ಬಿ-ಟೌನ್ ಹೊಮ್ಲಿ ಆ್ಯಂಡ್ ಲವ್ಲಿ ಮ್ಯಾನ್ ಶಾಹಿದ್ ಕಪೂರ್ 'ಕಬೀರ್ ಸಿಂಗ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನೋಡಲು ಸಿಂಪಲ್ ಮೇಕಪ್ ಆ್ಯಂಡ್ ಕಾಸ್ಟೂಮ್ ನಲ್ಲಿ ಕಾಣಿಸಿಕೊಳ್ಳುವ ಶಾಹಿದ್ ಹೀಗ್ಯಾಕೆ ಮಾಡುತ್ತಾರೆ ಎಂದು ಎಲ್ಲರ ಪ್ರಶ್ನೆ.

ವಿಜಯ್ ದೇವರಕೊಂಡರಂತೆ ಕಾಣಿಸ್ತಾರಾ ಶಾಹಿದ್ ಕಪೂರ್?

 

ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ ಪ್ಯಾಕ್‌ಗಟ್ಟಲೇ ಸಿಗರೇಟ್ ಸೇದುತ್ತಾರೆ. ಧೂಮಪಾನವೆಂದರೆ ದೂರ ಉಳಿಯುವ ಶಾಹಿದ್‌ಗೆ ಇದೊಂದು ಚಾಲೆಂಜಿಂಗ್ ಪಾತ್ರ. ದಿನದಲ್ಲಿ 6-8 ತಾಸು ಸಿಗರೇಟ್ ಸೇದುವುದರಿಂದ ಇದು ಧರಿಸಿರುವ ಉಡುಪು ದೇಹ ಎಲ್ಲದರಲ್ಲೂ ಸಿಗರೇಟ್ ವಾಸನೆ ಇರುತ್ತದೆ. ಆ ಕಾರಣದಿಂದ ಶೂಟಿಂಗ್ ನಂತರ 2 ತಾಸು ಸ್ನಾನ ಮಾಡುತ್ತಾರೆ. ಮಕ್ಕಳೊಂದಿಗೆ ಪೋಷಕರು ಹೆಚ್ಚು ಸಮಯ ಕಳೆಯಬೇಕು ಎಂದು ಪಾಲಿಸುವ ಶಾಹಿದ್ ಮಕ್ಕಳಿಗೆ ಸಿಗರೇಟ್ ವಾಸನೆ ತಾಗಬಾರದೆಂದು ದಿನಕ್ಕೆ 2 ತಾಸು ಸ್ನಾನ ಮಾಡುತ್ತಾರಂತೆ.

ಕೆಲ ದಿನಗಳ ಹಿಂದೆ ರಿಲೀಸ್ ಆದ ಕಬೀರ್ ಸಿಂಗ್ ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 2017 ರಲ್ಲಿ ಟಾಲಿವುಡ್ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ನೋಡುವಂತೆ ಮಾಡಿದ ಸಿನಿಮಾ ಅರ್ಜುನ್ ರೆಡ್ಡಿ ರಿಮೇಕ್ ಚಿತ್ರವೇ ಕಬೀರ್ ಸಿಂಗ್.