ಇಂಗ್ಲೆಂಡ್ ಈ ಕೋಟೆಯಲ್ಲಿ ಇದೇ ಮೊದಲು ಆಚರಣೆಯಾಯ್ತು ಹೋಳಿ, ಬಣ್ಣದಲ್ಲಿ ಮಿಂದೆದ್ದ ಜನ

ಹೋಳಿ ಹಬ್ಬ ಯಾವುದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರೂ ಒಂದಾಗಿ ಆಚರಿಸುವ ಹಬ್ಬ ಇದು. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಜನರು ಹೋಳಿ ಆಚರಿಸುತ್ತಾರೆ. ಈಗ ಈ ಸಂಭ್ರಮಕ್ಕೆ ಮತ್ತೊಂದು ಜಾಗ ಸೇರ್ಪಡೆಯಾಗಿದೆ. 

Holi First Time Celebrated In Corfe Castle Thousands Of People Participated roo

ಭಾರತದ ಜನರು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದಾರೆ. ಇಡೀ ಭಾರತವೇ ಇಂದು - ನಾಳೆ ಬಣ್ಣಗಳಿಂದ ಕಂಗೊಳಿಸಲಿದೆ. ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹೋಳಿ ಹಬ್ಬವನ್ನು ಭಾರತದ ಮೂಲೆ ಮೂಲೆಯಲ್ಲಿ ಜನರು ಆಚರಣೆ ಮಾಡ್ತಾರೆ. ದುಷ್ಟ ಶಕ್ತಿಯನ್ನು ಹೊಡೆದೋಡಿಸಿ ಖುಷಿಯನ್ನು ಸ್ವಾಗತಿಸುವ ಹಬ್ಬ ಇದು. ಹೋಳಿ ಹಬ್ಬದ ಸಮಯದಲ್ಲಿ ಜನರು ದ್ವೇಷ ಮರೆತು ಒಂದಾಗ್ತಾರೆ. ಹೋಳಿಯನ್ನು ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಹೋಳಿಯಲ್ಲಿ ಇನ್ನೊಂದು ವಿಶೇಷವಿದೆ. ಈವರೆಗೆ ಹೋಳಿಯನ್ನು ಆಚರಣೆ ಮಾಡದ ಜಾಗದಲ್ಲೂ ಬಣ್ಣದ ಹಬ್ಬವನ್ನು ಆಚರಿಸಲಾಗಿದೆ. ವಿದೇಶದ ಈ ಸ್ಥಳದಲ್ಲಿ ಮೊದಲ ಬಾರಿ ಹಬ್ಬ ಆಚರಣೆ ಮಾಡಲಾಗ್ತಿದ್ದರೂ ಮುನ್ನೂರಕ್ಕೂ ಹೆಚ್ಚು ಮಂದಿ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ಬಣ್ಣ ಎರೆಚಿಕೊಂಡು ಸಂಭ್ರಮಿಸಿದ್ರು.

ನಾವು ಈಗ ಹೇಳ್ತಿರುವ ಸ್ಥಳ ಇಂಗ್ಲೆಂಡ್ (England) ನಲ್ಲಿದೆ. ಇಲ್ಲಿನ ಡಾರ್ಸೆಟ್‌ನಲ್ಲಿ ಕಾರ್ಫೆ ಕ್ಯಾಸಲ್ (Corfe Castle) ಎಂಬ ಹೆಸರಿನ ಕೋಟೆಯಲ್ಲಿ ಇದೇ ಮೊದಲ ಬಾರಿ ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಇಲ್ಲಿ ದೀಪಾವಳಿಯಾಗ್ಲಿ, ಹೋಳಿ (Holi) ಹಬ್ಬವನ್ನಾಗ್ಲಿ ಎಂದೂ ಆಚರಿಸಿರಲಿಲ್ಲ. ಇಲ್ಲಿನ ನ್ಯಾಷನಲ್ ಟ್ರಸ್ಟ್ ಪ್ರಥಮ ಬಾರಿ ಹೋಳಿ ಹಬ್ಬವನ್ನು ಆಯೋಜನೆ ಮಾಡಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಸಾವಿರ ಮಂದಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಬೌರ್ನ್‌ಮೌತ್, ಪೂಲ್ ಮತ್ತು ಕ್ರೈಸ್ಟ್‌ಚರ್ಚ್‌ನ ಹಿಂದೂ ಸಮುದಾಯದ ಜನರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಮದ್ವೆಯಾಗದ ಹುಡುಗಿಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬಾರದಂತೆ… ಯಾಕಿರಬಹುದು?

