ಮಹೇಂದ್ರ ಸಿಂಗ್‌ ಧೋನಿ ಹಾಗೂ ಅವರ ಮಗಳು ಜೀವಾ ಧೋನಿ ಲಾಕ್‌ಡೌನ್‌ ಪರಿಣಾಮ ಬೇರೆಲ್ಲೂ ಟೂರ್‌ ಹೋಗಲಾಗದೆ, ಕ್ರಿಕೆಟ್‌ ಆಟವೂ ಇಲ್ಲದೆ, ರಾಂಚಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ರೆಸ್ಟ್‌ ಮಾಡುತ್ತಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಲ್ಲೇ ಬೈಕ್‌ ರೈಡ್‌ ಹೋಗುವುದು, ಜೀವಾಗೆ ಸುತ್ತಮುತ್ತಲಿನ ಪರಿಸರದ ಪರಿಚಯ ಮಾಡಿಸುವುದು, ಅಲ್ಲೇ ಸುತ್ತಾಡುವುದು ಅವರ ಫೇವರಿಟ್‌ ಪಾಸ್‌ಟೈಮ್‌.

ನಿನ್ನೆ ಒಂದು ಘಟನೆ ನಡೆಯಿತು. ಜೀವಾ ತಂದೆ ತಾಯಿ ಜೊತೆ ಫಾರ್ಮ್‌ಹೌಸ್‌ನ ಲಾನ್‌ನಲ್ಲಿ ಸುತ್ತಾಡುತ್ತಿದ್ದಾಗ ಏನಾಯಿತು ಎಂಬುದನ್ನು ಸ್ವತಃ ಜೀವಾ ಆಕೆಯ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಬರೆದಿದ್ದಾಳೆ (ಜೀವಾ ಇನ್ನೂ ಪುಟ್ಟ ಹುಡುಗಿ. ಆಕೆಯ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಮೇಂಟೇನ್ ಮಾಡೋದು ಆಕೆಯ ಅಪ್ಪನೇ). ಅದು ಹೀಗಿದೆ:

''ನಾವಿಂದು ಲಾನ್‌ನಲ್ಲಿ ಸುತ್ತಾಡುತ್ತಾ ಇದ್ದಾಗ ಒಂದು ಪುಟ್ಟ ಹಕ್ಕಿ ಮರಿ ಪ್ರಜ್ಞೆ ತಪ್ಪಿ ಬಿದ್ದಿರುವುದು ನೋಡಿದೆ. ಕೂಡಲೇ ಅಪ್ಪ ಅಮ್ಮನನ್ನು ಕೂಗಿ ಕರೆದೆ. ಕೂಡಲೇ ಬಂದ ಅಪ್ಪ, ಆ ಹಕ್ಕಿ ಮರಿಯನ್ನು ಎತ್ತಿ ಕೈಯಲ್ಲಿಟ್ಟುಕೊಂಡು, ಅದಕ್ಕೆ ನೀರು ಕುಡಿಸಿದರು. ನಿಧಾನವಾಗಿ ಅದು ಕಣ್ಣು ತೆರೆಯಿತು. ನಮಗೆಲ್ಲ ಅದು ಬದುಕಿತಲ್ಲ ಅಂತ ಸಂತೋಷವಾಯಿತು. ನಂತರ ಅಪ್ಪ ಒಂದು ಬಾಸ್ಕೆಟ್‌ ತಂದು, ಅದರಲ್ಲಿ ಮರದ ಎಲೆಗಳನ್ನು ಹಾಕಿ, ಅದರಲ್ಲಿ ಮರಿಯನ್ನು ಮಲಗಿಸಿದರು. ಅಮ್ಮ ಹುಡುಕಿನೋಡಿ, ಅದು ಕ್ರಿಮ್ಸನ್‌ ಬ್ರೆಸ್ಟೆಡ್‌ ಬಾರ್ಬೆಟ್‌ ಅಥವಾ ಕಾಪರ್‌ಸ್ಮಿತ್‌ ಹಕ್ಕಿ ಅಂತ ಅದಕ್ಕೆ ಹೆಸರಿಟ್ಟರು. ತುಂಬಾ ಮುದ್ದಾಗಿತ್ತು. ನಂತರ ಥಟ್ಟನೆ ಎದ್ದು ಹಾರಿಹೋಯಿತು. ಅದು ನಮ್ಮ ಹತ್ತಿರವೇ ಇರಲಿ ಅಂತ ಆಸೆಪಟ್ಟಿದ್ದೆ. ಆದರೆ ಅದು ಅದರ ಅಮ್ಮನ ಹತ್ತಿರ ಹೋಯಿತು ಅಂತ ಅಮ್ಮ ಹೇಳಿದರು. ನಾನು ಮತ್ತೊಮ್ಮೆ ಆ ಹಕ್ಕಿಯನ್ನು ನೋಡೇ ನೋಡ್ತೀನಿ, ಖಂಡಿತ.''

ಈ ಘಟನೆಯನ್ನು ಬರೆದ ಜೀವಾ, ಎರಡು ಫೋಟೊಗಳನ್ನು ಕೂಡ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿದ್ದಾಳೆ. ಎರಡರಲ್ಲೂ ಧೋನಿ ಕೈಯಲ್ಲಿ ಆ ಹಕ್ಕಿ ಮರಿಯಿದೆ. ಜೀವಾ ಅದನ್ನು ನೋಡುತ್ತಿದ್ದಾಳೆ.

