ಲಂಡನ್: ಬ್ರಿಟನ್’ನ ವಾರ್ಷಿಕ ಮತದಾನದಲ್ಲಿ  ಬಾಲಿವುಡ್ ನಟ ಶಾಹೀದ್ ಕಪೂರ್ ಅವರು `ಏಷ್ಯಾದ ಅತ್ಯಂತ ಸೆಕ್ಸಿ ವ್ಯಕ್ತಿ'ಯಾಗಿ ಆಯ್ಕೆಯಾಗಿದ್ದಾರೆ.

ಅಲ್ಲದೆ, ಲಂಡನ್ ಮೂಲದ ವಾರ ಪತ್ರಿಕೆ `ಈಸ್ಟರ್ನ್ ಹೈ' ಪ್ರತಿವರ್ಷ ನಡೆಸುವ `ಏಷ್ಯಾದ 50 ಸೆಕ್ಸಿ ವ್ಯಕ್ತಿಗಳು' ಎಂಬ ಚುನಾವಣೆಯಲ್ಲಿ ಬಾಲಿವುಡ್  ಮತ್ತೋರ್ವ ನಟ ಹೃತಿಕ್ ರೋಷನ್ ಅವರು ಸತತ ಮೂರನೇ ವರ್ಷವೂ 2ನೇ ಸೆಕ್ಸಿ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.

ಇದರಿಂದಾಗಿ ಕಳೆದ ವರ್ಷ ನಂಬರ್-1 ಸೆಕ್ಸಿ ಮ್ಯಾನ್ ಆಗಿದ್ದ ಬ್ರಿಟಿಷ್-ಪಾಕಿಸ್ತಾನ ಗಾಯಕ ಝೇನ್ ಮಲಿಕ್ ಅವರು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.