ಮುಂಬಯಿ(ಅ.14): ಐಶ್ವರ್ಯ ರೈ ಹಾಗೂ ರಣಬೀರ್‌ ಕಪೂರ್‌ ಅಭಿನಯದ ಯೇ ದಿಲ್‌ ಹೇ ಮುಷ್ಕಿಲ್‌ ಚಿತ್ರದ ರೊಮ್ಯಾಂಟಿಕ್ ಸೀನ್‌ಗಳು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಟ್ರೈಲರ್‌ನಲ್ಲಿನ ಐಶ್‌-ರಣಬೀರ್‌ ನಡುವಿನ ಸೀನ್‌ಗಳು ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.
ಈ ವಿಷಯದಿಂದ ಐಶ್‌ ಫ್ಯಾಮಿಲಿಯಲ್ಲೂ ಮನಸ್ತಾಪವಿತ್ತು. ಇದೀಗ ಹೊಸ ವಿಷ್ಯ ಏನೆಂದರೆ ಐಶ್ವರ್ಯ ರೈ ಹಾಗು ರಣಬೀರ್ ಕಪೂರ್ ನಡುವಿನ ರೊಮ್ಯಾನ್ಸ್  ಸೀನ್ ಗಳಿಗೆ ಸೆನ್ಸಾರ್‌ ಬೋರ್ಡ್‌ನಲ್ಲಿ ಕತ್ತರಿ ಹಾಕಲಾಗಿದೆಯಂತೆ. ಹಾಗಾಗಿ ಸಿನಿಮಾದಲ್ಲಿ ಐಶ್‌-ರಣಬೀರ್‌ ನಡುವಿನ ರೊಮ್ಯಾನ್ಸ್‌ ಕಡಿಮೆ ಕಾಣಸಿಗಲಿದೆ. ಈ ಬಗ್ಗೆ ನಿರ್ದೇಶಕ ಕರಣ್ ಜೋಹರ್ ಬೇಸರ ವ್ಯಕ್ತಪಡಿಸಿದ್ದಾರೆ.