ಬಾಲಿವುಡ್ ಬ್ಯಾಡ್‌ ಬಾಯ್ ಸಲ್ಲುಗೆ ಮೂಗಿನ ತುದಿಯಲ್ಲೇ ಕೋಪ. ಬೇಗನೇ ಕೋಪಿಸಿಕೊಂಡು ಬಿಡುತ್ತಾರೆ. ಯಾಕಂದ್ರೆ ಇಂತಹ ಹಲವಾರು ಘಟನೆಗಳು ಮಾಧ್ಯಮಗಳ ಬೆಳಕಿಗೆ ಬಂದಿದೆ.

ಜುಹುಯಿಂದ ಕಾನ್‌ದಿವಾಲಿಗೆ ಮುಂಬೈ ಮೂಲಕ ಪ್ರಯಾಣ ಮಾಡುತ್ತಿದ್ದ ಪತ್ರಕರ್ತ ಅಶೋಕ್ ಶ್ಯಾಮ್‌ಲಾಲ್ ಪಾಂಡೆ ರಸ್ತೆಯಲ್ಲಿ ಸಲ್ಮಾನ್‌ ಖಾನ್ ಸೈಕಲಿಂಗ್ ಮಾಡುತ್ತಿದ್ದುದ್ದನ್ನು ನೋಡಿದ್ದಾರೆ. ಆ ಕ್ಷಣವೇ ಸಲ್ಲು ಬಾಡಿಗಾಡ್ ಬಳಿ ವಿಡಿಯೋ ಸೆರೆ ಹಿಡಿಯುವುದಾಗಿ ಹೇಳಿದ್ದಾರೆ. ಆನಂತರ ಸೆರೆ ಹಿಡಿಯುವಾಗ ಬಾಡಿಗಾರ್ಡ್‌ವೊಬ್ಬ ಫೋನ್ ಕಿತ್ತುಕೊಂಡಿದ್ದಾರೆ.

ಗರಂ ಆದ ಪತ್ರಕರ್ತ ನಾನು ಮಾಧ್ಯಮದವನು ಎಂದರೂ ಸಲ್ಲು 'i dont care'ಎಂದು ಹೇಳಿದ್ದಾರೆ. ಪೊಲೀಸ್ ಗೆ ಕರೆ ಮಾಡಲು ಮುಂದಾದಾಗ ಸಲ್ಲು ಫೋನ್ ಹಿಂತಿರುಗಿಸಿ ಹೋಗಿದ್ದಾರೆ.

ಬಿ-ಟೌನ್‌ನಲ್ಲಿ ವಿಲನ್ ಆಗ್ತಾರಾ ಕಿಚ್ಚ ಸುದೀಪ್?

ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಬಾಡಿಗಾರ್ಡ್‌ ಪತ್ರಕರ್ತನ ವಿರುದ್ಧ ಮರು ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ.