Fact Check: ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಹಿಟ್ಲರ್‌ನೊಂದಿಗೆ ಹೋಲಿಸುವ ಟೈಮ್ ಕವರ್ ಫೋಟೋ ನಕಲಿ!
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ರಷ್ಯಾದ ಅಧ್ಯಕ್ಷರನ್ನು ಅಡಾಲ್ಫ್ ಹಿಟ್ಲರ್ ಎಂದು ತೋರಿಸುತ್ತಿರುವ ಟೈಮ್ ಮ್ಯಾಗಜೀನ್‌ನ ಕವರ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
Fact Check: ಉಕ್ರೇನ್ ವಶಕ್ಕೆ ತನ್ನ ಪ್ರಯತ್ನವನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಯುದ್ಧದಲ್ಲಿ ಮುನ್ನಡೆ ಸಾಧಿಸಿಸುತ್ತಿದೆ. ಉಕ್ರೇನ್ ಮೇಲೆ ಅಪ್ರಚೋದಿತ ದಾಳಿಯಿಂದ ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಅಮೆರಿಕಾ ಅಧ್ಯಕ್ಷ ಬಿಡೆನ್ ಸೇರಿದಂತೆ ಹಲವು ಜಾಗತಿಕ ನಾಯಕರು ತಿರುಗಿ ಬಿದ್ದಿದ್ದಾರೆ. ಅಲ್ಲದೇ ಈಗಾಗಲೇ ಹಲವು ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿವೆ. ಈ ಮಧ್ಯೆ ರಷ್ಯಾ ಹಾಗೂ ಉಕ್ರೇನ್ ನಡುವಿನ ದಾಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾಣಿಸಿಕೊಂಡಿರುವ ಟೈಮ್ ನಿಯತಕಾಲಿಕದ ಮುಖಪುಟವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಟೈಮ್ ಮ್ಯಾಗಜೀನ್ ಮುಖಪುಟದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಎಂದು ಹೇಳಿರುವ ಎರಡು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕಳೆದ ಗುರುವಾರ ಪ್ರಾರಂಭವಾದ ಉಕ್ರೇನ್‌ನ ರಷ್ಯಾದ ಆಕ್ರಮಣದ ಮಧ್ಯೆ ಈ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Claim: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೋಟೋವನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಫೋಟೋ ಜತೆ ಎಡಿಟ್ ಮಾಡಿರುವ ಚಿತ್ರ ಹಂಚಿಕೊಂಡಿರುವ ಕೆಲವು ನೆಟ್ಟಿಗರು ಇದನ್ನು ಟೈಮ್ ಮ್ಯಾಗಜೀನ್‌ನ ಹೊಸ ಕವರ್ ಫೋಟೋ ಎಂದು ಹೇಳಿದ್ದಾರೆ.
ಈ ಚಿತ್ರಗಳಲ್ಲಿ ಒಂದು ಹಿಟ್ಲರ್ ಮೀಸೆಯೊಂದಿಗೆ ಪುಟಿನನ್ನು ತೋರಿಸಿದರೆ, ಇನ್ನೊಂದು ಪುಟಿನ್ ಹಿಟ್ಲರನ ತೀಕ್ಷ್ಣ ನೋಟ ಮತ್ತು ನಾಜಿ ಚಿಹ್ನೆಯೊಂದಿಗೆ ವಿಲೀನಗೊಂಡ ಫೋಟೋ ಹಂಚಿಕೊಳ್ಳಲಾಗಿದೆ. ಇಂಥಹ ಕೆಲವು ಪೋಸ್ಟ್ ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನೂ ಓದಿ: Fact Check: ಕರ್ನಾಟಕದ ಮಕ್ಕಳು ಸನಾತನ ಧರ್ಮ ರಕ್ಷಣೆಗೆ ಮುಂದಾಗಿದ್ದಾರೆ ಎಂಬ ವೈರಲ್ ಫೋಟೋ ಉತ್ತರಾಂಚಲದ್ದು!
ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಟೈಮ್ ಮ್ಯಾಗಝೀನ್ ಫೋಟೋ ನಕಲಿಯಾಗಿದ್ದು ಎರಡು ಫೋಟೋಗಳನ್ನು ಗ್ರಾಫಿಕ್ ಡಿಸೈನರ್ ಕಲಾಕೃತಿಯಾಗಿ ರಚಿಸಿದ್ದಾರೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ಬಹಿರಂಗಗೊಂಡಿದೆ. ಟೈಮ್ ಮ್ಯಾಗಜೀನ್ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಒಂದು ಲೇಖನವನ್ನು ಒಳಗೊಂಡಿದ್ದರೂ, ಅದು ಮ್ಯಾಗ್‌ಝೀನ್‌ನಲ್ಲಿ ವೈರಲ್ ಆಗುತ್ತಿರುವ ಕವರ್ ಫೋಟೋವನ್ನು ಬಳಸಿಲ್ಲ.
