Asianet Suvarna News Asianet Suvarna News

ಮರೆತರೆ ತಾನೆ SPB ನೆನಪು... ! ಗಾನ ಗಂಧರ್ವರಿಗೆ ಸಂಗೀತ ನಮನ

* ಡಾ. ಎಸ್. ಪಿ. ಬಾಲಸುಬ್ರಮಣ್ಯಂ  ಸ್ಮರಣೆ
* ಮರೆತರೆ ತಾನೆ ನೆನಪು ಮಾಡಿಕೊಳ್ಳಲು!
*  ಸುರೇಖಾ ಹೆಗಡೆಯವರ ಸಂಗೀತ್ ಸಮರ್ಪಣ್ ಟ್ರಸ್ಟ್ ನಿರ್ಮಿಸಿರುವ ಈ ವಿಡಿಯೋ ಆಲ್ಬಮ್ ಸಾಂಗ್
* ಗಾನ ಗಂಧರ್ವನಿಗೆ ಪ್ರತಿದಿ ದಿನ ಸಂಗೀತ ಪ್ರಿಯರ ನಮನ

Singer Surekha Hegde and Vinay Shimoga Musical Tribute to S.P.Balasubrahmanyam Album Song mah
Author
Bengaluru, First Published Sep 28, 2021, 4:31 PM IST

ಶಿವಮೊಗ್ಗ/ ಬೆಂಗಳೂರು(ಸೆ. 28)  ಕೊರೋನಾ(coronavirus) ಸೋಂಕು ಜಗತ್ತನ್ನೇ ಮಹಾ ಸಂಕಟಕ್ಕೆ ದೂಡಿದ್ದು ಸುಳ್ಳಲ್ಲ. ಅದೆಷ್ಟು ಜನರು ತಮ್ಮ ಪ್ರಾಣವನ್ನೇ ತೆತ್ತರು. ಕಲಾ ಕ್ಷೇತ್ರಕ್ಕೆ ಬರಸಿಡಿಲು ಎರಗಿದ್ದು ಗಾನ ಗಂಧರ್ವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ(S. P. Balasubrahmanyam) ಕೊರೋನಾ ಕಂಟಕಕ್ಕೆ ಬಲಿಯಾದಾಗ ಹಾಡು ಹಕ್ಕಿ ಅನಿರೀಕ್ಷಿತ ನಿರ್ಗಮನ ಅವರನ್ನು ಪ್ರೀತಿಸುವ ಲಕ್ಷಾಂತರ ಅಭಿಮಾನಿಗಳಿಗೆ ಅತೀವ ನೋವು ತಂದಿತ್ತು.
  
ಡಾ. SPB ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷ ಕಳೆದು ಹೋಗಿದೆ.  ಈ ಒಂದು ವರ್ಷದಲ್ಲಿ ಅವರು ಎಷ್ಟು ಬಾರಿ ನೆನಪಾದರು ಎಂದು ಕೇಳಿದರೆ ..ನಮ್ಮ ಉತ್ತರ …. ಅವರು ನಮಗೆ ನೆನಪಾಗಲೇ ಇಲ್ಲ!  ಏಕೆಂದರೆ ನಾವು ಮರೆತರಲ್ಲವೇ  ಅವರು ನೆನಪಾಗುವುದು.. ಅಲ್ಲವೇ.. ಎಂದು SPBಯವರನ್ನು  ಅತ್ಯಂತ  ಪ್ರೀತಿ-ಗೌರವದಿಂದ ಸುರೇಖಾ ಹೆಗಡೆ  ನೆನೆಯುತ್ತಾರೆ.

ಎಸ್‌ಪಿಬಿ ಪಾತ್ರದಲ್ಲಿ ಅಮಿತಾಬ್ ಬಚ್ಚನ್!

ಕೆಲವು ಪುಣ್ಯ ಜೀವಗಳು ಈ ಭೂಮಿಯ ಮೇಲೆ ಅವತರಿಸುವುದೇ ನಮಗೆ ಅಲೌಕಿಕ ಆನಂದದ ಅನುಭವ ನೀಡಲು…. ಈ ಗಂಧರ್ವ ಹಕ್ಕಿಯೂ ಇಲ್ಲಿಗೆ ಬಂದದ್ದು ಅದಕ್ಕಾಗಿಯೇ. ಪ್ರತಿ ಹಾಡುಗಾರರಿಗೂ, ಪ್ರತಿ ಕಲಾವಿದರಿಗೂ, ಕಲಾ ರಸಿಕರಿಗೂ ಪ್ರೇರಣೆ ಎಸ್‌ಪಿಬಿ.
    
