'ಕಿಚಡಿ' ರಿಯಾಲಿಟಿ ಶೋ ಖ್ಯಾತಿಯ ಬಾಲಿವುಡ್‌ ಖ್ಯಾತ ಹಾಸ್ಯನಟ ದಿನ್ಯಾರ್ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. 

ಕಳೆದ ಕೆಲದಿನಗಳಿಂದ ದಿನ್ಯಾರ್ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 

ಚೋರಿ ಚೋರಿ ಚುಪ್ಕೆ ಚುಪ್ಕೆ, ಖಿಲಾಡಿ, ಬದ್ಮಾಶ್, 36 ಚೀನಾ ಟೌನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ದಿನ್ಯಾರ್ ನಟಿಸಿದ್ದಾರೆ. ಕಿಚಡಿ, ಕಭಿ ಇದರ್ ಕಭಿ ಉದರ್, ಹಮ್ ಸಬ್ ಏಕ್ ಹೇ, ಆಜ್ ಕೇ ಶ್ರೀಮಾನ್ ಶ್ರೀಮತಿ ಸೇರಿದಂತೆ ಸಾಕಷ್ಟು ಫೇಮಸ್ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. 

2019 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಬಂದಿದೆ. 

ಪ್ರಧಾನಿ ಮೋದಿ ದಿನ್ಯಾರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. 

 

ಪದ್ಮಶ್ರೀ ವಿಜೇತ ದಿನ್ಯಾರ್ ತುಂಬಾ ಸ್ಪೆಷಲ್. ಸಾಕಷ್ಟು ಜನರ ಮುಖದ ಮೇಲೆ ನಗುವರಳಿಸಿದ್ದಾರೆ. ಅದ್ಭುತ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ಅವರಿಲ್ಲ ಎಂಬ ವಿಚಾರ ಕೇಳಿ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದಿದ್ದಾರೆ.