ಹಾಸನ(ಏ. 06)  ಕಿಲ್ಲರ್ ಕೊರೋನಾ ಬಗ್ಗೆ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.  ಹಾಸನದ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಕೋಡಿಶ್ರೀಗಳ ನೀಡಿರುವ ಭವಿಷ್ಯವಾಣಿ ಕುತೂಹಲ ಹೆಚ್ಚು ಮಾಡಿದೆ.

ಜಗತ್ತಿನಲ್ಲಿ ಈ ಕೊರೊನಾ  ಕಾಯಿಲೆ ಇನ್ನು ಉಲ್ಬಣವಾಗಲಿದೆ. ಈ ವ್ಯಾಧಿ ಮನುಷ್ಯರ ಪ್ರಾಣದೊಡನೆ ತಾಂಡವವಾಡಲಿದೆ.  ಅಕ್ಷಯ ನಾಮ ತಿಥಿ ವರೆಗೂ ಅಬ್ಬರಿಸಿ, ಮೇ ತಿಂಗಳಿಗೆ ಒಂದು ಅವಸ್ಥೆ ತಲುಪಲಿದೆ. 
ಪ್ರಕೃತಿಯಿಂದಲೇ  ಔಷಧಿ ದೊರೆಯೋ ಸ್ಥಿತಿ ಈ ದೇಶಕ್ಕೆ ಬರಲಿದೆ. ದೊಡ್ಡ ದೊಡ್ಡನಗರಗಳಿಗೆ ಅಪಾಯ ಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ದೇವೇಗೌಡರಿಗೆ ಕರೆ ಮಾಡಿದ್ದ ರಹಸ್ಯ ಬಹಿರಂಗ

ಆದರೇ ಭರತಖಂಡಕ್ಕೆ ಅಪಾಯವಿಲ್ಲ, ಸಾಧು ಸಂತರು, ಜಪತಪಗಳಿಂದ ಈ  ಪುಣ್ಯ ಭೂಮಿಯಲ್ಲಿ ಹುಟ್ಟಿರುವವರು ಆತಂಕ ಪಡುವ ಬೇಕಿಲ್ಲ. ಜಗತ್ತಿನ ಭೂಪಟದಲ್ಲಿ ಒಂದು ದೇಶ ಸಂಪೂರ್ಣ ಅಳಿಸೋ ಲಕ್ಷಣ ಇದೆ. ಪ್ರಕೃತಿಯಿಂದಲೇ ಈ ಕಾಯಿಲೆಗೆ ಮದ್ದು ಸಿಗುತ್ತೆ.  ರಾತ್ರಿ ಮಲಗುವಾಗ ಬಿಲ್ವ ಪತ್ರೆ, ಬೇವಿನ ಸೊಪ್ಪು, ಮನೆಯಲ್ಲಿ ದೀಪ ಉರಿಯಬೇಕು.  ಹೊಸ ಹೊಸ ಶಾಸನ ಬರುವ ಲಕ್ಷಣ ಇದೆ. ಬರುವ ಶಾಸನ ಬಗ್ಗೆ ಅರಸ ಚಿಂತನೆ ಮಾಡಿ ಜಾರಿ ಮಾಡಿದ್ರೆ ಒಳಿತು ಎಂದು ಸಲಹೆ ನೀಡಿದ್ದಾರೆ.

ಶಾಸನಗಳಿಂದ ಪ್ರಜೆಗಳು ದಂಗೆ ಎದ್ದಾರು. ಅರಸಂಗೂ  ಭಂಗ ಆಗೋ ಲಕ್ಷಣ ಇದೆ.   ಮುಂದೇ ಈ ರೋಗ ಉಲ್ಭಣಗೊಂಡರು ಮುಂದಿನ ದಿನಗಳಲ್ಲಿ ಹೊರಟು ಹೋಗುತ್ತೆ. ಗಿಡ ಮರ, ಪ್ರಾಣಿಗಳಿಗೆ ಈ ರೀತಿ ರೋಗ ಅಪ್ಪಳಿಸುತ್ತೆ.  ಈಗಿನ ದೊರೆ ಮನೆಗೆ ವಾಸಹೋಗಿರುವುದನ್ನು ಮತ್ತೆ ಮರು ಪರೀಶಿಲನೆ ಮಾಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಮೋದಿಗೆ ಬೆಸ ಸಂಖ್ಯೆ ಮೇಲೆ ಅಷ್ಟೊಂದು ಪ್ರೀತಿ ಯಾಕೆ

ಇದು ವಿಶೇಷ ಸೂಚನೆ ಎಂದು ಹೇಳಿರುವ  ಸ್ವಾಮೀಜಿ ಸಿಎಂ ಯಡಿಯೂರಪ್ಪ ಕಾವೇರಿ ನಿವಾಸದ ಬಗ್ಗೆ ಹೇಳಿದ್ದಾರೆ.  ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತೆ.  ಗ್ರಾಮದ ಜನರಿಗೆ  ಅಪಾರ ತೊಂದರೆ ಯಾದೀತು.  ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿದರೆ ತೊಂದರೆ ಇಲ್ಲ. ಈ ರೋಗದಿಂದ ಅನೇಕ ಅರಸರು ನಿಯಂತ್ರಣ ಮಾಡಲಾಗದೆ ಪಟ್ಟ ಕಳೆದು ಕೊಳ್ಳುವರು.  ಪ್ರಜೆ ಸರ್ಕಾರ ಜೊತೆ ಕೈ ಜೋಡಿಸಬೇಕು. ಪ್ರಜೆ ಕೈ ಜೋಡಿಸದೇ ಹೋದರೇ ಪ್ರಜೆಗಳೆ ಸಾವಿಗೆ ಆಹ್ವಾನ ನೀಡಿದಂತೆ.  ಮಳೆಯಲ್ಲಿ ವಿಪರೀತ ಆಗಲಿದೆ. ಭೂಮಿ ಕಂಪಿಸಿತು, ಪಂಚಭೂತ ಗಾಳಿ ಬೆಂಕಿಯಿಂದ ತೊಂದರೆ ಇದೆ . ಸಮುದ್ರ ಒಡಲು ಬಿಚ್ಚಲಿದೆ.  ಫಸಲು ಹೆಚ್ಚು ಬಂದರೂ ಹೊಸ ರೋಗ ಬರುವವು.  ಬಹುಪಾಲು ಜಲ ಪ್ರಳಯ ಆಗಲಿದೆ. ಆಶ್ವೀಜದಿಂದ ಕಾರ್ತಿಕ ವರೆಗೆ ಗ್ರಾಮದವರಿಗೆ ತೊಂದರೆಯಾಗಲಿದೆ ಎಂಧು ಎಚ್ಚರಿಕೆ ನೀಡಿದ್ದಾರೆ.