ತೆಲಗು ವಾಹಿನಿಯ ಖ್ಯಾತ 'ಮುತ್ಯಾಲಮೊಗ್ಗು' ಧಾರವಾಹಿಯ ನಟಿಯರಾದ ಅನುಷಾ ರೆಡ್ಡಿ ಹಾಗೂ ಭಾರ್ಗವಿ ಅನಂತಗಿರಿ ಅರಣ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್ ಮುಗಿಸಿ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ.

ಹೈದ್ರಾಬಾದ್ ಹಾಗೂ ಅನಂತಗಿರಿ ಹೋಗುವ ಮಾರ್ಗದಲ್ಲಿ ರಾತ್ರಿ ಕಾರು ಚಲಿಸುವಾಗ ಎದುರಾದ ಲಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾರು ಅಪಘಾತಕ್ಕೆ ಒಳಗಾಗಿದೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದು ಇಬ್ಬರಿಗೆ ಅಂದ್ರೆ ಭಾರ್ಗವಿ ಹಾಗೂ ಅನುಷಾ ರೆಡ್ಡಿ ತೀವ್ರ ಗಾಯಗೊಂಡು ಸ್ಥಳದಲ್ಲೇ ನಟಿಯರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರನ್ನು ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದ್ದಾರೆ. ಗಾಯಾಳುಗಳು ಹೊಸ್ಮನಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಯನಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ಶ್ರದ್ಧಾ ಶ್ರೀನಾಥ್ ಸಮಂತಾಗೆ ಬೈದಿದ್ದು ನಿಜಾನಾ?

ಭಾರ್ಗವಿ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅನುಷಾ ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾ ಮಾಡುವುದಾಗಿ ಹೊಸ ಪ್ರೊಡಕ್ಷನ್‌ಗೆ ಸಹಿ ಹಾಕಿದ್ದರು.