Asianet Suvarna News Asianet Suvarna News

ನಾಳೆ ಗೋವರ್ಧನ ಪೂಜೆ, ಮಂಗಳಕರ ಸಮಯ ಮತ್ತು ಪೂಜೆಯ ಸರಿಯಾದ ವಿಧಾನ

ಐದು ದಿನಗಳ ದೀಪಾವಳಿ ಹಬ್ಬದಲ್ಲಿ ನಾಲ್ಕನೇ ದಿನದಂದು ಗೋವರ್ಧನನನ್ನು ಪೂಜಿಸಲಾಗುತ್ತದೆ ಮತ್ತು ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗೋವರ್ಧನನನ್ನು ಪೂಜಿಸುವ ಸಂಪ್ರದಾಯವಿದೆ.
 

govardhan puja significance and puja vidhi vidhana suh
Author
First Published Nov 13, 2023, 3:10 PM IST | Last Updated Nov 13, 2023, 3:10 PM IST

ಐದು ದಿನಗಳ ದೀಪಾವಳಿ ಹಬ್ಬದಲ್ಲಿ ನಾಲ್ಕನೇ ದಿನದಂದು ಗೋವರ್ಧನನನ್ನು ಪೂಜಿಸಲಾಗುತ್ತದೆ ಮತ್ತು ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗೋವರ್ಧನನನ್ನು ಪೂಜಿಸುವ ಸಂಪ್ರದಾಯವಿದೆ.

ಗೋವರ್ಧನ ಪೂಜೆಯ ದಿನದಂದು, ಗೋವರ್ಧನ ಮಹಾರಾಜರ ವಿಗ್ರಹವನ್ನು ಮನೆಗಳಲ್ಲಿ ಗೋವಿನ ಸಗಣಿಯಿಂದ ತಯಾರಿಸಲಾಗುತ್ತದೆ ಮತ್ತು ಶುಭ ಸಮಯದಲ್ಲಿ ಇಡೀ ಕುಟುಂಬದೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಶ್ರೀಕೃಷ್ಣನು ದೇವರಾಜ್ ಇಂದ್ರನ ಹೆಮ್ಮೆಯನ್ನು ಛಿದ್ರಗೊಳಿಸಿದನು ಮತ್ತು ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಲ್ಲಿ ಎತ್ತುವ ಮೂಲಕ ಜನರನ್ನು ಮಳೆಯಿಂದ ರಕ್ಷಿಸಿದನು ಎಂದು ನಂಬಲಾಗಿದೆ. ದೀಪಾವಳಿಯ ಎರಡನೇ ದಿನದಂದು ಗೋವರ್ಧನ ಪೂಜೆಯ ಹಬ್ಬವನ್ನು ಆಚರಿಸಲಾಗುತ್ತದೆ, ಆದರೆ ಈ ಬಾರಿ ಅಮವಾಸ್ಯೆಯ ತಿಥಿಗೆ ಎರಡು ದಿನಗಳು ಇರುವುದರಿಂದ ಗೋವರ್ಧನ ಪೂಜೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. 

ಕಾರ್ತಿಕ ಶುಕ್ಲ ಪಕ್ಷದ ಪ್ರತಿಪಾದ ತಿಥಿಯು 2023 ರ ನವೆಂಬರ್‌ 13 ರಂದು ಸೋಮವಾರ ಮಧ್ಯಾಹ್ನ 02:56 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 14 ರಂದು ಮಂಗಳವಾರ ಮಧ್ಯಾಹ್ನ 02:36 ಕ್ಕೆ ಮುಕ್ತಾಯಗೊಳ್ಳುತ್ತದೆ. ಉದಯ ತಿಥಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಗೋಪೂಜೆಯನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ. ಗೋಪೂಜೆಯ ಶುಭ ಮುಹೂರ್ತವು ನವೆಂಬರ್ 14 ರಂದು ಬೆಳಗ್ಗೆ 06:42 ರಿಂದ 08:51 ರವರೆಗೆ ಇರುತ್ತದೆ. ಶುಭ ಮುಹೂರ್ತದ ಒಟ್ಟು ಅವಧಿ 2 ಗಂಟೆ 9 ನಿಮಿಷಗಳಾಗಿವೆ.

