Asianet Suvarna News Asianet Suvarna News

ಲೀಕ್ ಆಗಿ ವೈರಲ್ ಆದ ಟಾಪ್ 10 ಹಸಿ ಬಿಸಿ ದೃಶ್ಯಗಳು

ಈ ಲೀಕ್ ಆಗುವುದಕ್ಕೂ ಸೋಶಿಯಲ್ ಮೀಡಿಯಾಕ್ಕೂ ಬಿಡದ ಸಂಬಂಧ. ಸದ್ಯ ತೆಲಗು ಚಿತ್ರ ಗೀತ ಗೋವಿಂದಂ ಚಿತ್ರದ ದೃಶ್ಯವೊಂದು ಲೀಕ್ ಆಗಿರುವುದು ಬಹಳ ದೊಡ್ಡ ಸುದ್ದಿ ಮಾಡ್ತಿದೆ. ಸಿನಿಮಾ ಮಾತ್ರವಲ್ಲ ಸರಕಾರಕ್ಕೆ ಸಲ್ಲಿಕೆಯಾಗಬೇಕಲಾದ ಕೆಲವು ವರದಿಗಳು ಲೀಕ್ ಆಗಿದ್ದನ್ನು ಕೇಳಿದ್ದೇವೆ ಮತ್ತು ಕಂಡಿದ್ದೇವೆ.

Uncensored Leaked Top 10 scenes that went viral
Author
Bengaluru, First Published Aug 15, 2018, 5:46 PM IST

ಕಿಸ್ಸಿಂಗ್ ಸೀನ್ ವೊಂದು ಲೀಕ್ ಆಗಿದ್ದು ನಟಿ ರಶ್ಮಿಕಾ ಮಂದಣ್ಣ ಕುರಿತಾಗಿ ಅದೆಷ್ಟೊ ಬಗೆಯ ಚರ್ಚೆಗಳು ಹರಿದಾಡಿದವು. ನಾವು ಇಲ್ಲಿ ಹೇಳ್ತಾ ಇರೋದು ಲೀಕ್ ಆಗಿದ್ದು ನಂತರ ಯಾವ ವಿವಾದ ಮಾಡಿತು ಎಂಬುದನ್ನಲ್ಲ. ಇದಕ್ಕೆ ಹಾಗಾದರೆ ನಿಜಕ್ಕೂ ಕಾರಣ ಅಥವಾ ಮೂಲ ಎಲ್ಲಿಂದ?

ರಾಧಿಕಾ ಆಪ್ಟೆ ಸೀನ್ ಲೀಕ್: ಬಾಲಿವುಡ್ ನಟಿ ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದ ಹಿಂದಿ ಚಿತ್ರವೊಂದರ ಮೇಕಿಂಗ್ ದೃಶ್ಯ ಲೀಕ್ ಆಗಿ ಸಖತ್ ಸುದ್ದಿ ಮಾಡಿತ್ತು. ಅಲ್ಲದೇ ರಾಧಿಕಾ ಅಲ್ಲಿ ಕಾಣಿಸಿಕೊಂಡ ರೀತಿಯೂ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!

ದಂಡುಪಾಳ್ಯ ಪಾರ್ಟ್ 2 ಸಂಜನಾ: ನಟಿ ಸಂಜನಾ ಗಲ್ರಾನಿ ಬೆತ್ತಲಾಗಿರುವ ವಿಡಿಯೋ ಒಂದು ಜಾಲತಾಣದಲ್ಲಿ ಸದ್ದು ಮಾಡಿತ್ತು. ಸೆನ್ಸಾರ್ ಮಂಡಳಿ ಈ ದೃಶ್ಯಕ್ಕೆ ಕತ್ತರಿ ಹಾಕಿದ್ದರೂ ಆನ್ ಲೈನ್ ನಲ್ಲಿ ಲಭ್ಯವಾಗಿತ್ತು. ರವಿಶಂಕರ್ ಪೋಲೀಸ್ ಆಫೀಸರ್ ಆಗಿದ್ದು ಸಂಜನಾಗೆ ಶಿಕ್ಷೆ ಕೊಡೋ ದೃಶ್ಯ ಇದಾಗಿದೆ. ಇನ್ನೂ ಸೆನ್ಸಾರ್ ಮಂಡಳಿ ಕೂಡ ಸ್ಪಷ್ಟನೆ ನೀಡಿದ್ದು, ನಮ್ಮಿಂದ ಯಾವುದೇ ದೃಶ್ಯ ಲೀಕ್ ಆಗಿಲ್ಲ ಅಂತ ಹೇಳಿತ್ತು.

