ವೈದ್ಯಕೀಯ ಸಮಾವೇಶದಲ್ಲಿ ಐಟಂ ಡಾನ್ಸ್ : ವೀಡಿಯೋ ವೈರಲ್
ಚೆನ್ನೈನಲ್ಲಿ ನಡೆದ ವೈದ್ಯಕೀಯ ಸಮ್ಮೇಳನವೊಂದರಲ್ಲಿ ಡಾನ್ಸರ್ ಒಬ್ಬರ ನೃತ್ಯ ವಿವಾದಕ್ಕೆ ಕಾರಣವಾಗಿದೆ. ವೈದ್ಯಕೀಯ ಸಮ್ಮೇಳನದಲ್ಲಿ ಇಂತಹ ಕಾರ್ಯಕ್ರಮ ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನಗಳು ಸಾಮಾನ್ಯ. ಅಲ್ಲದೇ ಕೆಲವೊಂದು ಸಂಘ ಸಂಸ್ಥೆಗಳು ಕೂಡ ವಾರ್ಷಿಕ ಕಾರ್ಯಕ್ರಮದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಉದ್ಯೋಗಿಗಳಿಗೆ ಮನೋರಂಜನೆ ನೀಡುತ್ತೇವೆ. ಆದರೆ ಚೆನ್ನೈನ ಮೆಡಿಕಲ್ ಕಾನ್ಫರೆನ್ಸ್‌ನಲ್ಲಿ ನಡೆದ ಡಾನ್ಸ್ ಕಾರ್ಯಕ್ರಮವೊಂದರ ವೀಡಿಯೋ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಪ್ರದರ್ಶಿಸಿದ ನೃತ್ಯಕ್ಕೆ ಈಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಕೊಲೊನ್ & ರೆಕ್ಟಲ್ ಸರ್ಜನ್‌ಗಳ ಅಸೋಸಿಯೇಷನ್‌ನ 47ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಅಸಭ್ಯವಾಗಿ ಬಟ್ಟೆ ತೊಟ್ಟು ನರ್ತನ ಮಾಡಿದ್ದಾರೆ. ಸ್ಟೇಜ್‌ನಿಂದ ಕೆಳಗೆ ಕ್ಯಾಬರೆ ಡಾನ್ಸರ್ ರೀತಿ ಸಣ್ಣಬಟ್ಟೆ ತೊಟ್ಟು ಡಾನ್ಸರ್ ಒಬ್ಬಳು ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡು ರಾ ರಾ ರಕ್ಕಮ್ಮಗೆ ಎರ್ರಾಬಿರ್ರಿ ಮೈ ಬಳುಕಿಸಿದ್ದಾರೆ. ಆಕೆ ಬರೀ ಡಾನ್ಸ್ ಮಾಡಿದ್ದು ಮಾತ್ರವಲ್ಲದೇ ಅಲ್ಲಿ ಕೈಯಲ್ಲಿ ಮದ್ಯ ಹಿಡಿದುಕೊಂಡಿದ್ದ ಕೆಲ ಪುರುಷರ ಎದುರು ಕುಣಿದ ಆಕೆ ಬಳಿಕ ಅಲ್ಲಿದ್ದ ಪುರುಷರೊಬ್ಬರನ್ನು ತನ್ನತ್ತ ಎಳೆದುಕೊಂಡು ಅವರು ಹೆಜ್ಜೆ ಹಾಕುವಂತೆ ಡಾನ್ಸ್ ಮಾಡಿದ್ದಾಳೆ. ಆದರೆ ಮೆಡಿಕಲ್ ಕಾನ್ಫರೆನ್ಸ್‌ನಲ್ಲಿ ಈ ರೀತಿ ಅಸಭ್ಯ ನೃತ್ಯ ಮಾಡಿರುವುದಕ್ಕೆ ಒಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಗ್ಯ ಸಮಸ್ಯೆ ಇದ್ದರೆ ಬೆಂಡೆಕಾಯಿ ತಿನ್ನಲೇಬೇಡಿ: ವಿಷವಾಗಬಲ್ಲದು ಈ ಹಸಿರು ತರಕಾರಿ