ಗೋಪೂಜೆ ಮಾಡುವ ವಿಧಾನ​

ಗೋಪೂಜೆಯ ದಿನದಂದು ಮುಂಜಾನೆ ಬೇಗ ಶುದ್ಧರಾಗಿ ಮನೆಯ ಅಂಗಳವನ್ನು, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
 ಮನೆಯ ಅಂಗಳದಲ್ಲಿ ಸುಂದರವಾದ ರಂಗೋಲಿಯನ್ನು ಹಾಕಿ.
ಈ ದಿನ ಮನೆಯಲ್ಲಿ ಸಿಹಿ ಖಾದ್ಯವನ್ನು ಹಾಗೂ ಗೋಮಾತೆಗೆ ಕಡುಬು ತಯಾರಿಸಿ.
ಗೋಮಾತೆಯನ್ನು ಕಟ್ಟುವ ಸ್ಥಳವನ್ನು ಶುದ್ಧಗೊಳಿಸಿ.
ನಂತರ ಗೋಮಾತೆಗೆ ಸ್ನಾನ ಮಾಡಿಸಿ, ಗೋಮಾತೆಯ ಮೈಮೇಲೆ ಅರಿಶಿನ, ಕುಂಕುಮ ಅಥವಾ ವಿಭೂತಿಯಿಂದ ಚಿತ್ರವನ್ನು ಬಿಡಿಸಿ, ಹೂವಿನ ಹಾರವನ್ನು ಹಾಕಿ ಅಲಂಕಾರ ಮಾಡಿ.
ಗೋವುಗಳ ಹಣೆಗೆ, ಕಾಲಿಗೆ ಅರಿಶಿನ, ಕುಂಕುಮವನ್ನು ಹಚ್ಚಿ ಆರತಿ ಬೆಳಗಿ ಸಿಹಿಯನ್ನು ತಿನ್ನಿಸಿ, ರೊಟ್ಟಿಯನ್ನು ಗೋಮಾತೆಗೆ ತಿನ್ನಲು ನೀಡಿ ನಂತರ ಅದರ ಕುತ್ತಿಗೆಗೂ ರೊಟ್ಟಿಯನ್ನು ಕಟ್ಟಿ, ಗೋಮಾತೆಯಿಂದ ಆಶೀರ್ವಾದವನ್ನು ಪಡೆದುಕೊಳ್ಳಿ.

​ಗೋವರ್ಧನ ಪೂಜೆಯ ಕಥೆ​

ಭಗವಾನ್ ಶ್ರೀ ಕೃಷ್ಣನು ತನ್ನ ದಿವ್ಯ ಶಕ್ತಿಯಿಂದ ಬೃಹತ್ ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ ಸಾವಿರಾರು ಪ್ರಾಣಿಗಳು ಮತ್ತು ಮಾನವ ಜೀವಗಳನ್ನು ಭಗವಾನ್ ಇಂದ್ರನ ಕೋಪದಿಂದ ರಕ್ಷಿಸಿದನು ಎಂಬುದು ನಂಬಿಕೆ. ಶ್ರೀ ಕೃಷ್ಣನು ಇಂದ್ರನ ಗರ್ವವನ್ನು ನಾಶ ಮಾಡಿದನು ಮತ್ತು ಗೋವರ್ಧನ ಪರ್ವತವನ್ನು ಪೂಜಿಸಿದನು. ಈ ಕಾರಣಕ್ಕಾಗಿ ಜನರು ತಮ್ಮ ಮನೆಗಳಲ್ಲಿ ಗೋವಿನ ಸಗಣಿಯಿಂದ ಗೋವರ್ಧನವನ್ನು ಮಾಡುತ್ತಾರೆ. ಕೆಲವರು ಗೋವರ್ಧನ ಪರ್ವತವನ್ನು ಮಾಡಿ ಗೋಮಯದಿಂದ ಪೂಜಿಸಿದರೆ, ಕೆಲವರು ಗೋವಿನ ಸಗಣಿಯಿಂದ ನೆಲದ ಮೇಲೆ ಗೋವರ್ಧನನನ್ನು ಮಾಡಿ, ಅದಕ್ಕೆ ಪೂಜೆಯನ್ನು ಮಾಡುತ್ತಾರೆ.

Latest Videos
Follow Us:
Download App:
  • android
  • ios