Fact Check: ಈ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವು ಗ್ರಾಫಿಕ್ ಡಿಸೈನರ್ ಪ್ಯಾಟ್ರಿಕ್ ಮಲ್ಡರ್ (Patrick Mulder) ಅವರ ಟ್ವಿಟರ್ ಪುಟಕ್ಕೆ ನಮ್ಮನ್ನು ಕರೆದೊಯ್ಯಿತು. ಅವರು ಹೀಗೆ ಪೋಸ್ಟ್ ಮಾಡಿದ್ದರು: "ನನ್ನ ಟೈಮ್ ಕಲಾಕೃತಿ ವೈರಲ್ ಆಗಿದೆ - ಹಾಗಾಗಿ ಅದರ ಬಗ್ಗೆ ಸ್ವಲ್ಪ ಬರೆಯುವುದು ಸೂಕ್ತ ಎಂದು ನಾನು ಭಾವಿಸಿದೆ. ರಷ್ಯಾ ಉಕ್ರೇನನ್ನು ಆಕ್ರಮಿಸಿದ ದಿನದಂದು ನಾನು ರಚಿಸಿದ ಮೂರರಲ್ಲಿ ಈ ಚಿತ್ರವು ಒಂದು. ಟೈಮ್ಸನ ಅಧಿಕೃತ ಕವರ್ ಸ್ಫೂರ್ತಿರಹಿತವಾಗಿತ್ತು ಮತ್ತು ಅಲ್ಲಿ ಅಭಿಪ್ರಾಯದ ಕೊರತೆಯಿತ್ತು."
"ಉಕ್ರೇನ್ ಆಕ್ರಮಣದ ಸುತ್ತಲಿನ ವಿಷಯಕ್ಕೆ ಸಂಬಂಧಪಟ್ಟ ಮತ್ತು ಸಾರ್ವಜನಿಕ ಚಿತ್ತವನ್ನು ಸೆರೆಹಿಡಿಯುವ ಏನನ್ನಾದರೂ ರಚಿಸಲು ನಾನು ಬಯಸುತ್ತೇನೆ. ಇದು ಮೂಲತಃ ಟೈಮ್ ಕವರ್ ರೀತಿ ಎಡಿಟ್ ಮಾಡಬೇಕೆಂದು ಎಂದು ಉದ್ದೇಶಿಸಿರಲಿಲ್ಲ. ಚಿತ್ರ ಬಿಡಿಸಿದ ನಂತರ ತುಂಬಾ ಶಕ್ತಿಯುತವಾಗಿತ್ತು, ಅಷ್ಟೇ ಶಕ್ತಿಯುತವಾದ ಮಾರ್ಗದ ಮೂಲಕ ಅದನ್ನು ರೂಪಿಸಲು ಅರ್ಹವಾಗಿದೆ ಎಂದು ನಾನು ಭಾವಿಸಿದೆ.." ಎಂದು ಪ್ಯಾಟ್ರಿಕ್ ಮಲ್ಡರ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿರುವ ಎರಡೂ ಕವರ್‌ಗಳು ಅವರ ಹೆಸರಿನ ವಾಟರ್‌ಮಾರ್ಕ್ ಹೊಂದಿವೆ.
ಇನ್ನು ವೈರಲ್ ಪೋಸ್ಟ್‌ಗಳು ಈ ಚಿತ್ರಗಳು ಟೈಮ್ಸ್ ನಿಯತಕಾಲಿಕದ ಫೆಬ್ರವರಿ 28-ಮಾರ್ಚ್ 7 ರ ಸಂಚಿಕೆಯ ಭಾಗವಾಗಿದೆ ಎಂದು ಚಿತ್ರಗಳಲ್ಲೆ ಬರೆಯಲಾಗಿದೆ. ಚಿತ್ರಗಳನ್ನು "The Return of History, How Putin Shattered Europe's Dream"" ಎಂಬ ಪಠ್ಯದೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Fact Check: ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್ ನಟ ಟಿಕು ತಲ್ಸಾನಿಯಾ ಇಸ್ಲಾಂಗೆ ಮತಾಂತರಗೊಂಡಿದ್ದು ಸುಳ್ಳು!
ಅಧಿಕೃತ ಟೈಮ್ ಕವರ್ ವಾಸ್ತವವಾಗಿ ಅದೇ ಪಠ್ಯವನ್ನು ಹೊಂದಿದೆ, ಆದರೆ ಚಿತ್ರವು ಯುದ್ಧದ ಸಮಯದಲ್ಲಿ ಉಕ್ರೇನ್‌ನಲ್ಲಿರುವ ರಷ್ಯಾದ ಟ್ಯಾಂಕ್‌ನದ್ದಾಗಿದೆ. ಸರಿಯಾದ ಚಿತ್ರವನ್ನು ಟೈಮ್ ಮ್ಯಾಗಜೀನ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾರ್ಚ್ 14-21 2022 ಎಂದು ನಮೂದಿಸಿರುವ ದಿನಾಂಕದೊಂದಿಗೆ ಟ್ವೀಟ್ ಮಾಡಿದೆ.
ಹೀಗಾಗಿ ಟೈಮ್ ಮ್ಯಾಗಝೀನ್ ಮುಖಪುಟಕ್ಕೂ ಹಿಟ್ಲರ್‌ನನ್ನು ರಷ್ಯಾ ಅಧ್ಯಕ್ಷ ಪುಟೀನ್‌ಗೆ ಹೋಲಿಸಿದ ಚಿತ್ರಕ್ಕೂ ಸಂಬಂಧವಿಲ್ಲ, ಕೆಲವು ಸಾಮಾಜಿಕ ಬಳಕೆದಾರರು ಹಂಚಿಕೊಂಡಿರುವ ಚಿತ್ರಗಳ ದಾರಿ ತಪ್ಪಿಸುವ ಪೋಸ್ಟ್‌ಗಳಾಗಿವೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದಿಬಂದಿದೆ.