ಟ್ರೋಲಿಗರು ಯಾವ ದಿನ ಯಾವುದನ್ನು ತಮ್ಮ ಆಹಾರ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೋಲಿಗರನ್ನು ಕೆರಳಿಸಿದೆ. ಒಂದಕ್ಕಿಂತ ಒಂದು ಟ್ರೋಲ್ ಭಿನ್ನವಾಗಿದ್ದು ನಗೆ ಬುಗ್ಗೆಯನ್ನು ಹರಿಸುವುದು ಖಂಡಿತ... 

ಬಾಲಿವುಡ್ ಬೆಡಗಿ. ವಿರಾಟ್ ಪತ್ನಿ, ಅನುಷ್ಕಾ ಶರ್ಮಾರ  ‘ಸುಯಿ ಧಾಗಾ’ ಟ್ರೋಲ್ ಗಳನ್ನು ನೋಡಿಯೇ ಸವಿಯಬೇಕು. ಅನುಷ್ಕಾ ಶರ್ಮಾರನ್ನು ಸಖತ್ತಾಗಿಯೇ ಕೆಣಕಲಾಗಿದೆ. ತುಂಬಾ ದಿನದಿಂದ ಹಸಿದುಕೊಂಡಿದ್ದ ವ್ಯಕ್ತಿ ಏಕಾಏಕಿ ಆಹಾರ ಕಂಡಾಯ ಯಾವ ರೀತಿ ರಿಯಾಕ್ಷನ್ ನೀಡುತ್ತಾನೆ.. ನಿಮ್ಮ ಗೆಳತಿ ಮತ್ತು ನಿಮ್ಮ ಹೆಂಡಿತಿಯ ನಡುವಿನ ವ್ಯತ್ಯಾಸ ಏನು? ಹೀಗೆ ಹತ್ತು ಹಲವು ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ.

ವಿರಾಟ್ ಕೊಹ್ಲಿಯನ್ನು ಎಳೆದು ತಂದಿರುವ ಟ್ರೋಲಿಗರು ಇಂಗ್ಲೆಂಡ್ ವಿರುದ್ಧದ ಸೋಲನ್ನು ಸಿನಿಮಾ ಪೋಸ್ಟರ್ ನೊಂದಿಗೆ  ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ...ಹಾಗೆ ಸುಮ್ಮನೆ ನೋಡಿಕೊಂಡು ಬನ್ನಿ....