Fact Check: ಇದು ಉತ್ತರ ಪ್ರದೇಶದ್ದಲ್ಲ, ಪಾಕಿಸ್ತಾನದ ಶಾಲೆಯೊಂದರ ಚಿತ್ರ

Fact Check: ಉತ್ತರ ಪ್ರದೇಶದ  ಶಾಲೆಯೊಂದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ವೈರಲ್ ಆಗಿದೆ. ಇದರಲ್ಲಿ ಕೆಲ ಶಾಲಾ ಮಕ್ಕಳು ಕೆಸರಿನಲ್ಲಿ ಕುಳಿತಿರುವುದನ್ನು ಕಾಣಬಹುದು.

Old Photo from Pakistan shared as Government School from Uttar Pradesh mnj

ನವದೆಹಲಿ (ಜು. 06): ಪ್ರದೇಶದ (Uttar Pradesh) ಶಾಲೆಯೊಂದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಚಿತ್ರವೊಂದು ವೈರಲ್ ಆಗಿದೆ. ಇದರಲ್ಲಿ ಕೆಲ ಶಾಲಾ ಮಕ್ಕಳು ಕೆಸರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಇದು ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಲಾಗಿದೆ.  ಆದರೆ ಫ್ಯಾಕ್ಟ್‌ಚೆಕ್‌ನಲ್ಲಿ (Fact Check) ಇದು ನಕಲಿ ಎಂದು ತಿಳಿದುಬಂದಿದೆ. ಚಿತ್ರವು ಪಾಕಿಸ್ತಾನದ (Pakistan) ಸರ್ಕಾರಿ ಶಾಲೆಯದ್ದಾಗಿದ್ದು, ಕಳೆದ ಹಲವಾರು ವರ್ಷಗಳಿಂದ, ಈ ಚಿತ್ರವು ವಿಭಿನ್ನ ಮಾಹಿತಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Claim: '3200 ಕೋಟಿಯ ಪ್ರತಿಮೆ ಹೊಂದಿರುವ ದೇಶದ ಸರ್ಕಾರಿ ಶಾಲೆಗಳ ಸ್ಥಿತಿ ಇದು. ನೋಡಿ, ಈಗ ಹೇಳಿ, ಹೃದಯದಲ್ಲಿ ಮಾನವೀಯತೆ ಇರುವವರು, ದೇಶದಲ್ಲಿ 3200 ಕೋಟಿಯ ಪ್ರತಿಮೆ, ಇದು ಅಗತ್ಯವೇ ಅಥವಾ ಶಾಲೆಯೇ. #ನಾಚಿಕೆಗೇಡಿನ ಉತ್ತರ ಪ್ರದೇಶ.' ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆಯಲಾಗಿದೆ. 

ಹಲವು ಬಳಕೆದಾರರೂ ವೈರಲ್ ಪೋಸ್ಟನ್ನು ಹಂಚಿಕೊಳ್ಳುತ್ತಿದ್ದಾರೆ.  ಫೇಸ್‌ಬುಕ್ (Facebook) ಅಲ್ಲದೆ ಟ್ವಿಟರ್‌ನಲ್ಲೂ (Twitter) ಈ ಪೋಸ್ಟ್ ವೈರಲ್ ಆಗಿದೆ.‌ ಇಂಥಹ ಕೆಲವು ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು 

Old Photo from Pakistan shared as Government School from Uttar Pradesh mnj

Fact Check: ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ  ತಿಳಿಯಲು ಗೂಗಲ್ ರಿವರ್ಸ್ ಸರ್ಚ್ (Google Reverse Search) ಟೂಲ್ ಮೂಲಕ ಹುಡುಕಿದಾಗ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವೈರಲ್ ಚಿತ್ರವನ್ನು ಕಂಡುಕೊಂಡಿದ್ದೇವೆ. ಅತ್ಯಂತ ಹಳೆಯ ಫೋಟೋ 2015 ರಲ್ಲಿ ಅಪ್‌ಲೋಡ್ ಮಾಡಲಾಗಿದೆ . ಪಾಕಿಸ್ತಾನಿ ಟ್ವಿಟರ್ ಹ್ಯಾಂಡಲ್ ಸ್ಕೈ ಕಿಂಗ್ಸ್ (SKY KINGS) ಈ ಚಿತ್ರವನ್ನು ತನ್ನ ಖಾತೆಯಲ್ಲಿ 10 ಜನವರಿ 2015 ರಂದು ಅಪ್‌ಲೋಡ್ ಮಾಡಿದೆ.

Old Photo from Pakistan shared as Government School from Uttar Pradesh mnj

ಇನ್ನು ಹುಡುಕಾಟದ ಸಮಯದಲ್ಲಿ, ಮೂಲ ಚಿತ್ರವು Siasat.pk (Link) ಹೆಸರಿನ ವೆಬ್‌ಸೈಟ್‌ನಲ್ಲಿಯೂ ಕಂಡುಬಂದಿದೆ. ಇದನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಶಾಲೆ ಎಂದು ವಿವರಿಸಲಾಗಿದೆ. ಇದನ್ನು 10 ಜೂನ್ 2015 ರಂದು ಪೋಸ್ಟ್ ಮಾಡಲಾಗಿದೆ. ಮೂಲ ಚಿತ್ರವನ್ನು ಇಲ್ಲಿ ವೀಕ್ಷಿಸಿ.

Old Photo from Pakistan shared as Government School from Uttar Pradesh mnj

Conclusion: ಫ್ಯಾಕ್ಟ್‌ ಚೆಕ್‌ನಲ್ಲಿ ಉತ್ತರಪ್ರದೇಶದ ಸರ್ಕಾರಿ ಶಾಲೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ನಕಲಿ (Fake) ಎಂದು ಸಾಬೀತಾಗಿದೆ. ಇದು ಪಾಕಿಸ್ತಾನದ ಶಾಲೆಯೊಂದರ ಚಿತ್ರವಾಗಿದ್ದು  2015 ರಿಂದ ಅಂತರ್ಜಾಲದಲ್ಲಿ ಇರುವ ಈ ಚಿತ್ರವು ಈ ಹಿಂದೆ ಹಲವಾರು ಬಾರಿ ತಪ್ಪು ದಾರಿಗೆಳೆಯುವ ಮಾಹಿತಿಯೊಂದಿಗೆ ವೈರಲ್ ಆಗಿದೆ.

ಇದನ್ನೂ ಓದಿ: ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಿರ್ಮಿಸಿದ ಮಸೀದಿ ಹೆಸರಲ್ಲಿ ಉಕ್ರೇನ್ ರೈಲ್ವೆ ನಿಲ್ದಾಣದ ಫೋಟೋ ವೈರಲ್

Latest Videos
Follow Us:
Download App:
  • android
  • ios