Asianet Suvarna News Asianet Suvarna News

Fact Check: ಇ-ಪೇಪರ್‌ ಪಿಡಿಎಫ್‌ ಫಾರ್ವರ್ಡ್‌ ಅಪರಾಧವೇ?

ಇ-ಪೇಪರ್‌ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್‌ಗಳ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬಹುದು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  

fact check of illegal to share pdfs of e papers on whats app
Author
Bengaluru, First Published May 8, 2020, 9:00 AM IST
  • Facebook
  • Twitter
  • Whatsapp

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ದಿನಪತ್ರಿಕೆಗಳ ಸರಬರಾಜಿಗೆ ತೊಡಕುಂಟಾಗಿದೆ. ಹಾಗಾಗಿ ಜನರು ದೇಶದ ಆಗುಹೋಗುಗಳ ಬಗ್ಗೆ ತಿಳಿಯಲು ಇ-ಪೇಪರ್‌ ಮೊರೆ ಹೋಗಿದ್ದಾರೆ. ಪತ್ರಿಕೆಗಳ ಇ-ಪೇಪರ್‌ ತುಣುಕುಗಳನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಳ್ಳುವವರ ಪ್ರಮಾಣವೂ ಅಧಿಕವಾಗಿದೆ.

ಆದರೆ ದೈನಿಕ್‌ ಭಾಸ್ಕರ್‌ ಪತ್ರಿಕೆಯು ‘ಇ-ಪೇಪರ್‌ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್‌ಗಳ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬಹುದು’ ಎಂದು ವರದಿ ಮಾಡಿದೆ. ಈ ವರದಿ ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.

 

ಪತ್ರಿಕೆಯ ತುಣುಕೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರ ಬೆನ್ನಲ್ಲೇ ಫ್ರೀ ಪ್ರೆಸ್‌ ಜರ್ನಲ್‌, ‘ಪಿಡಿಎಫ್‌ ಫೈಲ್‌ಗಳನ್ನು ವಾಟ್ಸ್‌ಆ್ಯಪ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯಾವುದೇ ನಿಷೇಧ ಇಲ್ಲ’ ಎಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

Fact Check| ತಬ್ಲೀಘಿ ಕಾಟದಿಂದ ನರ್ಸ್‌ಗಳ ರಾಜೀನಾಮೆ!

ಆದರೆ ಇಂಡಿಯಾ ಟುಡೆ ಈ ಸುದ್ದಿ ಸತ್ಯಾಸತ್ಯ ಪರಿಶೀಲಿಸಿದಾಗ, ಸುದ್ದಿಸಂಸ್ಥೆಯೇ ಉಚಿತವಾಗಿ ನೀಡಿರುವ ಪಿಡಿಎಫ್‌ ಫೈಲ್‌ಗಳನ್ನು ಡೌನ್‌ಲೋಡ್‌ ಅಥವಾ ಫಾರ್ವರ್ಡ್‌ ಮಾಡುವುದು ಅಪರಾಧವಲ್ಲ. ಆದರೆ ಶುಲ್ಕ ಪಾವತಿಸುವ ಇ-ಪೇಪರ್‌ ಪಿಡಿಎಫ್‌ಗಳನ್ನು ಫಾರ್ವರ್ಡ್‌ ಮಾಡುವುದು ಅಪರಾಧ ಎಂದು ತಿಳಿದುಬಂದಿದೆ. ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿ(ಐಎನ್‌ಎಸ್‌) ಕೂಡ ಇದನ್ನೇ ಹೇಳಿ, ವೈರಲ್‌ ಸುದ್ದಿ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದೆ.

- ವೈರಲ್ ಚೆಕ್ 

Follow Us:
Download App:
  • android
  • ios