ನವದೆಹಲಿ(ಜು.31): ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಂದರ್ಭ ಮಾಜಿ ಗರ್ಲ್‌ಫ್ರೆಂಡ್ ರಿಯಾ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಸುಶಾಂತ್ ಎಟಿಎಂ ಕಾರ್ಡ್ ಬಳಕೆ, ಹಣ ವರ್ಗಾವಣೆ, ಎಫ್‌ಐಆರ್ ಸೇರಿ ನಟನ ಆಶ್ಮಹತ್ಯೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಿ ಬರುತ್ತಿರುವ ಹಸೆರು ರಿಯಾ. ಇದೀಗ ರಿಯಾ ಹೇಳಿಕೆ ಸಂಶಯಗಳಿಗೆ ಎಡೆ ಮಾಡಿದೆ.

ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಬಿಗ್ ಟ್ವಿಸ್ಟ್, ಪ್ರೇಯಸಿ ರಿಯಾ ನಾಪತ್ತೆ!

ಸುಶಾಂತ್‌ ಜೊತೆಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆ. ಜೂನ್‌ 8ರ ವರೆಗೂ ನಟ ಜೊತೆಯಲ್ಲಿದ್ದೆ. ಜೂ.08ರಂದು ಸುಶಾಂತ್ ಮನೆಯಿಂದ ಬಂದಿದ್ದೆ ಎಂದು ರಿಯಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ನಾನು ಕಾರಣ ಎಂದು ಎಫ್‌ಐಆರ್ ಹಾಕಲು ಸುಶಾಂತ್ ತಂದೆ ತಮ್ಮ ಪ್ರಭಾವ ಬಳಸಿದ್ದಾರೆ ಎಂದು ರಿಯಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ನಟ ಸುಶಾಂತ್ ಸಿಂಗ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗೆಳತಿ ರಿಯಾಗೆ ಆತಂಕ!

ಮುಂಬೈಯ ಬಾಂದ್ರಾದ ಮನೆಯಲ್ಲಿ ಜೂನ್14ರಂದು  ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಟ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದು, ಈ ಮಧ್ಯೆಯೇ ಕೊಲೆ, ಅತ್ಯಾಚಾರ ಬೆದರಿಕೆಗಳೂ ಬರುತ್ತಿರುವುದಾಗಿ ರಿಯಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.