Asianet Suvarna News Asianet Suvarna News

ಗುರು ಬಲವಿದ್ದರೆ, ಗಜ ಕೇಸರಿ ಯೋಗ ಗ್ಯಾರಂಟಿ, ಅಷ್ಟಕ್ಕೂ ಏನಿದು?

ಜಾತಕದಲ್ಲಿ ಗುರು ಬಲವಿದೆ, ಮದುವೆ ಮಾಡಬಹುದು, ಮುಂಜಿ ಮಾಡಬಹುದು ಎಂದು ಹೇಳುವುದನ್ನು ಕೇಳಿದ್ದೇವೆ. ಅಷ್ಟಕ್ಕೂ ಏನೀ ಗುರು ಬಲ? ಗುಣವಂತ, ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ ಈ ಗುರುವಿನ ಬೆಂಬಲವಿದ್ದರೆ. ಗುರುವಿನ ಬಲವಿದ್ದರೆ, ಗಜ ಕೇಸರಿ ಯೋಗವೂ ಗ್ಯಾರಂಟಿ. ಅಷ್ಟಕ್ಕೂ ಏನಿದು ಈ ಯೋಗ?
 

Effect of guru in horoscope
Author
Bangalore, First Published Jan 10, 2020, 4:11 PM IST

ಜಾತಕದಲ್ಲಿ ಗುರುಬಲ ಬೇಕೇ ಬೇಕು. ಜಾತಕದಲ್ಲಿ ಗುರು ಬಲ ಇರುವವನಿಗೆ ಯಾವಾಗಲೂ ಎಲ್ಲದರಲ್ಲಿಯೂ ಒಳ್ಳೆಯದೇ ಆಗುತ್ತದೆ. ಗುರು ಸ್ವಕ್ಷೇತ್ರ ಉಚ್ಛನಿದ್ದರೆ ಅವನಿಗೆ ಒಳ್ಳೆಯದು ಎಂದು ಭಾವಿಸುತ್ತಾರೆ. ಕೆಲವರಲ್ಲಿ ಒಳ್ಳೆಯ ಗುಣಗಳಿರುತ್ತದೆ. ಅದಕ್ಕೆಲ್ಲಾ ಕಾರಣ ಗುರು. ಗುರು ಜ್ಞಾನವನ್ನು ಕೊಡುತ್ತದೆ. ಪ್ರಸಿದ್ಧಿ, ಧನ ಸಂಪತ್ತು, ಸುಖ ಸಂತೋಷ, ತೀರ್ಥ ಯಾತ್ರೆ, ಉನ್ನತ ಶಿಕ್ಷಣ ಇದಕ್ಕೆಲ್ಲಾ ಕಾರಣ ಗುರು. ಒಳ್ಳೆಯದಕ್ಕೆ ಕಾರಣನಾದ ಗುರು ಒಳ್ಳೆಯ ಮನೆಯಲ್ಲಿದ್ದು ಇತರ ಗ್ರಹಗಳ ಜೊತೆ ಸೇರಿ ರಾಜ ಯೋಗವನ್ನು ಕೊಡುತ್ತದೆ. ಚಂದ್ರನ ಜೊತೆ ಅವನಿಂದ 4, 7, 10ನೇ ಮನೆಗಳಲ್ಲಿ ಗುರುವಿದ್ದರೆ ಗಜ ಕೇಸರಿ ಯೋಗ ಆಗುತ್ತದೆ. ಈ ಯೋಗದ ಜಾತಕ ಇರೋರು ಶ್ರೀಮಂತರೊಡನೆ ಕೂಡಿ ಒಳ್ಳೆಯ ಗುಣವಂತನು, ಸುಖ ಸಂತೋಷದಿಂದ ಶ್ರೀಮಂತರಾಗಿ ಒಳ್ಳೆಯ ಸುಖ ಜೀವನ ನಡೆಸುತ್ತಾರೆ. ಇವರಿಗೆ ಉನ್ನತ ಶಿಕ್ಷಣ, ತೊಂದರೆಯನ್ನು ಎದುರಿಸುವ ಶಕ್ತಿ ಇರುತ್ತದೆ.

2020ರಲ್ಲಿ ಕೊನೆಯ ಆರು ರಾಶಿಗಳ ಲವ್‌ ಭವಿಷ್ಯ ಹೇಗಿದೆ ನೋಡಿ?

ಗುರುವು ಕೇಂದ್ರದಲ್ಲಿ ಇದ್ದರೆ ಕೇಮ ದ್ರುಮ ಯೋಗದ ಕೆಟ್ಟ ಫಲಗಳು ದೂರವಾಗುವುದು. ಕೇಂದ್ರವು ಗುರುವಿನ ಸ್ವಕ್ಷೇತ್ರ ಅಥವಾ ಉಚ್ಛ ಸ್ಥಾನವಾಗಿದ್ದರೆ ಇದು ಪಂಚ ಮಹಾ ಯೋಗ. ಇವರು ಸುಂದರರಾಗಿ, ಪರಿಶುದ್ಧ ಮನಸ್ಸಿನವರು ಆಗಿರುತ್ತಾರೆ. ಇವರನ್ನು ಜನ ಮೆಚ್ಚುತ್ತಾರೆ. ಚಂದ್ರನಿಂದ ಕೇಂದ್ರದಲ್ಲಿರುವ ಗುರುವು 2, 5 ಅಥವಾ 11ರ ಅಧಿಪತಿಯಾಗಿದ್ದರೆ ಅಖಂಡ ಸಾಮಾಜ್ಯ ಯೋಗ ಆಗುತ್ತದೆ. ಇದು ಬಲಯುತನಾದರೆ ರಾಜಕೀಯದಲ್ಲಿ ಇರುವವರಿಗೆ ಒಳ್ಳೆಯದು. ಗುರುವು ಬುಧ ಶುಕ್ರರೊಂದಿಗೆ ಕೂಡಿ ಇದ್ದು ಚಂದ್ರನಿಂದ 6, 7 ಅಥವಾ ಎಂಟರಲ್ಲಿ ಇದ್ದರೆ ಅಧಿಯೋಗ ಆಗುತ್ತದೆ. ಇಂತಹ ಜಾತಕರು ಒಳ್ಳೆಯ ಬುದ್ಧಿಯಿಂದ ನಂಬಿಕೆಗೆ ಅರ್ಹರಾಗಿ ಇರುತ್ತಾರೆ. ಅಗರ್ಭ ಶ್ರೀಮಂತರಾಗುತ್ತಾರೆ. ಶುಕ್ರಾಧಿಪತ್ಯ ಕುಜರಾಹು.ರಾಹು ಬೃಹಸ್ಪತಿ ಎಂಬ ಸಂಧೀಕಾಲದಲ್ಲಿ ಬಹಳ ಕೆಟ್ಟದನ್ನು ಅನುಭವಿಸ ಬೇಕಾಗುತ್ತದೆ.