ಕವಿ ವಿನಯ್ ಶಿವಮೊಗ್ಗ (Vinay Shimoga) ಅವರ ಭಾವನೆಗಳ ಸಾಲುಗಳಿಗೆ ಸಂಗೀತ ನೀಡಿ ಜೀವ ತುಂಬಿ  ಸುಶ್ರಾವ್ಯವಾಗಿ ಸುರೇಖಾ ಹೆಗಡೆ (Surekha Hegde) ಹಾಡಿದ್ದಾರೆ. ಶಿವಮೊಗ್ಗದ ಇನ್ನೊಬ್ಬ ಪ್ರತಿಭಾವಂತ ಕಲಾವಿದ ವಿಠ್ಠಲ್ ರಂಗಧೋಳ್ ಈ ಹಾಡಿಗೆ ವಾದ್ಯ ಸಂಗೀತದ ಮೆರಗು ನೀಡಿದ್ದಾರೆ …. 

ಈ ವಸ್ತುಗಳೆಂದರೆ ಎಸ್‌ ಪಿಬಿಗೆ ಪಂಚಪ್ರಾಣ
    
ಇದು ಶ್ರದ್ಧಾಂಜಲಿಯಲ್ಲ.. ಆ ಮಹಾನ್ ಗಾಯಕನಿಗೆ ನಮ್ಮ ಎಂದೂ ಮಾಸದ  ಪ್ರೀತಿಯ ದ್ಯೋತಕ….ನಾಳೆ ಈ ನಮ್ಮ ಪ್ರಯತ್ನ  “ಮರೆಯದ ನೆನಪನು ಎದೆಯಲ್ಲಿ ತಂದೆ ನೀನು “  ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಎದೆ ತುಂಬಿ ಹಾಡುವೆನು ಸ್ಪರ್ಧೆಯಲಿ ಭಾಗವಹಿಸಿ ಅದರಲ್ಲಿ ವಿಜೇತಳಾಗಿ ಈಗ ನಾಡಿನ ಪ್ರಮುಖ ಸುಗಮ ಸಂಗೀತ ಗಾಯಕಿಯಾಗಿ ಹೆಸರು ಮಾಡಿರುವ ಶಿವಮೊಗ್ಗದ  ಸುರೇಖಾ ಹೆಗಡೆಯವರ ಸಂಗೀತ್ ಸಮರ್ಪಣ್ ಟ್ರಸ್ಟ್ ನಿರ್ಮಿಸಿರುವ ಈ ವಿಡಿಯೋ ಆಲ್ಬಮ್ ಸಾಂಗ್ ಒಂದು ಗೌರವ ಸಮರ್ಪಣೆ.

ಭಾರತದ ಬಹುತೇಕ ಭಾಷೆಗಳಲ್ಲಿ ಎಸ್‌ಪಿಬಿ ತಮ್ಮ ದನಿ ನೀಡಿದ್ದಾರೆ. ಮಹಾನ್ ಗಾಯಕನಿಗೆ ಸ್ವರ ನಮನಗಳು ಸಲ್ಲಿಕೆಯಾಗುತ್ತಲೇ ಇರುತ್ತವೆ.  ನಲವತ್ತು ಸಾವಿರಕ್ಕೂ ಅಧಿಕ ಗೀತೆಗಳನ್ನು ಎಸ್‌ಪಿಬಿ ಸಂಗೀತ ಪ್ರಿಯರಿಗೆ ನೀಡಿದ್ದಾರೆ. ದೊಡ್ಡದೊಂದು ಚೇತನದ ಸ್ಮರಣೆ ಪ್ರತಿದಿನದ ಕಾಯಕ. 

ಹಂಸಲೇಖ ಹೇಳಿದ ಎಸ್‌ಪಿಬಿ ಹನ್ನೆರಡು ಕತೆಗಳು!

ಗಂಧರ್ವರಿಗೆ ಸಾವು ಎಲ್ಲಿ? ಪ್ರತಿ ಹಾಡಿನಲ್ಲೂ ಅವರು ನಮ್ಮ ಮನಸ್ಸಿನ ತೊಟ್ಚಿಲಿನಲ್ಲಿ ಹುಟ್ಟುತ್ತಾರೆ…. ಪ್ರತಿ ಗಾನದಲ್ಲೂ ನಮ್ಮ ಹೃದಯಗಳಲ್ಲಿ ಬೆಳೆಯುತ್ತಾರೆ.  ಶರೀರವಿಲ್ಲದಿರಬಹುದು….. ಶಾರೀರಕೆ ಕೊನೆ ಎಲ್ಲಿ?!?  SPB ಸಂಗೀತವೆಂಬ ಗಂಧರ್ವ ವಿದ್ಯೆಯ ಆತ್ಮ … ಅವರಿಗೆ ಸಾವು ಇಲ್ಲವೇ ಇಲ್ಲ ..ಸದಾ ಚಿರಂಜೀವಿ ಎಂದು ಗಾಯಕರು ಸ್ಮರಿಸಿಕೊಳ್ಳುತ್ತಾರೆ.

 

Follow Us:
Download App:
  • android
  • ios