Asianet Suvarna News Asianet Suvarna News

Fact check: ಭಾರತೀಯ 7 ಯೋಧರನ್ನು ಹತ್ಯೆಗೈತಾ ನೇಪಾಳ.?

ಲಡಾಖ್‌ ಗಡಿ ಸಂಘರ್ಷದಲ್ಲಿ ಚೀನಾ ಭಾರತದ 20 ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ನೇಪಾಳವೂ ಭಾರತದ 7 ಯೋಧರನ್ನು ಹತ್ಯೆಗೈದಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check of 7 Indian army personnel killed by Nepal in Ceasefire violation
Author
Bengaluru, First Published Jul 8, 2020, 9:37 AM IST

ನವದೆಹಲಿ (ಜು. 08): ಲಡಾಖ್‌ ಗಡಿ ಸಂಘರ್ಷದಲ್ಲಿ ಚೀನಾ ಭಾರತದ 20 ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ನೇಪಾಳವೂ ಭಾರತದ 7 ಯೋಧರನ್ನು ಹತ್ಯೆಗೈದಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಚೀನಾ ವಿರುದ್ಧ ಜಪಾನ್‌ ಕ್ಷಿಪಣಿ ನಿಯೋಜನೆ ಮಾಡಿತಾ?

ಭಾರತ-ನೇಪಾಳ ಗಡಿಯಲ್ಲಿರುವ ಸೈನಿಕರು ಮತ್ತು 7 ಸೈನಿಕರ ಮೃತದೇಹವನ್ನು ಮಲಗಿಸಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಇಂಡೋ-ನೇಪಾಳ ಗಡಿಯಲ್ಲಿ ಭಾರತೀಯ ಸೈನಿಕರು ಕದನ ವಿರಾಮ ಉಲ್ಲಂಘಿಸಿದ ಪರಿಣಾಮ ಮೂವರು ನಾಗರಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ನೇಪಾಳ ಸೈನಿಕರು ಭಾರತದ 7 ಜನ ಸೈನಿಕರನ್ನು ಹತ್ಯೆಗೈದಿದ್ದಾರೆ’ ಎಂದು ಹೇಳಲಾಗಿದೆ. ಅಲ್ಲದೆ ಟ್ವೀಟಿನಲ್ಲಿ ಭಾರತ-ನೇಪಾಳ ಗಡಿಯ ಬೆಹಾಲಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

Fact Check of 7 Indian army personnel killed by Nepal in Ceasefire violation

ಆದರೆ ನಿಜಕ್ಕೂ ನೇಪಾಳ ಭಾರತದ 7 ಯೋಧರನ್ನು ಹತ್ಯೆಗೈದಿದೆಯೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ವೈರಲ್‌ ಚಿತ್ರಗಳ ಜಾಡು ಹಿಡಿದು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆದ ಎರಡೂ ಚಿತ್ರಗಳ ಮೂಲ ಪತ್ತೆಯಾಗಿದೆ.

ಅದರಲ್ಲಿ ಮೊದಲನೆಯ ಚಿತ್ರ ನೇಪಾಳ ಯೋಧರು ಗಡಿ ಸಮೀಪದ ಮಹಾಕಾಳಿ ನದಿಯ ದಡದಲ್ಲಿ ಗಸ್ತು ತಿರುಗುತ್ತಿರುವುದು. ಎರಡನೆಯ ಫೋಟೋ 2015ರಲ್ಲಿ ನಾಗಾಲ್ಯಾಂಡ್‌ನಲ್ಲಿ ನೆಲ ಬಾಂಬ್‌ ಸ್ಫೋಟಗೊಂಡು ಮೃತಪಟ್ಟಅಸ್ಸಾಂ ರೈಫಲ್ಸ್‌ ಸೈನಿಕರದ್ದು. ಅದರ ಹೊರತಾಗಿ ನೇಪಾಳ ಭಾರತದ ಸೈನಿಕರನ್ನು ಕೊಂದ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿಲ್ಲ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್ 

 

Follow Us:
Download App:
  • android
  • ios