ನಿಮ್ಮ ಅದೃಷ್ಟದ ಹರಳು - ಸಂಖ್ಯೆ ಯಾವುದು ?

ಸಪ್ತಮ ಗುರುವಿನ ಜೊತೆ ಶನಿ ಇದ್ದರೆ, ಇಂತಹವರಿಗೆ ವಿವಾಹ ಆಗುವುದು ಕಷ್ಟ. ಮದುವೆ ಆದರೂ ಬಹಳ ವಿಳಂಬವಾಗುತ್ತದೆ. ಆರು ಎಂಟರಲ್ಲಿರುವ ಗುರು ಬಹಳ ನೋವುಗಳನ್ನು ಕೊಡುತ್ತದೆ. ಗುರು ಅಷ್ಟಮ ಸ್ಥಾನದಲ್ಲಿರುವುದು ಸರಿಯಲ್ಲ ಹಣಕಾಸಿನ ನಷ್ಟವಾಗುತ್ತದೆ. ಶನಿಯಿಂದ ಎಂಟರಲ್ಲಿ ಇರುವ ಗುರು ಒಳ್ಳೆಯ ಆಯುಷ್ಯ ಕೊಡುತ್ತದೆ. ಇವರಿಗೆ ಗುಂಡು ಕೂಡಾ ತಾಗುವುದಿಲ್ಲ. ಶನಿಯಿಂದ ಏಳರಲ್ಲಿ ಗುರು ಇದ್ದರೆ ಇವರು ನಿಲ್ಲುವಲ್ಲಿ ನಿಲ್ಲದೆ ಓಡುತ್ತಾ ಇರುತ್ತಾರೆ. ಗುರು ದೆಶೆಯ ಶುಕ್ರ ಭುಕ್ತಿ ಅಥವಾ ಶುಕ್ರ ದೆಶೆಯ ಶುಕ್ರ ಭುಕ್ತಿ ಅಥವಾ ಶುಕ್ರ ದೆಶೆಯ ಗುರು ಭುಕ್ತಿ ಬಹಳ ಕೆಟ್ಟದ್ದು ಗುರು ಎರಡು ಕೇಂದ್ರದ ಅಧಿಪತಿ ಅದರಲ್ಲಿ ಒಂದು ಕೇಂದ್ರದಲ್ಲಿ ಗುರು ಇದ್ದರೆ ಇದಕ್ಕೆ ಕೇಂದ್ರಾಧಿಪತ್ಯ ದೋಷ ಎನ್ನುವರು. ಗ್ರಹ ಚಾರದಲ್ಲಿ ಇದು ಕೆಟ್ಟದು ವೈವಾಹಿಕ ಸಂಬAಧಕ್ಕೆ ಇದು ಅಡ್ಡ ಕಾಲು ಹಾಕುತ್ತದೆ. ಗುರುವು 3ನೆಯ ಮತ್ತು 4ನೇ ಮನೆಯನ್ನು ನೋಡಿದರೆ ಉನ್ನತ ಶಿಕ್ಷಣ ಸಿಕ್ಕಿಯೇ ಸಿಗುತ್ತದೆ. ಚಂದ್ರನಿಂದ ಆರು ಅಥವಾ ಎಂಟರಲ್ಲಿ ಗುರು ಇದ್ದರೆ ಶಕಟ ಯೋಗ ಆಗುತ್ತದೆ. ಇಂತಹವರಿಗೆ ಬೇರೆ ಗ್ರಹ ಫಲ ಕೊಡುವುದಿಲ್ಲ. ಗುರು ಕುಜರು ಒಟ್ಟಿಗೆ ಇರುವುದು ಇದರಲ್ಲಿ ಒಬ್ಬರು ಲಗ್ನಾಧಿಪತಿ ಆಗಿದ್ದು ಇನ್ನೊಬ್ಬ ಪಂಚಮ ಸ್ಥಾನದ ಅಧಿಪತಿ ಆಗಿದ್ದರೆ ಇದು ರಾಜಯೋಗ. ಇದು ಪಂಚಮದಲ್ಲಿ ಇದ್ದರೆ ಇಂತಹವರಿಗೆ ಮಕ್ಕಳಾಗುವುದಿಲ್ಲ. 

ಮಕರ ರಾಶಿಯಲ್ಲಿ ಸಂಚರಿಸೋ ರವಿ, ಸಿಂಹಕ್ಕೆ ಒಳಿತು, ಉಳಿದವರಿಗೆ ?

Follow Us:
Download App:
  • android
  • ios