ವರ್ಷಕ್ಕೂ ಮೊದಲೇ ಸಮಂತಾ-ನಾಗಚೈತನ್ಯ ಬ್ರೇಕಪ್?

Shiva Nirvana second directorial Naga Chaitanya, Samantha New Movie Launch Details
Highlights

ಟಾಲಿವುಡ್ ಲೆಟೆಸ್ಟ್ ಕ್ಯೂಟ್ ಕಪಲ್ ಅಂದ್ರೆ ಅದು ನಾಗಚೈತನ್ಯ ಮತ್ತು ನಟಿ ಸಮಂತಾ. ಮೊದಲ ಚಿತ್ರದಲ್ಲೆ ಆರಳಿದ ಪ್ರೀತಿ 7 ವರ್ಷಗಳು ಪ್ರೀತಿಸಿದ ಈ ಜೋಡಿ ವಿವಾಹವಾಗಿ ಇನ್ನೂ ಒಂದು ವರ್ಷ ತುಂಬಿಲ್ಲ ಆಗಲೆ ಅಭಿಮಾನಿಗಳಿಗೆ ಈ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈ ಜೋಡಿ ಮಧ್ಯೆ ಬಿರುಗಾಳಿ ಶುರುವಾಗಿದ್ದಾದ್ರೂ ಹೇಗೆ?  ಅಕ್ಕಿ ನೇನೆ ಸೋಸೆಗೂ ಅಕ್ಕಿನೇನು ಪುತ್ರನಿಗೂ ಆಗಿರೋ ಅಂತಹ ವೈಮನಸಾದ್ರು ಏನೂ? ನಾಗಚೈತನ್ಯ ಸಮಂತಾ ಜೀವನದಲ್ಲಿ ಮೂಡಿರೋ ಆ ಬಿರುಕಿಗೆ ಕಾರಣ ಆದ್ರೂ ಏನು ?

ಅಯ್ಯೋ ಈ ಸುದ್ದಿ ಕೇಳಿದ್ರೇನೆ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ಆಗುತ್ತೆ.  ಅಕ್ಟೋಬರ್​ 7, 2017 ರಲ್ಲಿ ಈ ಪ್ರೇಮ ಪಕ್ಷಿಗಳು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 7 ವರ್ಷಗಳು ಪ್ರೀತಿಯಲ್ಲಿದ್ದ ಈ ಜೋಡಿಗೆ ಸಿನಿ ಕೆರಿಯರ್​ನಲ್ಲಿ ಸೋಲು ಗೆಲುವು ಎರಡೂ ಸಿಕ್ಕಿತ್ತು.  ಸಮಂತಾ ಟಾಲಿವುಡ್​- ಕಾಲಿವುಡ್‌ ನಲ್ಲಿಸೂರ್ಯ ,ವಿಜಯ್, ರಾಮ್ ಚರಣ್ ಮಹೇಶ್ ಬಾಬು ಪವನ್ ಕಲ್ಯಾಣ್, ಎನ್​ಟಿಆರ್ ರಾಂ ಚರಣ್ ಅಲ್ಲೂ ಅರ್ಜುನ್ ಹೀಗೆ  ದಕ್ಷಿಣದ ಎಲ್ಲ ಯಂಗ್ ಸ್ಟಾರ್​ಗಳ ಜೊತೆ ನಟಿಸಿದ ಸ್ಟಾರ್ ನಟಿ ಎಂಬ ಹಿರಿಮೆಗೂ ಪಾತ್ರವಾಗಿದ್ದವರು. ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದ ‘ಈಗ’ ಚಿತ್ರದಲ್ಲೂ ಸಮಂತಾ ಗಮನ ಸೆಳೆದಿದ್ದರು.

ನಾಗಚೈತನ್ಯ ನಟಿಸಿದ ಹಲವು ಸಿನಿಮಾಗಳು ಅದ್ಯಾಕೊ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಈ ನಡುವೆ ಸಮಂತಾ ನಟಿಸಿದ ರಂಗಸ್ಥಳಂ ಮತ್ತು ಮಹಾನಟಿ ಎರಡೂ ಸಿನಿಮಾಗಳು ಭರ್ಜರಿ ಹಿಟ್ಟಾಗಿದ್ದವು.  ಇತ್ತೀಚೆಗಷ್ಟೆ ಸಮಂತಾ-ನಾಗಚೈತನ್ಯ ಮದುವೆ ವೀಡಿಯೋನೂ ರಿಲೀಸ್ ಆಗಿತ್ತು. ವಿದೇಶದಲ್ಲಿ ಹನಿಮೂನ್ ಕೂಡ ಮಾಡಿಕೊಂಡು ಬಂದಿದ್ದರು. ಜೋಡಿ ಅಂದ್ರೆ ಹೀಗಿರಬೇಕಿದ್ದರೆ ಅಭಿಮಾನಿಗಳಿಗೊಂದು ಶಾಕಿಂಗ್ ಸುದ್ದಿ ಬಂದೆರಗಿದೆ.

ಬ್ರೇಕಪ್ ಆಗ್ತಿರೋದು ಸಿನಿಮಾದಲ್ಲಿ!
ಹೌದು.. ಇಷ್ಟು ಮುದ್ದಾದ ಜೋಡಿ ಮೇಲೆ ಅದ್ಯಾರ ದೃಷ್ಟಿ ಬಿತ್ತೂ? ಇಬ್ಬರೂ ಬೇರೆಯಾದ್ರಾ? ಅಂತ ಎಲ್ಲರೂ ಕೇಳ್ತಿದ್ದಾರೆ. ಟಾಲಿವುಡ್​ನಲ್ಲಿ  ಬಿಗ್ ನ್ಯೂಸ್ ಆಗಿರೋ ಈ ಸುದ್ದಿಯ ಹೆಡ್​​ಲೈನೇ ಹೀಗಿವೆ ಅಲ್ಲಿ. ಅಂದಹಾಗೆ ಈ ಜೋಡಿ ಬೇರೆಯಾಗುತ್ತಿಲ್ಲ. ಬೇರೆಯಾಗೋಕೆ ನಿಜಜೀವನದಲ್ಲಿ ಕಾರಣವೂ ಇಲ್ಲ. ಸುಂದರವಾಗಿ ಸಂಸಾರ ಮಾಡ್ತಿದ್ದಾರೆ. ಬೇರೆಯಾಗುತ್ತಾ ಇರೋದು ಸಿನಿಮಾದಲ್ಲಷ್ಟೆ.

‘ನಿನ್ನು ಕೋರಿ’ ಚಿತ್ರದ ನಿರ್ದೇಶಕ ಶಿವ ನಿರ್ವಾಣ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಗಚೈತನ್ಯ ಹಾಗೂ ಸಮಂತಾ ಆಕ್ಟ್ ಮಾಡ್ತಿದ್ದಾರೆ.  ಸಿನಿಮಾದಲ್ಲಿ ಸಿಕ್ಕ ಪಟ್ಟೆ ಫೈಟ್ ಮಾಡುತ್ತಾರಂತೆ. ಇದನ್ನೇ ಇಟ್ಟುಕೊಂಡು ಬ್ರೇಕ್ ಅಪ್ ಎಂಬ ಸುದ್ದಿ ಹರಿದಾಡುತ್ತಾ ಇದೆ. ಮತ್ತೊಮ್ಮೆ ಹೇಳ್ತಾ ಇದ್ದೀವಿ.. ಇದು ಸಿನಿಮಾದಲ್ಲಷ್ಟೆ.

loader