ಉರಿ ಸಿನಿಮಾ ಮೂಲಕ ಪಾಕಿಗಳ ನಿದ್ದೆ ಕೆಡಿಸಿದ್ರು ವಿಕ್ಕಿ ಕೌಶಲ್. ಮುಂದಿನ ಸಿನಿಮಾದಲ್ಲಿ ಆಂಗ್ಲರಿಗೆ ಬಿಸಿ ಮುಟ್ಟಿಸಲಿದ್ದಾರೆ ಈ ಹೀರೋ. ಉರಿ ನಾಯಕನ ಮುಂದಿನ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ನೋಡಿ ವಿವರ
ಮುಂಬೈ[ಮಾ.04]: ಸೂಪರ್ ಹಿಟ್ ಸಿನಿಮಾ ಮೂಲಕ ಭಾರತೀಯರ ಮನಗೆದ್ದ ಹೀರೋ ವಿಕ್ಕಿ ಕೌಶಲ್ ಸದ್ಯ ದೇಶಭಕ್ತಿಯಲ್ಲಿ ಮುಳುಗಿದ್ದಾರೆ. 'ಉರಿ' ದ ಸರ್ಜಿಕಲ್ ಸ್ಟ್ರೈಕ್ ಬಳಿಕ ತೆರೆಗಪ್ಪಳಿಸಲಿರುವ ಅವರ ಮುಂದಿನ ಸಿನಿಮಾದಲ್ಲೂ ವಿಕ್ಕಿ ಕೌಶಲ್ ಓರ್ವ ಅಪ್ಪಟ ದೇಶಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ವಿಕ್ಕಿ ಕೌಶಲ್ 2019ನ್ನು ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ. ಉರಿ' ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾವು ಬಾಕ್ಸಾಫೀಸ್ ನಲ್ಲಿ ಸರಿ ಸುಮಾರು 240 ಕೋಟಿ ಮೊತ್ತವನ್ನು ಗಳಿಸಿ ಮುಂದೆ ಸಾಗಿದೆ. ಹೀಗಿರುವಾಗಲೇ ವಿಕ್ಕಿ ತಮ್ಮ ಮುಂದಿನ ಸಿನಿಮಾದಲ್ಲಿ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಲಿದ್ದಾರೆ.
ಯಾರು ಈ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್?
ಪ್ರಖ್ಯಾತ ಕ್ರಾಂತಿಕಾರಿ ಉಧಮ್ ಸಿಂಗ್ 1919ರಲ್ಲಿ ನಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಸೇಡು ತೀರಿಸಿಕೊಳ್ಳಲು ಜನರಲ್ ಡಾಯರ್ ರನ್ನು ಹತ್ಯೆಗೈದಿದ್ದರು. ಇದರ ಪರಿಣಾಮವಾಗಿ ಅವರನ್ನು 1940ರಲ್ಲಿ ಗಲ್ಲಿಗೇರಿಸಲಾಗಿತ್ತು. ಜನರಲ್ ಡಾಯರ್ ಜಲಿಯನ್ವಾಲಾ ಬಾಗ್ ನಲ್ಲಿ ಶಾಂತಿ ಸಭೆಗೆಂದು ಸೇರಿದ್ದ ಮುಗ್ಧ ಜನರ ಮೇಲೆ ಗುಂಡು ಸಿಡಿ ಹತ್ಯೆಗೖದಿದ್ದರು.
#UriTheSurgicalStrike biz at a glance...
— taran adarsh (@taran_adarsh) March 4, 2019
Week 1: ₹ 71.26 cr
Week 2: ₹ 62.77 cr
Week 3: ₹ 37.02 cr
Week 4: ₹ 29.34 cr
Week 5: ₹ 18.74 cr
Week 6: ₹ 11.56 cr
Week 7: ₹ 6.68 cr
Weekend 8: ₹ 2.32 cr
Total: ₹ 239.69 cr
India biz.
ALL TIME BLOCKBUSTER.
ವಿಕ್ಕಿ ಕೌಶಲ್ ಕುರಿತಾಗಿ ಪ್ರತಿಕ್ರಿಯಿಸಿರುವ ನಿರ್ದೆಶಕ ಶೂಜಿತ್ ಸರ್ಕಾರ್ 'ವಿಕ್ಕಿಯವರ ಟ್ರ್ಯಾಕ್ ರೆಕಾರ್ಡ್ ಗಮನಿಸಿದರೆ ಅವರು ಕೆಚ್ಚೆದೆಯ ಹೆಜ್ಜೆ ಇರಿಸುತ್ತಾ ಅತ್ಯುತ್ತಮ ಸಿನಿಮಾಗಳನ್ನು ಮಾಡುತ್ತಿರುವುದು ಗಮನಿಸಬಹುದು. ನಾನು ಕೂಡಾ ಸಿನಿಮಾ ಪಾತ್ರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ದನಿರುವ ನಟನ ಹುಡುಕಾಟದಲ್ಲಿದ್ದೆ. ವಿಕ್ಕಿ ಓರ್ವ ಪಂಜಾಬಿ ಯುವಕ ಹಾಗೂ ನಾನು ಮಾಡಲು ಹೊರಟಿರುವ ಸಿನಿಮಾ ಕೂಡಾ ಪಂಜಾಬಿ ವ್ಯಕ್ತಿ ಆಧಾರಿತವಾಗಿದೆ. ಅನೇಕ ವಿಚಾರಗಳಲ್ಲಿ ಅವರು ಈ ಸಿನಿಮಾದಲ್ಲಿ ನಟಿಸಲು ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಉರಿ ಸಿನಿಮಾ ಮೂಲಕ ಪಾಕಿಸ್ತಾನದ ನಿದ್ದೆ ಕೆಡಿಸಿದ್ದ ವಿಕ್ಕಿ ಕೌಶಲ್ ಶೀಘ್ರದಲ್ಲೇ ಭಾರತೀಯರನ್ನು ಹಿಂಸಿಸಿದ್ದ ಆಂಗ್ಲರ ನಿದ್ದೆ ಕೆಡಿಸುವುದರಲ್ಲಿ ಅನುಮಾನವಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 4, 2019, 5:01 PM IST