ಧೋನಿ ಗಮನಸೆಳೆಯಲು ಪತ್ನಿ ಸಾಕ್ಷಿ ಐಡಿಯಾ, ಹೇಗೆ ಕಳೆಯುತ್ತಿದ್ದಾರೆ ಲಾಕ್‌ಡೌನ್ ಸಮಯ? 
ಮಗಳು ಜೀವಾಗಾಗಿ ಜೀವ ಬಿಡೋ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಮಗಳಿಗಾಗಿ ಒಂದು ಇನ್‌ಸ್ಟಾಗ್ರಾಮ್‌ ಪೇಜ್‌ ಕ್ರಿಯೇಟ್‌ ಮಾಡಿದ್ದಾರೆ. ಈ ಪೇಜ್‌ಗೆ ಒಮ್ಮೆ ವಿಸಿಟ್‌ ಮಾಡಿ ನೋಡಿ- ಶಾಕ್‌ ಆಗಬಹುದು- ಯಾಕೆಂದರೆ ಆಕೆಗೆ ಈಗಾಗಲೇ ೪೨ ಲಕ್ಷ ಫಾಲೋವರ್ಸ್‌ ಇದ್ದಾರೆ! ಎಂಥಾ ಸೆಲೆಬ್ರಿಟಿಗಾದ್ರೂ ಈ ಪರಿ ಅಭಿಮಾನಿಗಳಿರೋದು ಕಷ್ಟ. 

ಝಿವಾಳೊಂದಿಗೆ ಧೋನಿ ಬೈಕ್‌ ರೈಡ್‌! ವಿಡಿಯೋ ವೈರಲ್ 
ಈ ಪೇಜ್‌ನಲ್ಲಿ ಎರಡು ಭಾಗಗಳಿವೆ. ಒಂದರಲ್ಲಿ ಜೀವಾಳ ವೈವಿಧ್ಯಮಯ ಚಟುವಟಿಕೆಗಳು. ಇನ್ನೊಂದರಲ್ಲಿ ಆಕೆಯ ರೋಡ್‌ ಟ್ರಿಪ್‌ನ ಡೀಟೈಲ್‌. ಇದಲ್ಲದೇ ನೂರಾರು ಪೋಸ್ಟ್‌ಗಳು. ಒಂದರಲ್ಲಿ ಇವಳು ಅಪ್ಪನಿಗೆ ಮಸಾಜ್‌ ಮಾಡುತ್ತಿದ್ದಾಳೆ. ಎಳೆಯ ಕೈಗಳ ಸ್ಪರ್ಶಕ್ಕೆ ಕರಗಿಹೋಗಿದ್ದಾರೆ ದೈತ್ಯ ಕ್ರಿಕೆಟಿಗ. ಈ ವೀಡಿಯೋವನ್ನು ಬಹಳ ಜನ ಲೈಕ್‌ ಮಾಡಿದ್ದಾರೆ. ಅದೇ ರೀತಿ ಧೋನಿ ಮಗಳ ಕೂದಲನ್ನು ಬ್ಲೋಡ್ರೈ ಮೂಲಕ ಒಣಗಿಸೋ ವೀಡಿಯೋ ಸಹ ಸಖತ್‌ ಫನ್ನಿ. ಸಮುದ್ರ ದಡದಲ್ಲಿ ಮರಳಾಟ ಆಡೋ ಅಪ್ಪ, ಮಗಳು, ನಾಯಿಯನ್ನು ಮುದ್ದಾಡೋ ಜೀವಾ, ಬ್ಯಾಗ್‌ ಹಾಕ್ಕೊಂಡು ಸ್ಕೂಲ್‌ಗೆ ಹೊರಟಿರೋದು ಹೀಗೆ. ಜೀವಾ ಹಾಡಿರೋ ಒಂದು ಮಲೆಯಾಳಂ ಹಾಡು ಸಕತ್‌ ವೈರಲ್‌ ಆಗಿದ್ದಲ್ಲದೆ, ಐದು ಲಕ್ಷ ಹಿಟ್‌ ಕಂಡಿತ್ತು. ಈಕೆ ಧ್ಯಾನ ಮಾಡುತ್ತಿರುವ ಫೋಟೋ, ಸೋಫಾದಲ್ಲಿ ಕುಣಿಯುತ್ತಿರುವ ವಿಡಿಯೋ- ಹೀಗೆ ನೂರಾರು ಪೋಸ್ಟ್‌ಗಳು ಮನಕ್ಕೆ ಮುದ ನೀಡುವ ಹಾಗೆ ಇವೆ.

Instgram Link: https://www.instagram.com/p/CBN_DbSHMXk/

ಪ್ರತಿ ಬಾರಿ ಕ್ರೀಸ್‌ಗಿಳಿ​ದಾಗ ಮೊದಲ 10 ಎಸೆ​ತ​ಗಳನ್ನು ಎದು​ರಿ​ಸುವಾಗ ಒತ್ತಡವಿರು​ತ್ತೆ: ಧೋನಿ