ಸದ್ಗುರು ವಾಸುದೇವ್‌ರನ್ನು ತಾಳಕ್ಕೆ ಕುಣಿಸಿದ ರಣವೀರ್: ವಿಡಿಯೋ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 5:41 PM IST
Ranveer Singh's  Dance with Sadhguru Jaggi Vasudev
Highlights

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಎಂದರೆ ಯುವತಿಯರ ಕಿವಿ ನೆಟ್ಟಗಾಗುತ್ತದೆ. ರಣವೀರ್ ಸಿಂಗ್ ಸದಾ ತಮ್ಮ ತುಂಟಾಟಕ್ಕೆ ಫೆಮಸ್ಸು. ಬಾಲಿವುಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರ ನಿರೂಪಣೆ ಎಲ್ಲರನ್ನು ನಕ್ಕು ನಗಿಸುವಂತೆ ಮಾಡುತ್ತದೆ. ಅಂಥ ರನವೀರ್ ಇದೀಗ ಮತ್ತೊಂದು ಹೊಸ ಸಾಹಸವನ್ನು ಮಾಡಿದ್ದಾರೆ.

ಬೆಂಗಳೂರಿನ ಐಐಎಂ ಆಯೋಜಿಸಿದ್ದ ನಾಯಕತ್ವದ ಸಮಾವೇಶಕ್ಕೆ ಸದ್ಗುರು ಜಗ್ಗಿ ವಾಸುದೇವ್​ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಟ ರಣವೀರ್​ ಸಿಂಗ್​ ಅವರನ್ನೂ ಆಹ್ವಾನಿಸಲಾಗಿತ್ತು. ನದಿಗಳನ್ನು ಉಳಿಸಿ-ಕಾಪಾಡಿ ಎಂದು ಅಭಿಯಾನ ಮಾಡಿದ್ದ ವಾಸುದೇವ್ ಅವರ ಬಳಿ ನೃತ್ಯ ಮಾಡಿಸಿದ ರಣವೀರ್ ಭರಪೂರ ಮನರಂಜನೆ ನೀಡಿದ್ದಲ್ಲದೇ ಒಂದು ಸಂದೇಶವನ್ನು ನೀಡಿದರು.

ತಮ್ಮ ಸಾಮಾಜಿಕ ತಾಣದ ಗೋಡೆಯ ಮೇಲೆ ಜಗ್ಗಿ ವಾಸುದೇವ್ ಅವರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಟ್ರೆಂಡ್ ಆಗಿದೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮ್ ದೇವ್ ಮುತ್ತು ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದ್ದರು.

Happy Dance !!! @sadhguru 🕊

A post shared by Ranveer Singh (@ranveersingh) on Jul 21, 2018 at 12:37am PDT

loader