Asianet Suvarna News Asianet Suvarna News

ಕೊಂಡವರಿಗೆಲ್ಲ ಲಾಟರಿ ಏಕೆ ಹೊಡೆಯೋಲ್ಲ? ಅಂಥವರ ಜಾತಕ ಹೀಗಿರುತ್ತೆ ನೋಡಿ..

ಅನೇಕರಿಗೆ ಲಾಟರಿ ಕೊಳ್ಳುವ ಹುಚ್ಚಿರುತ್ತದೆ. ಆದರೆ, ಲಕ್ ಎನ್ನುವುದು ಎಲ್ಲರಿಗೂ ಇರೋಲ್ಲ. ಎಲ್ಲಿಯೋ ಕೆಲವರಿಗೆ ಮಾತ್ರ ಲಕ್ಷ, ಕೋಟಿ ಲಾಟರಿ ಹೊಡೆಯುತ್ತೆ. ಅಷ್ಟಕ್ಕೂ ಈ ರೀತಿ ಅದೃಷ್ಟ ಇರುತ್ತಲ್ಲ ಅವರ ಜಾತಕ ಹೇಗಿರುತ್ತೆ? ರವಿ ಯಾವ ಮನೆಯಲ್ಲಿರುತ್ತಾನೆ? ನಿಮ್ಮ ಜಾತಕದಲ್ಲಿ ರವಿ ಈ ಸ್ಥಾನದಲ್ಲಿದ್ದಾನಾ? ಚೆಕ್ ಮಾಡಿಕೊಳ್ಳಿ, ನಿಮಗೂ ಒಂದಲ್ಲ ಒಂದು ದಿನ ಲಾಟರಿ ಹೊಡೆಬಹುದು...
 

how to attract wealth according to astrology signs
Author
Bangalore, First Published Jan 11, 2020, 1:12 PM IST

ಹುಟ್ಟಿದ ಎಲ್ಲ ಮನುಷ್ಯರಿಗೆ ವಿಧಿ ಲಾಟರಿ ಸಿಗುವುದಿಲ್ಲ. ಅಂತಹ ಯೋಗವನ್ನು ಪಡೆದವರಿಗೆ ಮಾತ್ರ ಲಾಟರಿ ನಿಧಿ ಸಿಗುತ್ತದೆ. ಇದಕ್ಕೆ ಅವರವರ ಗ್ರಹಗತಿಗಳೇ ಕಾರಣ. ಜಾತಕದಲ್ಲಿ ಬುಧ, ಶುಕ್ರ, ರವಿ, ಮಂಗಳ ಗ್ರಹಗಳು ಬಲಿಷ್ಠರಾಗಿದ್ದರೆ ಇಂತವರಿಗೆ ಲಾಟ್ರಿ ಬಂದೇ ಬರುತ್ತದೆ. ಚಂದ್ರನಿAದ ಅಥವಾ ಲಗ್ನದಿಂದ ಮೂರನೇ, ಆರನೇ, ಎಂಟನೇ ಅಥವಾ ಹನ್ನೊಂದನೆ ಮನೆಯಲ್ಲಿ ಬಲಿಷ್ಠನಾದ ರವಿ ಇದ್ದರೆ ಇವರಿಗೆ ಮಟ್ಕಾ ಇಲ್ಲವೇ ಕುದುರೆ ರೇಸ್‌ನಲ್ಲಿ ಭಾರೀ ಧನಲಾಭವಾಗುತ್ತದೆ. ಮೂರನೇ, ಆರನೇ, ಎಂಟನೇ ಅಥವಾ ಹನ್ನೊಂದನೇಯ ಮನೆಯ ರವಿಯೊಂದಿಗೆ ಲಗ್ನಾಧಿಪತಿ ಇಲ್ಲವೆ ಚಂದ್ರನ ಯೋಗವಾದರೆ ಇವರಿಗೆ ಒಂದಲ್ಲ ಒಂದು ರೀತಿಯಿಂದ ಧನಲಾಭವಾಗುತ್ತದೆ. ಮಟ್ಕಾವನ್ನು ಆಡುವವರು ಜಾತಕದಲ್ಲಿ ಬುಧ, ಶುಕ್ರ ಮತ್ತು ಮಂಗಳ ಈ ಗ್ರಹಗಳ ಬಲಿಷ್ಠ ಇದ್ದರೆ ಇವರಿಗೆ ನಿರಂತರ ಧನಲಾಭವಾಗುತ್ತದೆ.

