಲೇ ಸಾವೂ ಉಂಟಾಗಬಹುದು. ಒನ್ಸ್ ಎಗೇಯ್ನ್, ಲೈಫ್‌ಸ್ಟೈಲ್‌ ಆರೋಗ್ಯಕರವಾಗಿ ಇದ್ದರೆ ಲಿವರ್‌ಗೆ ಏನೂ ಸಮಸ್ಯೆ ಆಗದು. ಆದರೆ ಔಷಧಗಳ ಓವರ್‌ಡೋಸ್‌ ಬಗ್ಗೆ ಎಚ್ಚರ ಅಗತ್ಯ.

 

ಜೇಬಿಗೆ ಹೊರೆಯಾಗದಂತೆ ಮನೆ ಅಂದ ಹೆಚ್ಚಿಸುವುದು ಹೇಗೆ?

 

ಕಟಕ ರಾಶಿ

ಗುಣ: ನೀರು

ಮೂತ್ರಕೋಶ ಸಂಬಂಧಿತ ಕಾಯಿಲೆ, ಕಿಡ್ನಿ ಪ್ರಾಬ್ಲೆಮ್‌ಗಳು ನಿಮ್ಮನ್ನು ಕಾಡಬಹುದು. ಚೆನ್ನಾಗಿ ನೀರು, ದ್ರವಪದಾರ್ಥ ಕುಡಿಯುವುದು ಅಗತ್ಯ. ಆರಂಭದಿಂದಲೂ ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು.

 

ಸಿಂಹ ರಾಶಿ

ಗುಣ: ಬೆಂಕಿ

ಮಾರಕ ರೋಗವೊಂದು ನಿಮ್ಮನ್ನು ಕಾಡಬಹುದು. ಉದಾಹರಣೆಗೆ ಕ್ಯಾನ್ಸರ್‌ ಇತ್ಯಾದಿ. ಧೂಮಪಾನ, ಮಧ್ಯಪಾನದಂಥ ಅಭ್ಯಾಸಗಳು ಇದ್ದರೆ ಅವುಗಳಿಂದ ದೂರ ಉಳಿಯಲು ಮನಸ್ಸು ಮಾಡಿ. ಈ ಅಭ್ಯಾಸಗಳಿಲ್ಲದೆಯೂ ಕಾಯಿಲೆ ಬರುವ ಚಾನ್ಸ್ ಇದ್ದೇ ಇದೆ.

 

ರೂಪವತಿ, ಗುಣವತಿಯಾಗಿರೋ ಸ್ತ್ರೀ ಜಾತಕ ಹೇಗಿರುತ್ತೆ?

 

ಕನ್ಯಾ ರಾಶಿ

ಗುಣ: ಭೂಮಿ

ನೀವು ಬಹಳ ಕಾಲ ಈ ಭೂಮಿಯ ಮೇಲೆ ಬದುಕಿರುತ್ತೀರಿ. ಸಾವು ಸಹಜವಾಗಿಯೇ ಆಯುಷ್ಯಪೂರ್ತಿಯಾಗಿ ಬರಬಹುದು. ಬಂಧುಬಳಗದ ಜೊತೆಗೆ ಇದ್ದುಕೊಂಡೇ ಸಾವು ಕಾಣುವ ಸುಯೋಗ ಇದೆ.

 

ತುಲಾ ರಾಶಿ

ಗುಣ: ಗಾಳಿ

ನೀವು ಸಾಯುವ ವೇಳೆಯಲ್ಲಿ ಅತ್ಯಂತ ಆಪ್ತರು, ನಿಮ್ಮ ಜೀವನದಲ್ಲಿ ಸದಾ ಕಾಲ ನಿಮ್ಮ ಜೊತೆಗೆ ಇದ್ದವರು ಇಲ್ಲದೇ ಹೋಗುವಂಥ ಸನ್ನಿವೇಶ ಬರಬಹುದು. ಅವರಿದ್ದರೆ ನಿಮ್ಮನ್ನು ಉಳಿಸಿಕೊಳ್ಳಬಹುದು. ಹೀಗಾಗಿ ಸಂಗಾತಿಗಳನ್ನು ಪ್ರೀತಿಸಿ.

