ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್‌ಗೇ ಆಪ್ತನಿಂದಲೇ ಕೋಟಿ ಕೋಟಿ ರೂ. ಪಂಗನಾಮ?

Sandalwood  Star Darshan Cheated By Manger
Highlights

  • ಚ್ಯಾಲೆಂಜಿಂಗ್ ಸ್ಟಾರ್ ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್
  • 10 ಕೋಟಿ ರೂ. ತೆಗೆದುಕೊಂಡು, ಊರಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದರ್ಶನ್ ಗೆ ಆಪ್ತನೇ  ಕೋಟ್ಯಾಂತರ ರೂ.  ಪಂಗನಾಮ ಹಾಕಿದ ವಿಷಯ ಬೆಳಕಿಗೆ ಬಂದಿದೆ.

ದರ್ಶನ್‌ಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ್ , 10 ಕೋಟಿ ರೂ. ಪಡೆದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

10 ಕೋಟಿ ರೂ. ತೆಗೆದುಕೊಂಡು, ಊರಿಗೆ ಹೋಗಿ ಬರೋದಾಗಿ ಹೇಳಿ ಮಲ್ಲಿಕಾರ್ಜುನ್, 10ದಿನ ಕಳೆದರೂ ದರ್ಶನ್ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ತಿಳಿದು ಬಂದಿದೆ.

ದರ್ಶನ್ ಹೆಸರು ದುರುಪಯೋಗಪಡಿಸಿಕೊಂಡ ಮಲ್ಲಿಕಾರ್ಜುನ್, ದರ್ಶನ್ ಹೆಸ್ರು ಹೇಳಿಕೊಂಡು ಸಾಲ ಮಾಡಿದ್ದ ಎನ್ನಲಾಗಿದೆ.  ದರ್ಶನ್ ಎಲ್ಲಾ ವಹಿವಾಟುಗಳನ್ನ ನೋಡಿಕೊಳ್ತಿದ್ದ ಮಲ್ಲಿ, ದರ್ಶನ್ ಮ್ಯಾನೆಜರ್ ಅನ್ನೋ ಕಾರಣಕ್ಕೆ ಸಾಲ ಸಿಗ್ತಿತ್ತು. ಘಟಾನುಘಟಿಗಳ ಬಳಿ ಕೋಟಿ , ಕೋಟಿ ಸಾಲ ಮಾಡಿರೋ ಮಲ್ಲಿಕಾರ್ಜುನ್  ತಲೆ‌ ಮರಿಸಿಕೊಂಡಿದ್ದಾನೆ.

ಬಾಗಲಕೋಟೆ ಮೂಲದ ಮಲ್ಲಿ, ದರ್ಶನ್ ನಂಬಿಕಸ್ಥ ಮ್ಯಾನೇಜರ್ ಆಗಿದ್ದ ಎಂದು ದರ್ಶನ್ ಆಪ್ತ ವಲಯದಿಂದ ತಿಳಿದುಬಂದಿದೆ.

loader