2020ರಲ್ಲಿ ಸಂಗಾತಿ ಸಿಗೋ ಲಕ್‌ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!

ಮಟ್ಕಾ ವ್ಯವಹಾರವನ್ನು ಮಾಡುವವರಿಗೆ ಅವರ ಕುಂಡಲಿಯಲ್ಲಿ ಚಂದ್ರ-ಕುಜ, ರವಿ-ಚಂದ್ರ, ಚಂದ್ರ-ಬುಧ, ಚಂದ್ರ-ಶುಕ್ರ, ರವಿ-ಶುಕ್ರ, ರವಿ-ಬುಧ, ರವಿ-ಕುಜ, ಕುಜ-ಬುಧ, ಕುಜ-ಶುಕ್ರ ಇದೇ ಬರುತ್ತದೆ. ಇದು ಎರಡನೇ, ನಾಲ್ಕನೇ, ಐದನೇ ಒಂಭತ್ತನೇ, ಹತ್ತನೇ ಅಥವಾ ಹನ್ನೊಂದನೇ ಯಾವುದಾದರೂ ಒಂದು ಮನೆಯಲ್ಲಿದ್ದಾರೆ ಇದರ ಫಲ ಸಿಗುತ್ತದೆ. ಅದಲ್ಲದೆ ಈ ಯೋಗದಲ್ಲಿ ಲಗ್ನಾಧಿಪತಿ ಇದ್ದರೆ ಅಥವಾ ಭಾಗ್ಯಾಧಿಪತಿಯು ಕೂಡಿದರೆ ಇಂತಹ ಜಾತಕದವರಿಗೆ ಭಾರೀ ಧನಲಾಭವಾಗುತ್ತದೆ. ಮೇಲಿನ ಯೋಗದಲ್ಲಿ, ರಾಹುಗ್ರಹವು ಸೇರಿಕೊಂಡರೆ ಅಂತಹವರಿಗೆ ನಿರೀಕ್ಷಿಸಿದ ಧನಲಾಭವಾಗುತ್ತದೆ.

ಜನ್ಮಕುಂಡಲಿಯಲ್ಲಿ ಧನಯೋಗದ ಗ್ರಹಗತಿಯು ಬಲಿಷ್ಠವಾಗಿದ್ದರೆ ಇವರಿಗೆ ಮಟ್ಕಾ ವ್ಯವಹಾರದಿಂದ ಬಾರೀ ಧನಲಾಭವಾಗುತ್ತದೆ.  ಜಾತಕನಿಗೆ ಧನಯೋಗವಿರದೆ ಬೇರೆ ಯೋಗ ಇದ್ದರೆ, ಹಣ ಸಂಪಾದಿಸಿದರೂ ಈ ಹಣವು ಅವರ ಕೊನೆಯವರೆಗೆ ಉಳಿಯುವುದಿಲ್ಲ.  ಲಗ್ನದ ಅಧಿಪತಿಯು ಬೇರೆ ಗ್ರಹಗಳ ಅಧೀನದಲ್ಲಿದ್ದು, ಇದರಿಂದ ದೂಷಿತವಾಗಿದ್ದು, ಅಥವಾ ತಾರಕ ಗ್ರಹ ಚಂದ್ರ, ಬಲಹೀನರಾಗಿದ್ದರೆ ಇವರಿಗೆ ತಮ್ಮ ಇಷ್ಟ ಫಲ ಸಿದ್ಧಿಯು ಆಗುವುದೇ ಇಲ್ಲ. ಇದರಿಂದ ಮಟ್ಕಾ ವ್ಯವಹಾರದಿಂದ ಭಾರೀ ನಷ್ಟ ಅನುಭವಿಸುತ್ತಾನೆ.

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!

