ನ್ಯೂಯಾರ್ಕ್ (ಮಾ. 01)  ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್  ಪುತ್ರಿ ಮೈಕೆಲಾ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ  ದಾಖಲಿಸಲಾಗಿದೆ.  ಈ ವಿಷಯವನ್ನು ಆಕೆಯ ಭಾವಿ ಪತಿ ಚಕ್ ಪಾಂಕೋ  ಅವರೇ ಖಚಿತ ಮಾಡಿದ್ದಾರೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಮೈಕೇಲಾ ವಿರುದ್ಧ ಶನಿವಾರ  ಪ್ರಕರಣ ದಾಖಲಾಗಿದೆ.   ಭದ್ರತೆಯ  ಮೇಲೆ ಜಾಮೀನು ಪಡೆದುಕೊಂಡಿದ್ದರೂ ಮೈಕೇಲಾ ಮುಂದಿನ 12 ಗಂಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

23 ವರ್ಷದ ಮೈಕೇಲಾ,  ಪೋರ್ನ್‌ಸ್ಟಾರ್  ಆಗಿ ತನ್ನ ವೃತ್ತಿ ಜೀವನ ಆರಂಭಿಸಲು ನಿರ್ಧರಿಸಿದ್ದರು. ಈ ಬಗ್ಗೆ ಆಕೆ ಮಾರ್ಧಯಮಗಳ ಮುಂದೆಯೂ ಹೇಳಿಕೊಂಡಿದ್ದರು. ಇದಾಗಿ ಎರಡು ವಾರಗಳಲ್ಲಿ ನಟಿಯ ಬಂಧನವಾಗಿದೆ.