ಟಾಲಿವುಡ್ ನಟ ವಿಜಯ್ ದೇವರಕೊಂಡ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕನ್ನಡದ ಕುವರಿ ರಶ್ಮಿಕಾ ಹಾಗೂ ದೇವರಕೊಂಡ ಕಾಂಬಿನೇಶನ್ ಸಿಕ್ಕಾಪಟ್ಟೆ ವರ್ಕೌಟ್ ಆಗುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ಮೇಲೆ ರಶ್ಮಿಕಾ-ವಿಜಯ್ ಹೆಸರು ಜೋರಾಗಿ ಕೇಳಿ ಬರುತ್ತಿದೆ. 

ದಿಲ್ ಧಡಕ್ ಹೆಚ್ಚಿಸುವಂತಿದೆ ಧಕ್ ಧಕ್ ಹುಡುಗಿಯ ಫೋಟೋಗಳು

ಇದರ ಮಧ್ಯೆಯೇ ಇನ್ನೊಂದು ಸಪ್ರೈಸ್ ಎನಿಸುವಂತ ವಿಚಾರ ಹೊರ ಬಿದ್ದಿದೆ. ವಿಜಯ್ ದೇವರಕೊಂಡ ಮದುವೆಯಾಗುತ್ತಿದ್ದಾರೆ. ರಶ್ಮಿಕಾ-ವಿಜಯ್ ಮದುವೆನಾ? ಎಂದು ಅಚ್ಚರಿಪಡಬೇಡಿ. ಅವರು ಮದುವೆ ಆಗ್ತಾ ಇರೋದು. ರಶ್ಮಿಕಾ ಜೊತೆಗಲ್ಲ ಬದಲಾಗಿ ತೆಲುಗು ನಟಿ ಐಶ್ವರ್ಯಾ ರಾಜೇಶ್ ಜೊತೆ! 

 

‘ಸೂಜಿದಾರ’ ಪೋಣಿಸಿದ್ದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ!

ತಮ್ಮ ಮದುವೆ ವಿಚಾರ ಕೇಳಿ ಐಶ್ವರ್ಯಾ ಶಾಕ್ ಆಗಿದ್ದಾರೆ. ಅವರಿಗೆ ಗೊತ್ತಿಲ್ಲದೆಯೇ ಅವರ ಮದುವೆ ನಡೆಯುತ್ತಿದೆ! ಈ ಮದುವೆ ವಿಚಾರಕ್ಕೆ ಐಶ್ವರ್ಯಾ ಸ್ಪಷ್ಟನೆ ಕೊಡುತ್ತಾ, "ನನ್ನ ಬಗ್ಗೆ ಲವ್ ಸ್ಟೋರಿಯನ್ನು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಯಾರು ಆ ಹುಡುಗ ಎಂದು ತಿಳಿದುಕೊಳ್ಳುವ ಕುತೂಹಲ ನನಗೂ ಇದೆ. ತಿಳಿಸಿ. ದಯವಿಟ್ಟು ಇಂತಹ ಸುಳ್ ಸುದ್ದಿಗಳನ್ನು ಹರಡಬೇಡಿ. ಹಾಗೇನಾದ್ರೂ ಇದ್ರೆ ನಾನೇ ಮೊದಲು ನಿಮಗೆ ತಿಳಿಸುತ್ತೇನೆ. ನಾನು ಸಿಂಗಲ್ಲಾಗೆ ಖುಷಿಯಾಗಿದ್ದೇನೆ" ಎಂದು ಹೇಳಿದ್ದಾರೆ.