ಸೆನ್ಸೇಷನ್ ಸಿಂಗರ್ ರಾನು ಮಂಡಾಲ್ ಓವರ್ ಮೇಕಪ್ ಫೋಟೋ ಇತ್ತೀಚಿಗೆ ವೈರಲ್ ಆಗಿತ್ತು.  ಟ್ರೋಲಿಗರು ಸಿಕ್ಕಾಪಟ್ಟೆ ವೈರಲ್ ಮಾಡಿದ್ದರು.  ಈ ಫೋಟೋ ಬಗ್ಗೆ ಮೇಕಪ್ ಆರ್ಟಿಸ್ಟ್ ಸಂಧ್ಯಾ ಪ್ರತಿಕ್ರಿಯಿಸಿದ್ದಾರೆ.  ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಾವು ಮಾಡಿರುವ ಮೇಕಪ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

 

ಈ ಇಲ್ಲಿ ಒರಿಜಿನಲ್ ಹಾಗೂ ಫೇಕ್ ಫೋಟೋ ಎರಡನ್ನೂ ಗಮನಿಸಬಹುದು. ಎಲ್ಲಾ ಜೋಕ್‌ಗಳು, ಟ್ರೋಲ್‌ಗಳು ನಮ್ಮನ್ನು ನಗಿಸುತ್ತದೆ ನಿಜ. ಆದರೆ ಅದು ಇನ್ನೊಬ್ಬರ ಭಾವನೆಗಳನ್ನು ನೋಯಿಸುತ್ತದೆ. ಇದು ಸರಿಯಲ್ಲ.  ಈ ಫೋಟೋದಲ್ಲಿ ಒರಿಜಿನಲ್ ಹಾಗೂ ಫೇಕ್ ಫೋಟೋಗಳ ನಡುವಿನ ವ್ಯತ್ಯಾಸ ನಿಮಗರ್ಥವಾಗುತ್ತದೆ ಅಂದುಕೊಳ್ಳುತ್ತೇನೆ' ಎಂದು ಬರೆದಿದ್ದಾರೆ. 

ರಾನು ಮಂಡಾಲ್ ಇತ್ತೀಚಿಗೆ ಉತ್ತರ ಪ್ರದೇಶದ ಕಾನ್ಪುರದ ಬ್ಯೂಟಿ ಪಾರ್ಲರ್  ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದರು. ಆ ಫೋಟೋವನ್ನು ಕಿಡಿಗೇಡಿಗಳು ಟ್ರೋಲ್ ಮಾಡಿದ್ದರು.