ತಮ್ಮ ಕುಟುಂಬ ದೊಡ್ಡ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲಿದೆ ಎಂದು ಬಾಲಿವುಡ್ ನಟ ಸೈಫ್ ಅಲಿಖಾನ್ ತಿಳಿಸಿದ್ದಾರೆ. ಈಗಿರುವ ಮನೆಯ ಮುಂಭಾಗದಲ್ಲಿರುವ ಮನೆಗೆ ನಟ ಪತ್ನಿ ಕರೀನಾ ಮತ್ತು ಪುಟ್ಟ ತೈಮೂರ್ ಜೊತೆ ವಾಸ ಬದಲಾಯಿಸಲಿದ್ದಾರೆ.

ಲಾಕ್‌ಡೌನ್ ಸಮಯವನ್ನು ಸುಪಯೋಗಪಡಿಸಿಕೊಂಡ ನಟ ಹೊಸ ಮನೆಯ ರಿನೋವೇಷನ್ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ.  ಹಾಗೆಯೇ ಹಳೆಯದನ್ನು ಬಾಡಿಗೆಗೆ ನೀಡಲು ನಿರ್ಧರಿಸಿದ್ದಾರೆ.

ಮಿನಿ ನವಾಬ್‌ ತೈಮೂರ್‌ ನ್ಯಾನಿ ಸಂಬಳ ಕೇಳಿದರೆ ದಂಗಾಗ್ತೀರಿ!

ಇತ್ತೀಚೆಗೆ ತಮ್ಮ ಮನೆಯ ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸೈಫ್‌ ಕಾರಣ ಏನೆಂಬುದನ್ನು ರಿವೀಲ್ ಮಾಡಿದ್ದಾರೆ. ನಮ್ಮ ಮನೆ ರಿನೋವೇಷನ್ ಮಾಡಲಾಗ್ತಿದೆ. ನಾನು ಈ ಸಮಯವನ್ನು ನನ್ನ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಸಹೋದರಿ ಸೋಹಾ ಹಾಗೂ ಆಕೆಯ ಪತಿ ಕುನಾಲ್ ಬರುತ್ತಾರೆ.

ಸಾರಾ ಮತ್ತು ಇಬ್ರಾಹಿಂ ಕೂಡಾ ಬರುತ್ತಿರುತ್ತಾರೆ. ನನ್ನ ಇನ್ನೊಬ್ಬ ಸಹೋದರಿ ಸಬಾಳು ಮುಂಬೈಗೆ ಶಿಫ್ಟ್ ಆಗಿದ್ದಾಳೆ. ತಾಯಿ ಶರ್ಮಿಳಾ ಮಾತ್ರ ದೆಹಲಿಯಲ್ಲಿದ್ದಾರೆ ಎಂದಿದ್ದಾರೆ. ಇತ್ತೀಚೆಗಷ್ಟೇ ನಟಿ ಸಾರಾ ಚಾಲಕನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.