Sutirtha (@ginger_bread_s) ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತೀಯ ಕೊಲೊನ್ ಮತ್ತು ರೆಕ್ಟಲ್ ಸರ್ಜನ್ಸ್‌ಗಳ ಈ ವಾರ್ಷಿಕ ಸಮ್ಮೇಳನವು 19 ರಿಂದ 21 ಸೆಪ್ಟೆಂಬರ್‌ವರೆಗೆ ಚೆನ್ನೈನಲ್ಲಿ ನಡೆಯಿತು. ಇದು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಮಾಡಿದ ತರಬೇತಿಯೇ ಎಂದು ನಾನು @IMAIindiaOrg ದಿಂದ ತಿಳಿದುಕೊಳ್ಳಲು ಬಯಸುತ್ತೇನೆ. ವಯಸ್ಸಾದ ವೈದ್ಯರು ಸಾರ್ವಜನಿಕವಾಗಿ ಮಹಿಳೆಯನ್ನು ಹಿಡಿದುಕೊಳ್ಳುವುದು ಯಾವ ರೀತಿ ವೈದ್ಯಕೀಯ ಅಭ್ಯಾಸದ ಭಾಗ? ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ವೀಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅಸಭ್ಯತೆ ಎಂದರೆ ಮತ್ತೆ ಕೆಲವರು ಇದನ್ನು ತಮಾಷೆಯಾಗಿ ಪರಿಗಣಿಸಿದ್ದಾರೆ, ಕೆಲವರು ಇದು ತೀರಾ ನಾಚಿಕೆಗೇಡಿನ ಘಟನೆ ಎಂದಿದ್ದಾರೆ. ಮತ್ತೆ ಕೆಲವರು ಡಾಕ್ಟರ್‌ಗಳಿಗೂ ಮಜಾ ಮಾಡಲು ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಮೂತ್ರ, ರಕ್ತದ ಸೋಂಕು :ಆಂಟಿಬಯೋಟಿಕ್‌ಗಳಿಗೆ ಕ್ಯಾರೇ ಅನ್ನುತ್ತಿಲ್ಲ ಈ ರೋಗಗಳು: ಐಸಿಎಂಆರ್ ವರದಿ
ವೈದ್ಯಕೀಯ ವೃತ್ತಿಯಲ್ಲಿರುವರಿಗೆ ಸ್ನೇಹಪರವಾಗಿ ಹಾಗೂ ವೈಯಕ್ತಿಕ ಮನೋರಂಜನೆಗೆ ಸಮಯ ಸಿಗುವುದು ತೀರಾ ಅಪರೂಪ ಹೀಗಿರುವಾಗಿ ವೈದ್ಯಕೀಯ ಸಮ್ಮೇಳನದಲ್ಲಿಈ ರೀತಿ ಕಾರ್ಯಕ್ರಮ ಆಯೋಜಿಸಿದ್ದರೆ ಏನು ತಪ್ಪು? ಜನರು ಅದನ್ನು ಪ್ರಶ್ನಿಸುವುದು ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅವರ ಖಾಸಗಿ ಪಾರ್ಟಿಯನ್ನು ಹೀಗೆ ಸಾರ್ವಜನಿಕಗೊಳಿಸುವುದು ಏಕೆ? ಸಮಾಜದ ಇತರ ಗುಂಪುಗಳು ಈ ರೀತಿ ಕಾರ್ಯಕ್ರಮ ಆಯೋಜಿಸುವುದಿಲ್ಲವೇ? ಇದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಕೆಲವರು ವೈದ್ಯರನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಕಾಣುವಂತೆ ವೈದ್ಯರು ಇಲ್ಲಿ ಮಹಿಳೆಯನ್ನು ಎಳೆದಾಡಿಲ್ಲ, ಮಹಿಳೆಯೇ ವೈದ್ಯರನ್ನು ಎಳೆದಾಡಿದ್ದಾಳೆ ಎಂದು ಮತ್ತೊಬ್ಬರು ವೈದ್ಯರನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.