ಛೇ..! We Miss it,ಎಂಥಾ ಸ್ಫೂರ್ತಿ ನೀಡುವ ಶೋ ಇದು. ಪ್ಲೀಸ್ ಇನ್ನೂ ಸ್ವಲ್ಪ ದಿನ ಮುಂದುವರಿಸಿ ಎಂದು 'ವೀಕೆಂಡ್ ವಿತ್ ರಮೇಶ್' ಅಭಿಮಾನಿಗಳು ಒತ್ತಾಯಿಸುತ್ತಿರುವುದಂತೂ ಗ್ಯಾರಂಟಿ.

ವೀಕೆಂಡ್ ಬಂದರೆ ಸಾಕು ರಾತ್ರಿ 9ಕ್ಕೆ ಹಾಟ್‌ ಸೀಟ್‌ ವ್ಯಕ್ತಿ ಹಿಂದಿನ ಕಥೆ ಕೇಳಲು ಟೀವಿ ಮುಂದೆ ಕೂರುತ್ತೇವೆ. ಅದರಲ್ಲೂ ಕಾರ್ಯಕ್ರಮ ಶುರು ಮಾಡುವ ಮುನ್ನ ರಮೇಶ್ ಹೇಳುವ ಇನ್‌ಸ್ಪೀರೆಷನ್ ಸ್ಟೋರಿ ಎಷ್ಟೋ ಜನರಿಗೆ ಸ್ಫೋರ್ತಿಯಾಗಿರುವುದು ಸುಳ್ಳಲ್ಲ.

ಈ ವಾರ ವೀಕೆಂಡ್ ವಿತ್ ರಮೇಶ್‌ ಹಾಟ್‌ ಸೀಟ್‌ನಲ್ಲಿ ಖಡಕ್ ಪೊಲೀಸ್ ಅಧಿಕಾರಿಗಳು

 

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಸೀಸನ್ 4ರಲ್ಲಿ ಅತಿ ಹೆಚ್ಚು TRPಪಡೆದದ್ದು ಶೀಮುರಳಿ, ಸುಧಾ ಮೂರ್ತಿ, ನಾರಾಯಣ ಮೂರ್ತಿ, ಚಿಕ್ಕಣ್ಣ, ಶಂಕರ್ ಬಿದರಿ ಹಾಗೂ ಟೈಗರ್ ಅಶೋಕ್ ಅವರು ಹಾಟ್‌ಸೀಟಲ್ಲಿ ಕುಳಿತ ಎಪಿಸೋಡ್ಸ್. ಅಂದಮೇಲೆ ಗ್ರಾಂಡ್‌ ಫಿನಾಲೆ ವಿಭಿನ್ನವಾಗಿ ಇರಲೇ ಬೇಕಲ್ವಾ? ಹೌದು, ಈ ಸಲ ಗ್ರಾಂಡ್‌ ಫಿನಾಲೆಯಲ್ಲಿ ಕಾಲೇಜ್‌ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಾನ್ ಸಾಧನೆ ಮಾಡಿರುವ ಶ್ರೀಸಾಮನ್ಯನಿಗೆ ಹಾಟ್ ಸೀಟು ರಿಸರ್ವ್ ಆಗಿದೆ.

ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

ಗ್ರಾಂಡ್‌ ಫಿನಾಲೆಯ ಫೈನಲ್ಸ್ ಎಪಿಸೋಡ್ ಚಿತ್ರೀಕರಣ ಗುರುವಾರ (ಜು.11) ಮುಗಿದಿದ್ದು, ಕಾರ್ಯಕ್ರಮದ ನಡುವೆ ರಮೇಶ್ ಫೇಸ್‌ ಬುಕ್‌ ಲೈವ್‌ ಮಾಡಿದ್ದರು. ಇದೇ ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ.