ಕಥೆಯೊಂದು ಶುರುವಾಗಿದೆ: ನಿಮ್ಮ ಲವ್ ಸ್ಟೋರಿ ಹೇಳಿ, ಟಿಕೆಟ್ ಗೆಲ್ಲಿ

Win free tickets for Katheondu shuruagide movie
Highlights

ಪ್ರೇಮ ಕಥೆಯೊಂದರಲ್ಲಿ ಮತ್ತೆ  ಲವರ್ ಬಾಯ್ ದಿಗಂತ್ ವಿಂಚುತ್ತಿದ್ದಾರೆ.  30 ದಿನಗಳಲ್ಲಿ ಚಿತ್ರೀಕರಣ ಮುಗಿದು, ಶುರುವಾದ ಕಥೆಯನ್ನು ಹೇಳಲು ದಿಗಂತ್ ನಿಮ್ಮ ಮುಂದೆ  ಬರುತ್ತಿದ್ದಾರೆ. ಮುಂದೆ ಪ್ರೀತಿ ಹುಡುಕುವ ಕಾದಾಟದಲ್ಲಿ ಪರದೆ ಮೇಲೆ ಕಾಣಿಸಲಿದ್ದಾರೆ. ಪೂಜಾ ದೇವರಿಯಾ ನಟಿಯಾದ ಈ 2 ಗಂಟೆ 35 ನಿಮಿಷದ ಚಿತ್ರ ಕನ್ನಡ ಚಿತ್ರಾಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ.

ಚಿತ್ರದ ಟ್ರೇಲರ್‌ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಚಿತ್ರದ ಬಗ್ಗೆ ಚಿತ್ರ ರಸಿಕರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದು, ಎಲ್ಲರಲ್ಲೂ ಕಥೆ ಹುಟ್ಟುವ, ಹುಟ್ಟಿದ ಕಥೆಯನ್ನು ಹೇಳಿಕೊಳ್ಳುವ ಸಾಧ್ಯತೆ ಇದೆ!

ಪ್ರೀಮಿಯರ್ ಶೋಗೆ ಟಿಕೆಟ್ ಗೆಲ್ಲಿ:

ಪ್ರೀತಿ, ಪ್ರೇಮ, ಪ್ರಣಯವೆಂದು ಸಾರಿ ಹೇಳುವ ಚಿತ್ರವಾದರೂ, ವೃದ್ಧರಿಗೂ ತಮ್ಮ ಮೊದಲ ಪ್ರೀತಿಯನ್ನು ನೆನಪಿಸಿಕೊಂಡು, ಚಿತ್ರ ನೋಡುವ ಅವಕಾಶವೊಂದನ್ನು ಕಲ್ಪಿಸುತ್ತಿದೆ.  

ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರೀತಿಯೊಂದು ಜಿನುಗುರುತ್ತಿದೆ. ಮೊದಲ ಪ್ರೀತಿಯ ನೆನಪಂತೂ ಅಮರ, ಮಧುರ. ಕೆಲವರು ಮದುವೆಯಾಗಿರುತ್ತಾರೆ. ಮದುವೆಯಾಗಿ, ಹಲವಾರು ವರ್ಷಗಳು ಜತೆಯಾಗಿಯೂ ಸಂಸಾರ ನಡೆಸುತ್ತಿರುತ್ತಾರೆ. ಆ ಒಟ್ಟಾಗಿರುವಂತೆ ಮಾಡುವುದೇ ಪ್ರೀತಿ. ಈ ಪ್ರೀತಿ ಶುರವಾದ ಕಥೆಯನ್ನು ವೀಡಿಯೊ ಮಾಡಿ #KatheyonduShuruvagide ಎಂಬ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಅಪ್‌ಲೋಡ್ ಮಾಡಿದರೆ, ಕೆಲವರನ್ನು ಆರಿಸಿ, ಫ್ರೀ ಟಿಕೆಟ್ ಕೊಡುತ್ತಾರೆ. 

ಆಗಸ್ಟ್ 2ಕ್ಕೆ ಪ್ರೀಮಿಯರ್ ಶೋ

ಆಗಸ್ಟ್ 2 ರಂದು ಚಿತ್ರದ ಪ್ರೀಮಿಯರ್ ಶೋ ಓರಿಯನ್ ಮಾಲ್‌ನಲ್ಲಿರುವ ಪಿವಿಆರ್‌ನಲ್ಲಿರುತ್ತದೆ. ಇಲ್ಲಿ ನಾಲ್ಕು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನವಿರಲಿದೆ. ಅದರಲ್ಲಿ ಒಂದನ್ನು ಪ್ರೇಮಿಗಳಿಗೆ, ಪ್ರೀತಿಸಿ ಮದುವೆಯಾದವರಿಗೆ ಮೀಸಲಿಡಲಾಗುತ್ತದೆ. ಮತ್ತೊಂದನ್ನು ಅರೇಂಜ್ಡ್ ಮ್ಯಾರೇಜ್ ಆದವರಿಗೆ, ಮೂರನೇಯದನ್ನು ಪ್ರೀತಿಯಾದವರಿಗೆ ಹಾಗೂ ಸಿಂಗಲ್ ಆಗಿರೋ ಹುಡುಗ ಹುಡುಗಿಯರಿಗೆ ಹಾಗೂ ಬ್ರೇಕಪ್ ಆದವರಿಗೆ ಮೀಸಲಿಡಲಾಗಿದೆ. ನಾಲ್ಕನೇ ಸ್ಕೀನ್‌ನಲ್ಲಿ ಮದುವೆಯಾಗಿ ಬಹಳ ವರ್ಷಗಳ ಕಾಲ ಸುಸೂತ್ರವಾಗಿ ಸಂಸಾರ ನಿಭಾಯಿಸಿ, 25 ವರ್ಷಕ್ಕಿಂತಲೂ ಹೆಚ್ಚು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡವರಿರುತ್ತಾರೆ.

ನಿಮ್ಮ ನಿಮ್ಮ ಪ್ರೇಮ ಶುರುವಾಗಿದ್ದು ಹೇಗೆಂದು ಹೇಳಿಕೊಳ್ಳಿ, ಟಿಕೆಟ್ ಗೆಲ್ಲಿ.

 

 

loader