ರಾಷ್ಟ್ರೀಯ ಟ್ರಸ್ಟ್ ಸಾಂಪ್ರದಾಯಿಕ ಬ್ರಿಟಿಷ್ ಸಂಸ್ಥೆಯಾಗಿದೆ. ಇದು ಹಿಂದೂ ಹಬ್ಬಗಳ ಆಯೋಜನೆ ಮಾಡೋದಿಲ್ಲ. ಆದ್ರೆ ಮೊದಲ ಬಾರಿ ಭಾರತೀಯ ಹಿಂದೂ ಹಬ್ಬವನ್ನು ತನ್ನ ಹಬ್ಬದಂತೆ ಆಚರಣೆ ಮಾಡಿದೆ. ರಾಷ್ಟ್ರೀಯ ಟ್ರಸ್ಟ್ ಆಯೋಜನೆ ಮಾಡಿರುವ ಹಿಂದೂ ಹಬ್ಬ  ಭಾರತದ ಪ್ರಭಾವವನ್ನು ಸ್ಪಷ್ಟಪಡಿಸುತ್ತಿದೆ. ಭಾರತದ ಹೆಮ್ಮೆಗೆ ಮತ್ತೊಂದು ಗರಿ ಅಂದ್ರೆ ತಪ್ಪಾಗೋದಿಲ್ಲ.

ಭಾರತವನ್ನು ತೊರೆದು ಬೌರ್ನ್‌ಮೌತ್, ಪೂಲ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿರುವ ಭಾರತೀಯ ಜನರು ಇಷ್ಟು ದಿನ ಹೋಳಿಯನ್ನು ಮಿಸ್ ಮಾಡಿಕೊಳ್ತಿದ್ದರು. ಹೋಳಿ ಹಬ್ಬವನ್ನು ಭಾರತದಲ್ಲಿ ಹಿಂದು – ಮುಸ್ಲಿಂ – ಕ್ರಿಸ್ತರೆನ್ನದೆ ಎಲ್ಲರೂ ಆಚರಿಸುತ್ತಾರೆ. ಹೋಳಿ ಎಲ್ಲರನ್ನು ಒಟ್ಟುಗೂಡಿಸುವ ಹಬ್ಬ. ಬೌರ್ನ್ ಮೌತ್ ನಲ್ಲಿರುವ ನಾವು ಹೋಳಿಯನ್ನು ಮಿಸ್ ಮಾಡಿಕೊಳ್ತಿದ್ದೆವು. ಭಾರತದಲ್ಲಿ ಹೋಳಿ ಸಂಭ್ರಮ ವಿಶೇಷವಾಗಿರುತ್ತದೆ. ಮಕ್ಕಳಿಗೆ ಇದ್ರ ಬಗ್ಗೆ ತಿಳುವಳಿಕೆ ಅಗತ್ಯ. ಹಾಗಾಗಿ ಇಂದು ನಾನು  ಕಾರ್ಯಕ್ರಮಕ್ಕೆ ಮಕ್ಕಳನ್ನು ಕೂಡ ಕರೆತಂದಿದ್ದೇವೆ ಎಂದು  ಹೋಳಿ ಹಬ್ಬಕ್ಕೆ ಬಂದಿದ್ದ ಭಾರತೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ರಾಷ್ಟ್ರೀಯ ಟ್ರಸ್ಟ್ ಈ ಹೋಳಿ ಕಾರ್ಯಕ್ರಮಕ್ಕೆ ರಂಗ್ ಬರ್ಸೆ ಎಂದು ಹೆಸರಿಟ್ಟಿತ್ತು. ಕೇವಲ ಭಾರತೀಯರು, ಹಿಂದುಗಳು ಮಾತ್ರವಲ್ಲ ಬ್ರಿಟಿಷ್ ಜನರು ಕೂಡ ತಮ್ಮ ಕುಟುಂಬಸ್ಥರ ಜೊತೆ ಹೋಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ರು.

ಹನಿಮೂನ್‌ಗೆ ಹೇಳಿ ಮಾಡಿಸಿದ ಭಾರತದ 5 ಬೆಸ್ಟ್ ತಾಣಗಳು..

ಈ ದೇಶದಲ್ಲೂ ಹೋಳಿ ಆಚರಣೆ : ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲೂ ಹೋಳಿ ಆಚರಣೆ ಮಾಡಲಾಗುತ್ತದೆ. ಅಮೆರಿಕಾದ ಅನೇಕ ನಗರಗಳಲ್ಲಿ ನೀವು ಹೋಳಿ ಸಂಭ್ರಮವನ್ನು ನೋಡ್ಬಹುದು. ಕೆಲ ನಗರಗಳು ಸಂಪೂರ್ಣ ಭಾರತದ ನಗರದಂತೆ ಕಾಣುತ್ತದೆ. ಯುರೋಪಿನ ಕೆಲ ದೇಶಗಳಲ್ಲೂ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಇದ್ರಲ್ಲಿ ಬ್ರಿಟನ್ ಮುಂದಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾದ ಕೆಲ ಅನೇಕ ದೇಶಗಳಲ್ಲಿ ನೀವು ಹೋಳಿ ಸಡಗರವನ್ನು ನೋಡ್ಬಹುದು. ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಇಂಡೋನೇಷ್ಯಾದಲ್ಲೂ ಈ ಹಬ್ಬದ ಆಚರಣೆಯನ್ನು ನೀವು ಕಾಣ್ಬಹುದು. 

Latest Videos
Follow Us:
Download App:
  • android
  • ios