 

ವೃಶ್ಚಿಕ ರಾಶಿ

ಗುಣ: ನೀರು

ಉಸಿರುಗಟ್ಟಿ ಸಾಯಬಹುದು. ಇದು ಬಹಳ ಕಾರಣಗಳಿಂದ ಉಂಟಾಗಬಹುದು. ಕೆಲವೊಮ್ಮೆ ಸಹಜ ಸಾವು ಕೂಡ ಉಸಿರುಗಟ್ಟಿಯೇ ನಡೆಯುವುದಾಗಿರುತ್ತದೆ. ಆದರೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಬಹುದು, ಬಂದ್‌ ಆದ ಸ್ಥಳಗಳಲ್ಲಿ ಕೂಡ ಉಸಿರುಗಟ್ಟಬಹುದು. ಇಕ್ಕಟ್ಟಾದ ಪ್ರದೇಶಗಳಲ್ಲಿ ಹುಷಾರಾಗಿರಬೇಕು.

 

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

 

ಧನು ರಾಶಿ

ಗುಣ: ಬೆಂಕಿ

ಆತ್ಮಹತ್ಯೆಯ ಲಕ್ಷಣಗಳು ಇವೆ. ಆದರೆ ಇವರು ಉತ್ತಮ ಕುಟುಂಬ, ಹಣಕಾಸು ಹಾಗೂ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆಗಳಿಂದ ಜರ್ಝರಿತಗೊಂಡಾಗ ಈ ರಾಶಿಯವರು ಆತ್ಮಹತ್ಯೆ ಬಗ್ಗೆ ಯೋಚಿಸಲೇಬಾರದು.

 

ಮಕರ ರಾಶಿ

ಗುಣ: ಭೂಮಿ

ಶತ್ರುಗಳಿಂದ ಸಾವು ಬರುವ ಸಾಧ್ಯತೆ ಇದೆ, ಇದಕ್ಕೆ ಸಿಂಪಲ್‌ ಪರಿಹಾರ ಎಂದರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ ಅಷ್ಟೇ. ಸಿಟ್ಟು, ದುಡುಕು, ಮುಂಗೋಪ, ಬಾಯಿಚಪಲ, ಚಾಡಿಯಂಥ ಗುಣಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಒಳಿತು, ಹಿತಶತ್ರುಗಳೂ ಗಮನದಲ್ಲಿರಲಿ.

 

ಕುಂಭ ರಾಶಿ

ಗುಣ; ಗಾಳಿ

ಆಹಾರದಿಂದಲೇ ನಿಮಗೆ ತೊಂದರೆ. ಯಾವ ಆಹಾರ ಎಂದು ಚಿಂತಿಸಿ ಫಲವಿಲ್ಲ. ಅದು ನಿಮ್ಮ ಪ್ರೀತಿಯ ಆಹಾರವೇ ಆಗಿರಬಹುದು, ಅನಿಷ್ಟದ ಆಹಾರ ಕೂಡ ಇರಬಹುದು. ಆಯುಷ್ಯ ಮುಗಿದಾಗ ಸೇವಿಸುವ ಎಲ್ಲ ಆಹಾರವೂ ವ್ಯರ್ಥವೇ. ಆದರೆ ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.

 

ಮೀನ ರಾಶಿ

ಗುಣ: ನೀರು

ನೀವು ಸಾಯುವ ಹೊತ್ತಿಗೆ ಬದುಕನ್ನು ಪೂರ್ತಿಯಾಗಿ ರುಚಿ ನೋಡಿರುತ್ತೀರಿ. ಸಾಕಷ್ಟು ಹೆಸರು, ಹೊಗಳಿಕೆ ಸಿಕ್ಕಿರುತ್ತದೆ. ಬಂಧುಮಿತ್ರರು ಅಕ್ಕಪಕ್ಕದಲ್ಲಿರುವ ಚಾನ್ಸ್ ಇದೆ. ನೆಮ್ಮದಿಯ ಸಾವನ್ನು ಕಾಣುವ ಸಾಧ್ಯತೆ ಇದೆ.

Follow Us:
Download App:
  • android
  • ios