Asianet Suvarna News Asianet Suvarna News

ಹೆಸರಾಂತ ಕೂಚಿಪುಡಿ ನರ್ತಕಿ ಪದ್ಮಶ್ರೀ ಶೋಭಾ ನಾಯ್ಡು ಇನ್ನಿಲ್ಲ!

ಅನಾರೋಗ್ಯದಿಂದ ಬಳಲುತ್ತಿದ್ದ ಹೆಸರಾಂತ ಕೂಚಿಪುಡಿ ನರ್ತಕಿ ಪದ್ಮಶ್ರೀ ಶೋಭಾ ನಾಯ್ಡು ನಿಧನರಾಗಿದ್ದಾರೆ.

renowned Kuchipudi dancer padma Shri Shobha Naidu dies at 58 pod
Author
Bangalore, First Published Oct 14, 2020, 9:22 AM IST
  • Facebook
  • Twitter
  • Whatsapp

ಹೈದರಾಬಾದ್(ಆ.14):  ಅನಾರೋಗ್ಯದಿಂದ ಬಳಲುತ್ತಿದ್ದ ಹೆಸರಾಂತ ಕೂಚಿಪುಡಿ ನರ್ತಕಿ ಪದ್ಮಶ್ರೀ ಶೋಭಾ ನಾಯ್ಡು ನಿಧನರಾಗಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಶೋಭಾ ನಾಯ್ಡು ಸಣ್ಣ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಂದಿನಿಂದಲೂ ಅವರು ಆರ್ಥೋ ನ್ಯೂರಾಲಜಿ ಸಮಸ್ಯೆ ಎದುರಿಸುತ್ತಿದ್ದರು. ಈ ನಡುವೆ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಕಳೆದ ಹತ್ತು ದಿನಗಳ ಹಿಂದೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ದಿನೇ ದಿನೇ ಅವರ ಆರೋಗ್ಯ ಮತ್ತಷ್ಟು ಹದಗೆಡಲಾರಂಭಿಸಿದ್ದು,ವೆಂಟಿಲೇಟರ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದರೀಗ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. 

ವೃತ್ತ ಐಎಎಸ್ ಅಧಿಕಾರಿ ಅರ್ಜುನ್ ರಾವ್ ಪತ್ನಿಯಾಗಿರುವ ಶೋಭಾ ನಾಯ್ಡು ಅವರು ಪದ್ಮಶ್ರೀ ಪುರಸ್ಕೃತರು ಹೌದು.

Follow Us:
Download App:
  • android
  • ios