Asianet Suvarna News Asianet Suvarna News

Fact Check| ಜನ​ರಿಗೆ ಉಚಿ​ತ​ ಮಾಸ್ಕ್‌ ನೀಡಲು ಮೋದಿ ನಿರ್ಧಾ​ರ!

ಕೊರೋನಾ ಸೋಂಕು ಹರ​ಡ​ದಂತೆ ತಡೆ​ಯಲು ಭಾರ​ತದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜ​ನೆ​ಯಡಿ ಪ್ರತಿ​ಯೊ​ಬ್ಬ​ರಿಗೂ ಮಾಸ್ಕ್‌ ನೀಡಲು ನಿರ್ಧ​ರಿ​ಸಿ​ದ್ದಾ​ರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

Fact Check No PM Modi Is Not Distributing Free Masks Over Coronavirus Outbreak
Author
Bangalore, First Published Mar 19, 2020, 10:37 AM IST

ನವದೆಹಲಿ[ಮಾ.19]: ದಿನ​ದಿಂದ ದಿನಕ್ಕೆ ಕೊರೋನಾ ವೈರಸ್‌ ಭೀತಿ ಹೆಚ್ಚು​ತ್ತಿದೆ. ಇಷ್ಟುದಿನ ಚೀನಾ​ ಕೊರೋನಾ ವೈರಸ್‌ ಕೇಂದ್ರ​ ಬಿಂದು​ವಾ​ಗಿ​ದ್ದು, ಇದೀಗ ಯುರೋ​ಪ್‌​ನಲ್ಲಿ ಮರಣ ಮೃದಂಗ ಬಾರಿ​ಸು​ತ್ತಿದೆ. ಇತ್ತ ಭಾರ​ತ​ದಲ್ಲೂ ಸೋಂಕಿ​ತರ ಸಂಖ್ಯೆ ಏರಿ​ಕೆ​ಯಾ​ಗು​ತ್ತಿದೆ.

ಈ ನಡುವೆ ಕೊರೋನಾ ಸೋಂಕು ಹರ​ಡ​ದಂತೆ ತಡೆ​ಯಲು ಭಾರ​ತದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜ​ನೆ​ಯಡಿ ಪ್ರತಿ​ಯೊ​ಬ್ಬ​ರಿಗೂ ಮಾಸ್ಕ್‌ ನೀಡಲು ನಿರ್ಧ​ರಿ​ಸಿ​ದ್ದಾ​ರೆ. https://www.narendrmodiawasyaojna.in/?m=1 ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಮಾಸ್ಕ್‌​ಗ​ಳನ್ನು ಆರ್ಡರ್‌ ಮಾಡಿ ಎಂದು ಹಿಂದಿ​ಯಲ್ಲಿ ಹೇಳ​ಲಾದ ಸಂದೇಶ ಸೋಷಿ​ಯಲ್‌ ಮಿಡಿ​ಯಾ​ಗ​ಳಲ್ಲಿ ವೈರಲ್‌ ಆಗು​ತ್ತಿ​ದೆ.

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ದೇಶದ ಪ್ರತಿ​ಯೊ​ಬ್ಬ​ರಿಗೂ ಮಾಸ್ಕ್‌ ನೀಡಲು ನಿರ್ಧ​ರಿ​ಸಿ​ದೆಯೇ ಎಂದು ಪರಿ​ಶೀ​ಲಿಸಿ​ದಾಗ ಇದು ಸುಳ್ಳು​ಸುದ್ದಿ ಎಂದು ತಿಳಿದು​ಬಂದಿದೆ. ಏಕೆಂದರೆ ಈ ಸುದ್ದಿ ದೇಶದ ಯಾವುದೇ ಮುಖ್ಯ​ವಾ​ಹಿನಿ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿಲ್ಲ. ಅಲ್ಲ​ದೆ ಸ್ವಚ್ಛ ಭಾರತ ಯೋಜನೆಯ ಅಧಿ​ಕೃತ ವೆಬ್‌​ಸೈ​ಟ್‌​ನಲ್ಲಿ ಈ ರೀತಿಯ ಯಾವುದೇ ಮಾಹಿ​ತಿ ಇಲ್ಲ.

Fact Check No PM Modi Is Not Distributing Free Masks Over Coronavirus Outbreak

ಜೊತೆಗೆ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ​ದಾಗ ಹೆಸರು, ಫೋನ್‌ ನಂಬರ್‌, ಪಿನ್‌ಕೋಡ್‌ ಮುಂತಾದ ವಿವ​ರ​ಗ​ಳನ್ನು ಕೇಳು​ತ್ತದೆ. ಅನಂತರ ಇದನ್ನು 10 ವಾಟ್ಸ್‌​ಆ್ಯಪ್‌ ಬಳ​ಕೆ​ದಾ​ರ​ರಿಗೆ ಕಳು​ಹಿ​ಸು​ವುದು ಕಡ್ಡಾಯ ಎಂಬ ಸೂಚನೆ ಬರು​ತ್ತದೆ. ನಿಜಕ್ಕೂ ಸರ್ಕಾರಿ ವೆಬ್‌​ಸೈಟ್‌ ಆಗಿ​ದ್ದರೆ ಈ ರೀತಿ ಇರುವುದಿಲ್ಲ. ಜಾಹೀ​ರಾ​ತು​ಗಳ ಮೂಲಕ ಹಣ ಗಳಿ​ಸಲು ನಕಲಿ ವೆಬ್‌​ಸೈಟ್‌ ಸೃಷ್ಟಿಸಿ ಇಂತಹ ಸುಳ್ಳು​ಸುದ್ದಿ ಹಬ್ಬಿ​ಸಲಾಗುತ್ತಿದೆ.

Follow Us:
Download App:
  • android
  • ios