ಅಮಲಾ ಪೌಲ್ ಆಡೈ ಸಿನಿಮಾ ಟೀಸರ್ ನಲ್ಲಿ ನೇಕೆಡ್ ಸೀನ್ ಹಾಗೂ ವಿಜೆ ರಮ್ಯಾ ಗೆ ಕಿಸ್ ಮಾಡುತ್ತಿರುವ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಾಜಿ ಪತಿ ಮದುವೆ ಬಳಿಕ ಲವ್ ವಿಚಾರ ಬಿಚ್ಚಿಟ್ಟ ‘ಹೆಬ್ಬುಲಿ’ ನಟಿ

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಮಲಾ ಪೌಲ್ ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡಿದ್ದಾರೆ. ಮಹಿಳೆಗೆ ಕಿಸ್ ಮಾಡೋದ್ರಲ್ಲಿ ತಪ್ಪೇನಿದೆ? ಆ ಸೀನ್ ಸ್ಕ್ರಿಪ್ಟ್ ಅಲ್ಲ, ಸ್ಪಾಂಟೇನಿಯಸ್ ಆಗಿ ಬಂದಿದ್ದು. ಒಮ್ಮೆ ನೀವು ಪಾತ್ರದಲ್ಲಿ ಪ್ರವೇಶ ಮಾಡಿದರೆ ನಿಮ್ಮೊಳಗಿನ ಕಲಾವಿದನನ್ನು ಹೊರಗೆಳೆಯಬೇಕು’ ಎಂದಿದ್ದಾರೆ. 

‘ಆಡೈ’ ಚಿತ್ರದ ಬೆತ್ತಲೆ ಗುಟ್ಟು ರಟ್ಟು ಮಾಡಿದ ಅಮಲಾ ಪೌಲ್

ಈ ಸಿನಿಮಾದ ನೇಕೆಡ್ ದೃಶ್ಯಗಳ ಬಗ್ಗೆ ಪ್ರಶ್ನಿಸಿದಾಗ, ಈ ಸಿನಿಮಾದಲ್ಲಿ ಸೆಕ್ಸ್ ಸೀನ್ ಗಳೇನೂ ಇಲ್ಲ. ಒಮ್ಮೆ ಸಿನಿಮಾ ನೋಡಿ. ನಿಮಗೆ ಅರ್ಥವಾಗುತ್ತದೆ. ಮೊದಲು ಈ ಸೀನ್ ಮಾಡುವಾಗ ಹೇಗೆ ಮಾಡೋದು ಅಂದ್ಕೊಂಡಿದ್ದೆ. ಮಾಡಿ ಮುಗಿಸಿದಾಗ ರಿಲಾಕ್ಸ್ ಆಯ್ತು. ಯಾವುದೇ ಸಮಸ್ಯೆಯನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಬಂತು. ಆಡೈ ನನಗೆ ಆತ್ಮಬಲ ತುಂಬಿದೆ ಎಂದು ಹೇಳಿದರು. 

ಬೆತ್ತಲೆ ಪಾತ್ರ ಮಾಡುವ ಮುನ್ನ ಅಮ್ಮನನ್ನು ಕೇಳಿದೆ. ಪಾತ್ರಕ್ಕೆ ಅಗತ್ಯವಿದ್ದರೆ ಮಾಡು ಎಂದಿರುವುದಾಗಿ ಅಮಲಾ ಹೇಳಿದ್ದಾರೆ.