ಇದೀಗ ಗೀತಾ ಗೋವಿಂದಂ ಸರದಿ: ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಗೀತಾ ಗೋವಿಂದಂ ಚಿತ್ರ ಲಿಪ್ ಲಾಕ್ ಸೀನ್ ಸೋರಿಕೆಯಾಗಿತ್ತು. ಆಗಸ್ಟ್ 15 ರಂದು ಚಿತ್ರ ತೆರೆಗೆ ಬಂದಿದ್ದು ಒಳ್ಳೆಯ ರೆಸ್ಪಾಸ್ಸ್ ಪಡೆದುಕೊಳ್ಳುತ್ತಿದೆ. ಲೀಕ್ ನ ಹಿಂದೆ ಕೆಲ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗಿತ್ತು.

ಡರ್ಟಿ ಪಾಲಿಟಿಕ್ಸ್:  2015ರಲ್ಲಿ ತೆರಗೆ ಬಂದಿದ್ದ ಹಿಂದಿ ಚಿತ್ರ ಡರ್ಟಿ ಪಾಲಿಟಿಕ್ಸ್ ನ ಹಾಟ್ ದೃಶ್ಯಗಳು ಲೀಕ್ ಆಗಿದ್ದವು. ಓಂ ಪುರಿ ಮತ್ತು ಮನಟಿ ಮಲ್ಲಿಕಾ ಶರಾವತ್ ವಿವಿಧ ಭಂಗಿಯಲ್ಲಿ ಕಾಣಿಸಿಕೊಂಡಿದ್ದ ಸೀನ್ ವೈರಲ್ ಆಗಿತ್ತು

ಇನ್ನುಬಾಲಿವುಡ್ ಕಡೆಗೆ ತೆರಳಿದರೆ ನಿಮಗೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಜ್ಯೂಲಿ 2 ಸಿನಿಮಾದ ರಾಣಿ ಲಕ್ಷ್ಮಿಯ ಸೀನ್, ರಿಯಾ ಸೇನ್ ಮತ್ತು ನಿಶಾಂತ್ ಮಲ್ಕಾನಿ ನಡುವಿಸಿ ರಾಗಿಣಿ ಎಂ ಎಂಎಸ್ ರಿಟರ್ಸ್ ದ ದೃಶ್ಯ, ಅನಾರ್ಕಲಿ ಆಫ್ ಅಗ್ರಾ ಚಿತ್ರದಲ್ಲಿನ ಸ್ವರಾ ಭಾಸ್ಕರ್ ಹಾಟ್ ದೃಶ್ಯ, ರಾಗ್ ರಸಿಯಾ ಚಿತ್ರದ ಕೆಲ ದೃಶ್ಯಗಳು ಲೀಕ್ ಆಗಿದ್ದವು.

ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾ ಈಗ ಆನ್ ಲೈನ್ ನಲ್ಲಿ ಲೀಕ್ ಆಗಿದ್ದು ಸುದ್ದಿಯಾಗಿತ್ತು. ಫೇಸ್ ಬುಕ್ ಲೈವ್ ಮೂಲಕ ಮೊದಲ ಭಾಗ ಲೀಕ್ ಆಗಿದ್ದರೆ ನಂತರ ಭರ್ಜರಿ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಆದರೆ ಅದೇ ವೇಳೆಯಲ್ಲಿ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿತ್ತು.

Follow Us:
Download App:
  • android
  • ios