ಬೆಂಗಳೂರು(ಜ. 27)  ಮೊದಲಿಗೆ ಪದ್ಮ ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆ ಸಲ್ಲಿಸೋಣ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಪದ್ಮ ಪುರಸ್ಕಾರ ದೊರೆಯದಿರುವುದಕ್ಕೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ಶಿವಣ್ಣ ಅಭಿಮಾನಿಗಳು ಮತ್ತಷ್ಟು ಬೇಸರ ಮಾಡಿಕೊಳ್ಳಲು ಕಾರಣವಾಗಿದೆ.

ಕಂಗನಾ ರಾವತ್ ಗೆ ಪದ್ಮಶ್ರೀ ಗೌರವ.. ಇರಲಿ ನಮ್ಮ ದೇಶದ ನಟಿಗೆ ಸಿಕ್ಕಿರುವ ಪ್ರಶಸ್ತಿಗೆ ಕಂಗನಾ ರಾವತ್ ಅವರಿಗೆ ಗೌರಿವಿಸೋಣ. ಕಂಗನಾ ರಾವತ್ ಅವರು ಹುಟ್ಟಿದ್ದು 23-3-1987 ಅಂದರೆ ಈಗ ಕಂಗನಾ ಅವರಿಗೆ 32 ವರ್ಷ. ಅದೇ ನಮ್ಮ ಶಿವಣ್ಣ ಚಿತ್ರರಂಗ ಪ್ರವೇಶಿಸಿದ್ದು 1986. ಶಿವಣ್ಣನಿಗೆ ಈಗ 57 ವರ್ಷ . ಆದರೂ ಶಿವಣ್ಣನಿಗೆ ಇದುವರೆಗೂ ಯಾವುದೇ ರಾಷ್ಟ್ರ ಪ್ರಶಸ್ತಿ ದೊರೆತಿಲ್ಲ... ಕನ್ನಡಿಗರು ಇಂತಹ ವಿಚಾರದಲ್ಲಿ ಪಕ್ಷಭೇದ ಮರೆಯಬೇಕು.. ಸಿನಿಮಾಗಳ ವಿಚಾರದಲ್ಲಿ ಬೇರೆ ಭಾಷೆಯ ನಟರು ಭಾರತ ರತ್ನ ಸೇರಿ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪ್ರತಿವರ್ಷ ಪಡೆಯುತ್ತಲೇ ಇದ್ದಾರೆ. ಆದರೆ ಕನ್ನಡ ಚಿತ್ರರಂಗ ಮಾತ್ರ ರಾಷ್ಟ್ರ ಪ್ರಶಸ್ತಿಗಳಿಂದ ವಂಚಿತವಾಗುತ್ತಲೇ ಇದೆ.... ನೆನಪಿಡಿ ಇದೆ ಶಿವರಾಜಕುಮಾರ್ ಮಾಡಿರುವ ಕಾದಂಬರಿ ಆಧಾರಿತ ಚಿತ್ರಗಳನ್ನು (ಜನುಮದ ಜೋಡಿ, ಹಗಲುವೇಷ, ಚಿಗುರಿದ ಕನಸು, ದೊರೆ, ಮನ ಮೆಚ್ಚಿದ ಹುಡುಗಿ, ಭೂಮಿ ತಾಯಿಯ ಚೊಚ್ಚಲ ಮಗ,ಮುಂತಾದವು ) ಇದುವರೆಗೂ ಯಾವ ನಟನೂ (ರಾಜಕುಮಾರ್ ಹೊರತುಪಡಿಸಿ ) ಮಾಡಿಲ್ಲ.. ಈ ವಿಷಯವಾಗಿ ಕನ್ನಡದ ಎಲ್ಲಾ ನಟರ ಅಭಿಮಾನಿಗಳು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಿದೆ. ತಪ್ಪಿದ್ದರೆ ಕ್ಷಮಿಸಿ ಕನ್ನಡಿಗರೇ..

ಶಿವಣ್ಣ ಅಭಿಮಾನಿಗಳ ಪೇಜ್ ನಲ್ಲಿ ಹೀಗೆ ಬರೆದುಕೊಂಡು ನೋವು ಹೊರಹಾಕಲಾಗಿದೆ. ಶಿವಣ್ಣನವರನ್ನು ಮೀರಿಸುವ ಶಕ್ತಿ ಕನ್ನಡದಲ್ಲಿ ಬೇರೆ ಯಾರಿಗೂ ಇಲ್ಲ. ಕಾಡಿ ಬೇಡಿ ಹೋರಾಟ ಮಾಡಿ ಬರುವ ಪ್ರಶಸ್ತಿಗಳು ಬೇಕಾಗಿಲ್ಲ. ಏಕೆಂದರೆ ಈಗಾಗಲೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ನಮ್ಮ ಶಿವಣ್ಣ. ಇದಕ್ಕಿಂತ ಆಸ್ಕರ್ ಪ್ರಶಸ್ತಿ ಬೇಕೆ?" ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗರು.

ಸಿಕ್ಕ ಪದ್ಮ ಪ್ರಶಸ್ತಿಯನ್ನು ಒಂದು ರೂ. ಡಾಕ್ಟರ್ ಏನು ಮಾಡಿದ್ರು?

ಓಂ ಸಿನಿಮಾ ಮಾಡಿದಾಗಲೇ ಅವರ ಗತ್ತು ಏನು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದಕ್ಕಿಂತ ಅವಾರ್ಡ್ ಬೇಕೆ? ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ.

ನಮ್ಮ ಹೀರೋಗಳು ದುಡ್ಡಿನ ಹಿಂದೆ ಬಿದ್ದಿದ್ದಾರೆ ಅವರಲ್ಲಿ ಒಗ್ಗಟ್ಟಿಲ್ಲ. ಅರ್ಹತೆ ಇದ್ದ ಎಲ್ಲರಿಗೂ ಪ್ರಶಸ್ತಿ ಸಿಗಲ್ಲ ಬಿಡಿ. ಪೇಜಾವರ ಶ್ರೀಗೆ ಪದ್ಮ ವಿಭೂಷಣ, ಸಿದ್ದಗಂಗಾ ಶ್ರೀಗಳಿಗೆ ಪದ್ಮ ಭೂಷಣ. ಎಲ್ಲಿಂದ ಎಲ್ಲಿಗೆ ಹೋಲಿಕೆ. ಸ್ವಾಮಿಗಳು ರಾಜಕೀಯ ಮಾಡ್ಕೊಂಡು ಇದ್ರೆ ಪ್ರಶಸ್ತಿ ಬರೋದು. ಅನಂತನಾಗ್ ,ವಿಷ್ಣುವರ್ಧನ್ ಅವರಿಗೆ ಕೊಡಲಿಲ್ಲ. ಸೈಫ್ ಅಲಿ ಖಾನ್, ಕಾಜಲ್, ತಮಿಳು ನಟ ಕಾಮಿಡಿಯನ್ ವಿವೇಕ್‌ಗೂ ಸಹ ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೆಗ್ಲೆಕ್ಟ್ ಮಾಡುವುದೇ ಉತ್ತಮ ಎಂದು ಮತ್ತೊಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಶಿವರಾಜ್ ಕುಮಾರ್ ಅವರಿಗೆ ಮುಂದಿನ ಸಾಲಿನಲ್ಲಾದರೂ ಪದ್ಮ ಪ್ರಶಸ್ತಿ ಗೌರವ ದೊರೆಯಲಿ ಎಂಬುದೇ ಎಲ್ಲ ಕನ್ನಡಿಗರ ಆಶಯ.