 ಕುಂಡಲಿಯಲ್ಲಿ ದ್ವಿತೀಯ ಪಂಚಮ ಅಷ್ಟಮ ಹಾಗೂ ಏಕಾದಶ ಸ್ಥಾನಗಳಲ್ಲಿ ಪಾಪಗ್ರಹಗಳು ಇದ್ದರೆ ಇವರಿಗೆ ಬಹಳ ಕಷ್ಟದಿಂದ ಧನಲಾಭವಾಗುತ್ತದೆ. ತೃತೀಯ ಷಷ್ಠ, ನವಮ ಹಾಗೂ ದ್ವಾದಶ ಸ್ಥಾನಗಳಲ್ಲಿ ಶುಭಗ್ರಹಗಳಿದ್ದರೆ ಮೇಲಿನ ಯೋಗಕ್ಕೆ ಫಲಕಾರಿಯಾಗುತ್ತದೆ. ಲಗ್ನಾಧಿಪತಿಯು, ದ್ವಿತೀಯ ಷಷ್ಟ, ಸಪ್ತಮ, ದಶಮ ಈ ಸ್ಥಾನಗಳಲ್ಲಿ ಯಾವುದಾದರೊಂದು ಸ್ಥಾನದಲ್ಲಿ ಬಲಿಷ್ಠ ಗ್ರಹದೊಂದಿಗೆ ಮುಕ್ತವಾಗಿದ್ದರೆ ಇವರಿಗೆ ಧನಯೋಗವಾಗುತ್ತದೆ. ಮೇಲೆ ಹೇಳಿದ ಸ್ಥಾನಗಳಲ್ಲಿ ಗೋಚರದ ಗುರುವಿನ ದೃಷ್ಟಿ ಇದ್ದರೆ ಇಂತಹವರಿಗೆ ಲಾಭ ಬರುವ ಕಾಲವೆಂದು ಹೇಳಬಹುದು. ದ್ವಿತೀಯದಲ್ಲಿ ಸ್ಥಿರಗ್ರಹ. ದ್ವಾದಶದಲ್ಲಿ ಚರಗ್ರಹ, ಲಗ್ನದಲ್ಲಿ ಶುಭಗ್ರಹ ಇದ್ದರೆ ಇಂತಹವರಿಗೆ ಆಕಸ್ಮಿಕ ಧನಲಾಭವಾಗುತ್ತದೆ. ಷಷ್ಟ, ಸಪ್ತಮ, ಅಷ್ಟಮ ಸ್ಥಾನಗಳಲ್ಲಿ ಶುಭಗ್ರಹಗಳಿದ್ದು, ಪಂಚಮ ಸ್ಥಾನದಲ್ಲಿ ಚರ ಗ್ರಹವು ನವಮದಲ್ಲಿ ಸ್ಥಿರಗ್ರಹವಿದ್ದರೆ ಇಂತಹವರಿಗೆ ಆಕಸ್ಮಿಕವಾಗಿ ಧನಪ್ರಾಪ್ತಿಯಾಗುತ್ತದೆ. ಕುಂಡಲಿಯಲ್ಲಿ ದ್ವಿತೀಯದಲ್ಲಿ ಗುರು ಇದ್ದರೆ ಜಾತಕನು ಬಹಳ ಶ್ರೀಮಂತನೆAದು ಹೇಳಬಹುದು. ಕುಂಡಲಿಯಲ್ಲಿ ಗುರು-ಚಂದ್ರ, ಬುಧ-ಶುಕ್ರ ಈ ಯೋಗ ಇದ್ದರೆ ಇವರ ಹಣಕಾಸಿನ ಸ್ಥಿತಿಯು ಉತ್ತಮ ಇರುತ್ತದೆ. ಕುಂಡಲಿಯಲ್ಲಿ ಗುರುಚಂದ್ರರ ಯೋಗವು ಇರುವುದರಿಂದ ಇಂತಹವರಿಗೆ ಲಕ್ಷಾಧಿಪತಿಯಾಗುವ ಯೋಗ ಇರುತ್ತದೆ.

ನಿಮ್ಮ ಅದೃಷ್ಟದ ಹರಳು - ಸಂಖ್ಯೆ ಯಾವುದು ?

 ಸ್ತ್ರೀಯರ ಜಾತಕದಲ್ಲಿ ದ್ವಿತೀಯ ಮನೆಯಲ್ಲಿ ಬುಧ, ಗುರು, ಶುಕ್ರ ಇದ್ದರೆ ಇವರಿಗೆ ಐಶ್ವರ್ಯ ಸಂಪತ್ತು ಬರುತ್ತದೆ ಮತ್ತು ಸ್ತಿçÃಯರ ಜಾತಕದ ಸಪ್ತಮದಲ್ಲಿ ಗುರು ಶುಕ್ರಗಳಿರುವುದು, ಸಪ್ತಮದಲ್ಲಿ ಶುಕ್ರನು ಶುಭಗ್ರಹಗಳೊಂದಿಗೆ ಇದ್ದು ಬಲಯುತನಾಗಿದ್ದರೆ ಅಂತಹವರು ಧನವಂತರಾಗುತ್ತಾರೆ. 

Follow Us:
Download App:
  • android
  • ios