ಬೋಲ್ಡ್ ಲವ್ ಸ್ಟೋರಿ ಮೂಲಕ ಅರ್ಜುನ್ ರೆಡ್ಡಿ ಹಾಗೂ RX 100 ಚಿತ್ರಗಳು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವು. ಈಗ ಅವುಗಳ ಬೆನ್ನಲ್ಲೇ ಮತ್ತೊಂದು ಸಿನಮಾ ತೆರೆ ಕಾಣುವ ಮೊದಲೇ, ತನ್ನ ಪೋಸ್ಟರ್ ಮೂಲಕ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಧೂಳೆಬ್ಬಿಸಿದೆ. 

ಪಂಚಲಿಂಗ ಬ್ರದರ್ಸ್ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ, ರಾಮರಣಧೀರ ನಿರ್ದೇಶನದ ರಾಯಲ್‌ಸೀಮಾ ಲವ್ ಸ್ಟೋರಿಯು ಶೀಘ್ರದಲ್ಲೇ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ನಾಳೆ[ಅ.07] ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಸಿನಿಮಾ ಪೋಸ್ಟರ್‌ನಲ್ಲಿ ನಾಯಕ ನಟ ಹಾಗೂ ನಟಿಯನ್ನು ಬಾತ್ ಟಬ್‌ನಲ್ಲಿ ಬೆತ್ತಲೆಯಾಗಿ ತೋರಿಸುವ ಮೂಲಕ  ನಿರ್ಮಾಪಕರು ಭರ್ಜರಿಯಾಗೇ ಪ್ರಚಾರ ಆರಂಭಿಸಿದ್ದಾರೆ. ನಿರ್ಮಾಪಕರ ನಿರೀಕ್ಷೆಯಂತೆಯೇ ಸಿನಿಮಾದ ಪೋಸ್ಟರ್ ಪ್ರೇಕ್ಷಕರಲ್ಲೂ ಭಾರೀ ಕುತೂಹಲ ಮೂಡಿಸಿದೆ. ಇದು ಅರ್ಜುನ್ ರೆಡ್ಡಿ ಹಾಗೂ RX 100 ಸಿನಿಮಾದ ಮುಂದುವರೆದ ಭಾಗದಂತೆ ಕಂಡು ಬರುತ್ತಿದೆ. 

ಸದ್ಯ ಪೋಸ್ಟರ್‌ನಿಂದಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಟೀಸರ್‌ಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದು, ಈ ಹಿಂದಿನ ಸಿನಿಮಾಗಳು ಸೃಷ್ಟಿಸಿರುವ ದಾಖಲೆಯನ್ನು ಇದು ಮುರಿಯಬಹುದೇ ಎಂಬುವುದು ಟೀಸರ್ ನೋಡಿದ ಬಳಿಕವಷ್ಟೇ ಅಂದಾಜಿಸಬಹುದಾಗಿದೆ. ವೆಂಕಟ್, ಹೃಷಾಲಿ ಹಾಗೂ ಪಾವನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ಬಿಡುಗಡೆಯಗಲಿದೆ.